School Teacher: ವಿದ್ಯಾರ್ಥಿಗಳಿಗೆ ತನ್ನ ನಗ್ನ ಫೋಟೋಗಳನ್ನು ಕಳುಹಿಸಿದ ಟೀಚರಮ್ಮ! ನಂತರ ಸ್ಕೂಲ್ನಲ್ಲಿ ನಡೆದಿದ್ದೇನು ಗೊತ್ತಾ?
Teacher Sent Intimate Photos To Students: ಅಮೆರಿಕಾದ ಶಾಲೆಯೊಂದರಲ್ಲಿ ಟೀಚರ್ ವೋಬ್ಬರು ಶಾಲೆಯ ವಿದ್ಯಾರ್ಥಿಗಳಿಗೆ ತನ್ನ ಅತ್ಯಂತ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಕಳುಹಿಸಿ ಭಾರಿ ಪೇಚಿಗೆ ಸಿಲುಕಿಕೊಂಡಿದ್ದಾಳೆ. ನಂತರ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ಶಾಲೆಯ ಪ್ರಾಂಶುಪಾಲರು ಕೂಡ ಆಕೆಯ ಪರವಾಗಿ ಕ್ಷಮೆಯಾಚಿಸಿದ್ದಾರೆ. ಇದಾದ ಬಳಿಕ ಟೀಚರಮ್ಮ ಲಿಖಿತ ರೂಪದಲ್ಲಿ ಕ್ಷಮೆಯಾಚಿಸಬೇಕಾದ ಸಂದರ್ಭ ಎದುರಾಗಿದೆ.
Intimate Photos Sent Mistakenly: ಶಾಲೆ ಅಥವಾ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಸಂಬಂಧದ ಅನೇಕ ಕಥೆಗಳು ಆಗಾಗ್ಗೆ ಮುನ್ನಲೆಗೆ ಬರುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ಇಂತಹುದೇ ವಿಚಿತ್ರ ಪ್ರಕರಣವೊಂದು ಅಮೆರಿಕದಿಂದ ವರದಿಯಾಗಿದೆ. ಶಾಲೆಯ ಶಿಕ್ಷಕಿಯೊಬ್ಬರು ತಮ್ಮ ಎಲ್ಲಾ ವಿದ್ಯಾರ್ಥಿಗಳಿಗೆ ಇಮೇಲ್ ಮೂಲಕ ಅತ್ಯಂತ ವೈಯಕ್ತಿಕ ಮತ್ತು ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನೂ ತಪ್ಪಾಗಿ ರವಾನಿಸಿದ್ದಾರೆ. ಇದಾದ ನಂತರ ಮರುದಿನ ಶಾಲೆಯಲ್ಲಿ ಭಾರಿ ಗಲಾಟೆ ನಡೆದು ಹೋಗಿದೆ.
'ನಿಸ್ಸಂಶಯವಾಗಿ ಬೆತ್ತಲೆ'
ವಾಸ್ತವವಾಗಿ, ಈ ಘಟನೆಯು ಅಮೆರಿಕದ ಮೇರಿಲ್ಯಾಂಡ್‌ನಿಂದ ವರದಿಯಾಗಿದೆ. ಡೈಲಿ ಸ್ಟಾರ್ ವರದಿ ಪ್ರಕಾರ, ಇಲ್ಲಿನ ಪ್ರಿನ್ಸ್ ಜಾರ್ಜ್ ಕೌಂಟಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಶಾಲೆಯಲ್ಲಿ ಕೆಲಸ ಮಾಡುವ ಶಿಕ್ಷಕಿಯೋರ್ವಳು ತನ್ನ ಕೆಲವು ಆಕ್ಷೇಪಾರ್ಹ ಫೋಟೋಗಳನ್ನು ಇಮೇಲ್ ಮೂಲಕ ವಿದ್ಯಾರ್ಥಿಗಳಿಗೆ ಕಳುಹಿಸಿದಾಗ ಇದೆಲ್ಲವೂ ಸಂಭವಿಸಿದೆ. ಫೋಟೋಗಳು 'ಸ್ಪಷ್ಟವಾಗಿ ನಗ್ನವಾಗಿವೆ' ಎಂದು