ನವದೆಹಲಿ: ಕೊರೋನಾವೈರಸ್ ಹಿನ್ನಲೆಯಲ್ಲಿ ಹೆಚ್ಚ್ಚುತ್ತಿರುವ ಸಾವಿನ ಸಂಖ್ಯೆ ಹಿನ್ನಲೆಯಲ್ಲಿ ಡಿಸೆಂಬರ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಲ್ಲಿ ನಡೆಯಲಿರುವ ತನ್ನ 89 ನೇ ಸಾಮಾನ್ಯ ಸಭೆ (ಜಿಎ) ಅನ್ನು ಇಂಟರ್‌ಪೋಲ್ ಮುಂದೂಡಲು ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

ಎಲ್ಲಾ 194 ಸದಸ್ಯ ರಾಷ್ಟ್ರಗಳ ವಾರ್ಷಿಕ ಸಭೆಯಲ್ಲಿ ಭಯೋತ್ಪಾದನೆ, ಸಂಘಟಿತ ಅಪರಾಧಗಳು ಮತ್ತು ಕ್ರಿಮಿನಲ್ ನೆಟ್‌ವರ್ಕ್‌ಗಳ ಸಹಕಾರವನ್ನು ಪೋಲಿಸ್‌ನ ಇತರ ಅಂಶಗಳ ಬಗ್ಗೆ ಚರ್ಚಿಸುತ್ತಾರೆ.ಇಂಟರ್ಪೋಲ್ ನ ಕಾರ್ಯಕಾರಿ ಸಮಿತಿಯು ಈ ವರ್ಷ ವಿಶ್ವದ ಎಲ್ಲಿಯಾದರೂ 89 ನೇ ಸಾಮಾನ್ಯ ಸಭೆಯನ್ನು ಮುಂದೂಡುವುದು ಅನಿವಾರ್ಯ ತೀರ್ಮಾನಿಸಿತು.


ಭಾರತವನ್ನು ಎಲ್ಲಿ ತನಕ UNSC ಶಾಶ್ವತ ಸದಸ್ಯತ್ವದಿಂದ ದೂರವಿಡುವುದು?-ವಿಶ್ವಸಂಸ್ಥೆಯಲ್ಲಿ ಮೋದಿ ಪ್ರಶ್ನೆ


'ಕಾನೂನು, ತಾಂತ್ರಿಕ ಮತ್ತು ವ್ಯವಸ್ಥಾಪನಾ ಕಾರಣಗಳಿಂದಾಗಿ, ಪ್ರಸ್ತುತ ವರ್ಚುವಲ್ ಸಾಮಾನ್ಯ ಸಭೆಗೆ ಯಾವುದೇ ಕಾರ್ಯಸಾಧ್ಯವಾದ ಆಯ್ಕೆಗಳಿಲ್ಲ" ಎಂದು ಇಂಟರ್ಪೋಲ್ ಹೇಳಿಕೆಯಲ್ಲಿ ತಿಳಿಸಿದೆ.'ಕೋವಿಡ್ -19 ಸಾಂಕ್ರಾಮಿಕ ರೋಗವು ಪ್ರಸ್ತುತಪಡಿಸಿದ ಸಮಸ್ಯೆಗಳಿಗೆ ಪರಿಹಾರಗಳನ್ನು ಗುರುತಿಸಲು ಯುಎಇ ಅಧಿಕಾರಿಗಳು ಬಹಳ ಶ್ರಮಿಸಿದರು. ಆದಾಗ್ಯೂ, ದುರದೃಷ್ಟವಶಾತ್ ಜಿಎ ಯೋಜಿಸಿದಂತೆ ಮುಂದುವರಿಯಲು ಸಾಧ್ಯವಿಲ್ಲ ' ಎಂದು ಇಂಟರ್ಪೋಲ್ ನ ಪ್ರಧಾನ ಕಾರ್ಯದರ್ಶಿ ಜುರ್ಗೆನ್ ಸ್ಟಾಕ್ ಹೇಳಿದರು.


ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣದ ಮಧ್ಯೆ ಯುಎನ್ ಸಾಮಾನ್ಯ ಸಭೆಯಿಂದ ಹೊರನಡೆದ ಭಾರತ


ಈಗ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಇನ್ನೂ ಘೋಷಿಸಿಲ್ಲ ಎನ್ನಲಾಗಿದೆ, ಭಾರತವು 2022 ರಲ್ಲಿ ಇಂಟರ್ಪೋಲ್ 91 ನೇ ಜಿಎಗೆ ಆತಿಥ್ಯ ವಹಿಸಲಿದೆ.