ಇರಾನ್ ನಲ್ಲಿ 50 ಬಿಲಿಯನ್ ಬ್ಯಾರೆಲ್ ಸಾಮರ್ಥ್ಯದ ಕಚ್ಚಾ ತೈಲ ಪ್ರದೇಶ ಪತ್ತೆ
ಇರಾನ್ ದೇಶದ ದಕ್ಷಿಣ ಭಾಗದಲ್ಲಿ 50 ಶತಕೋಟಿ ಬ್ಯಾರೆಲ್ ಸಾಮರ್ಥ್ಯದ ಕಚ್ಚಾ ತೈಲವನ್ನು ಹೊಂದಿರುವ ಹೊಸ ತೈಲ ಪ್ರದೇಶ ಪತ್ತೆಯಾಗಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಭಾನುವಾರ ಘೋಷಿಸಿದ್ದಾರೆ.
ನವದೆಹಲಿ: ಇರಾನ್ ದೇಶದ ದಕ್ಷಿಣ ಭಾಗದಲ್ಲಿ 50 ಶತಕೋಟಿ ಬ್ಯಾರೆಲ್ ಸಾಮರ್ಥ್ಯದ ಕಚ್ಚಾ ತೈಲವನ್ನು ಹೊಂದಿರುವ ಹೊಸ ತೈಲ ಪ್ರದೇಶ ಪತ್ತೆಯಾಗಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಭಾನುವಾರ ಘೋಷಿಸಿದ್ದಾರೆ.
ಕಳೆದ ವರ್ಷ ವಿಶ್ವ ಶಕ್ತಿಗಳೊಂದಿಗಿನ ಪರಮಾಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿದ ನಂತರ ಇರಾನ್ ಅಮೆರಿಕದ ನಿರ್ಬಂಧಗಳನ್ನು ಹತ್ತಿಕ್ಕುತ್ತಿರುವಾಗ ಹಸನ್ ರೂಹಾನಿ ಅವರ ಪ್ರಕಟಣೆ ಹೊರಬಿದ್ದಿದೆ. ರೂಹಾನಿ ಭಾನುವಾರ ಮರುಭೂಮಿ ನಗರ ಯಾಜ್ದ್ ಭಾಷಣದಲ್ಲಿ ಈ ಘೋಷಣೆ ಮಾಡಿದ್ದಾರೆ. ಈ ಕ್ಷೇತ್ರವು ಇರಾನ್‌ನ ದಕ್ಷಿಣ ಖುಜೆಸ್ತಾನ್ ಪ್ರಾಂತ್ಯದಲ್ಲಿದೆ, ಇದು ಅದರ ನಿರ್ಣಾಯಕ ತೈಲ ಉದ್ಯಮದ ನೆಲೆಯಾಗಿದೆ. ಸುಮಾರು 53 ಬಿಲಿಯನ್ ಬ್ಯಾರೆಲ್ ಕಚ್ಚಾ ತೈಲದಿಂದಾಗಿ ಇರಾನ್ ಈಗ 150 ಬಿಲಿಯನ್ ಕಚ್ಚಾ ತೈಲ ಸಂಗ್ರಹವನ್ನು ಹೊಂದಲಿದೆ ಎನ್ನಲಾಗಿದೆ.
'ನಾನು ಶ್ವೇತಭವನಕ್ಕೆ ಹೇಳುತ್ತಿದ್ದೇನೆ, ನೀವು ಇರಾನಿನ ತೈಲ ಮಾರಾಟಕ್ಕೆ ನಿಷೇಧ ಹೇರಿದ ದಿನಗಳಲ್ಲಿ, ದೇಶದ ಕಾರ್ಮಿಕರು ಮತ್ತು ಎಂಜಿನಿಯರ್‌ಗಳು ಸಹಾಯದಿಂದಾಗಿ 53 ಬಿಲಿಯನ್ ಬ್ಯಾರೆಲ್ ತೈಲವನ್ನು ಕಂಡುಹಿಡಿಯಲು ಸಾಧ್ಯವಾಯಿತು" ಎಂದು ರುಹಾನಿ ಹೇಳಿದ್ದಾರೆ.
ಇರಾನ್ ಪ್ರಸ್ತುತ ವಿಶ್ವದ ನಾಲ್ಕನೇ ಅತಿದೊಡ್ಡ ಕಚ್ಚಾ ತೈಲ ನಿಕ್ಷೇಪಗಳನ್ನು ಹೊಂದಿದೆ ಮತ್ತು ವಿಶ್ವದ ಎರಡನೇ ಅತಿದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪಗಳನ್ನು ಹೊಂದಿದೆ. ಇದು ಪರ್ಷಿಯನ್ ಕೊಲ್ಲಿಯಲ್ಲಿ ಬೃಹತ್ ಕಡಲಾಚೆಯ ಕ್ಷೇತ್ರವನ್ನು ಕತಾರ್‌ನೊಂದಿಗೆ ಹಂಚಿಕೊಳ್ಳುತ್ತದೆ. ಅಹ್ವಾಜ್‌ನಲ್ಲಿ 65 ಬಿಲಿಯನ್ ಬ್ಯಾರೆಲ್‌ಗಳನ್ನು ಒಳಗೊಂಡಿರುವ ನಂತರ ನೂತನ ಈ ತೈಲ ಕ್ಷೇತ್ರವು ಇರಾನ್‌ನ ಎರಡನೇ ಅತಿದೊಡ್ಡ ಕ್ಷೇತ್ರವಾಗಬಹುದು ಎನ್ನಲಾಗಿದೆ. ಈ ಕ್ಷೇತ್ರವು 2,400 ಚದರ ಕಿಲೋಮೀಟರ್ (925 ಚದರ ಮೈಲಿ), ಸುಮಾರು 80 ಮೀಟರ್ (260 ಅಡಿ) ಆಳವನ್ನು ಹೊಂದಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.