ವರದಿ ಹೇಳಿದೆ. ಆದಾಗ್ಯೂ, ಇನ್ನೊಂದು ವರದಿಯಲ್ಲಿ ಕೆಲ ವಿಡಿಯೋಗಳು ಕೂಡ ಅವುಗಳಲ್ಲಿ ಶಾಮೀಲಾಗಿವೆ ಎಂದು ಹೇಳಲಾಗಿದೆ. ಆದರೆ ವೀಡಿಯೊಗಳನ್ನು ಪರಿಶೀಲಿಸಲಾಗಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ-Strange Wedding: ಐವರು ಹಳೆ ಪ್ರೇಮಿಗಳನ್ನು ಪತಿಯ ಪಕ್ಕಕ್ಕೆ ಕೂರಿಸಿಕೊಂಡು ವಿವಾಹ ಮಾಡಿಸಿಕೊಂಡ ವಧು
ಇ-ಮೇಲೆ ಮೂಲಕ ಫೋಟೋ ರವಾನಿಸಿದ ಶಿಕ್ಷಕಿ
ವರದಿಯಲ್ಲಿ ಶಿಕ್ಷಕಿಯ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಘಟನೆಯ ನಂತರ ಮರುದಿನ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಇತರ ಸಿಬ್ಬಂದಿ ಭಾರಿ ಆಕ್ರೋಶಗೊಂಡಿದ್ದರು ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಶಾಲೆಯ ಅನೇಕ ವಿದ್ಯಾರ್ಥಿಗಳು ತಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ಗಳಲ್ಲಿ ಕಳುಹಿಸಲಾದ ಚಿತ್ರಗಳನ್ನು ಇತರ ಶಿಕ್ಷಕರಿಗೆ ತೋರಿಸಿದ್ದರಿಂದ ಇದು ಸಂಭವಿಸಿದೆ. ಅಚ್ಚರಿ ಎಂದರೆ ಶಿಕ್ಷಕಿ ತನ್ನ ಶಾಲೆಯ ಅಧಿಕೃತ ಮೇಲ್ ಐಡಿ ಮೂಲಕ ಈ ಕೃತ್ಯ ಎಸಗಿರುವುದು ಸ್ಪಷ್ಟವಾಗಿ ಕಂಡುಬಂದಿದೆ.
ಇದನ್ನೂ ಓದಿ-Watch Video: ನೇಪಾಳ ವಿಮಾನ ದುರಂತ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
ಪ್ರಾಂಶುಪಾಲರ ಕ್ಷಮೆಯಾಚನೆ
ಈ ಈ ಕುರಿತು ಸಂಬಂಧಪಟ್ಟ ಶಿಕ್ಷಕಿಯನ್ನು ಪ್ರಶ್ನಿಸಲಾಗಿ. ಮೇಲ್ ಕಳುಹಿಸುವ ತರಾತುರಿಯಲ್ಲಿ ಈ ಚಿತ್ರಗಳು ವಿದ್ಯಾರ್ಥಿಗಳ ಪಾಲಾಗಿದೆ ಎಂದು ಹೇಳಿದ್ದಾರೆ. ಸದ್ಯ ಪ್ರಾಂಶುಪಾಲರ ಪರವಾಗಿ ಹಾಗೂ ಆರೋಪಿ ಶಿಕ್ಷಕಿಯ ಪರವಾಗಿ ಕ್ಷಮೆಯಾಚಿಸಲಾಗಿದೆ. ನಮ್ಮ ಬುದ್ಧಿವಂತ ಶಿಕ್ಷಕರೊಬ್ಬರಿಂದ ಈ ತಪ್ಪು ನಡೆದಿದೆ ಎಂದರು. ಈ ವಿಷಯವನ್ನು ಇಲ್ಲಿಗೆ ಮುಚ್ಚುವುದು ಉತ್ತಮ ಎಂದು ನಂತರ ಪ್ರಾಂಶುಪಾಲರು ಇತರರಿಗೆ ಸಮಜಾಯಿಸಿ ಹೇಳಿದ್ದಾರೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.