iPhone ಬಳಕೆದಾರರು ಇನ್ನು ಮುಂದೆ WhatsAppನಲ್ಲಿ ನೇರವಾಗಿ YouTube ವಿಡಿಯೋ ವೀಕ್ಷಿಸಬಹುದು!
ನವದೆಹಲಿ: ಒಂದು ವೇಳೆ ನಿಮ್ಮ ಸ್ನೇಹಿತ ವಾಟ್ಸಪ್ ಮೂಲಕ ಯೌಟ್ಯೂಬ್ ಮೂಲಕ ಯಾವುದಾರದು ಲಿಂಕ್ ಕಲಿಸಿದರೆ ಇನ್ನು ಮುಂದೆ ನೀವು ವಾಟ್ಸಪ್ ನಲ್ಲಿಯೇ ಯೌಟ್ಯೂಬ್ ವಿಡಿಯೋ ಲಿಂಕಗಳನ್ನೂ ನೇರವಾಗಿ ನೋಡಬಹುದು.
ಇನ್ನು ಮುಂದೆ ವಾಟ್ಸಪ್ ನಲ್ಲಿಯೇ ಆ ವಿಡಿಯೋಗಳನ್ನು ಸಣ್ಣ ವಿಂಡೋ ಮೂಲಕ ನೋಡಬಹುದು. ಆದರೆ ಈ ಹೊಸ ವೈಶಿಷ್ಟ ಆಯ್ಕೆಯು iOS ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ. ಸಧ್ಯದ ಮಾಹಿತಿ ಪ್ರಕಾರ ಈ ಆಯ್ಕೆಯು ಆಂಡ್ರಯಿಡ್ ಮತ್ತು ವಿಂಡೋಸ್ಗಳಿಗೆ ಈ ಆಯ್ಕೆ ಯಾವಾಗ ದೊರೆಯುತ್ತದೆ ಎಂದು ಎನ್ನುವ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ. ವಾಟ್ಸ್ ಆಪ್ ಬೇಟಾ ಪ್ರೋಗ್ರಾಮ್ ಮೂಲಕ ಆಪಲ್ ಆಪ್ ಸ್ಟೋರ್ ನಲ್ಲಿ ಇದು ಲಭ್ಯವಾಗಲಿದೆ.
ವಾಟ್ಸ್ ಅಪ್ ನಲ್ಲಿ ಯೌಟ್ಯೂಬ್ ಲಿಂಕ್ ನನ್ನು ನೋಡಲು ಕೇವಲ್ URL ನ್ನು ಹಂಚಿಕೊಂಡರಷ್ಟೇ ಸಾಕು ಎಂದು ಹೇಳಲಾಗಿದೆ.ಈ ಇಂದೇ ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗಿತ್ತು. ಆದರೆ ಈಗ ಆ ರೀತಿ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಲಾಗಿದೆ.