ಇರಾನಿನ ಪ್ರಯಾಣಿಕ ವಿಮಾನವೊಂದು ದೇಶದ ಝಾಗ್ರೋಸ್ ಪರ್ವತಗಳಲ್ಲಿ ಭಾನುವಾರ ಪತನಗೊಂಡಿದ್ದು, ಈ ಅಪಘಾತದಲ್ಲಿ ವಿಮಾನದಲ್ಲಿದ್ದ 66 ಪ್ರಯಾಣಿಕರೂ ಮೃತಪಟ್ಟಿದ್ದಾರೆ ಎಂದು  ಇರಾನ್ಸ್ ಅಸ್ಮನ್ ಏರ್ಲೈನ್ಸ್ ವಕ್ತಾರರು ತಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಟೆಹ್ರಾನ್ ನಿಂದ ಯಾಸೌಜ್ಗೆ ಹೋಗುವ ವಿಮಾನವು ಕೇಂದ್ರ ಇರಾನಿನ ದಕ್ಷಿಣ ಪ್ರಾಂತ್ಯದ ಇಸ್ಫಹಾನ್'ನಲ್ಲಿ ಪತನಗೊಂಡಿದೆ ಎಂದು ಇರಾನಿನ ತುರ್ತು ಸೇವೆಯು ಖಚಿತಪಡಿಸಿದೆ.


"ಈ ವಿಮಾನವು ಸೆಮಿರಾಮ್ ಪ್ರದೇಶದಲ್ಲಿ ಅಪ್ಪಳಿಸಿದ್ದು, ಎಲ್ಲಾ ತುರ್ತುಪರಿಸ್ಥಿತಿ ಸೇವೆಗಳೂ ಜಾಗೃತವಾಗಿವೆ. ಈ ವಿಮಾನದಲ್ಲಿ 50 ರಿಂದ 60 ಪ್ರಯಾಣಿಕರಿದ್ದರು. ಆದರೆ, ವಿಮಾನ ಅಪಘಾತಕ್ಕೆ ಕಾರಣವೇನು ಎಂಬುದು ಇರುವರೆಗೂ ತಿಳಿದುಬಂದಿಲ್ಲ" ಎಂದು ಪಿರ್ ಹೊಸೇನ್ ಕೂಲಿವಂಡ್ ಅವರು ಫಾರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. 


ಅಸ್ಮಾನ್ ಏರ್ಲೈನ್ಸ್ನ ಎಟಿಆರ್ ವಿಮಾನವು 60 ವಿಮಾನ ಪ್ರಯಾಣಿಕರು ಮತ್ತು ಸುಮಾರು ಆರು ಮಂದಿ ಸಿಬ್ಬಂದಿಯೊಂದಿಗೆ ಎಟಿಆರ್ ವಿಮಾನವು ರಾಡಾರ್ನಿಂದ ಬೆಳಗ್ಗೆ ಕಣ್ಮರೆಯಾಯಿತು ಎಂದು ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿ ನೀತಿ ಕಮಿಷನ್ ಮುಖ್ಯಸ್ಥ ಅಲಾದಿನ್ ಬೋರುಜೆಡಿ ಅರೆ ಅಧಿಕೃತ ಐಎಸ್ಎನ್ಎ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.


"ಆ ಪ್ರದೇಶವು ಪರ್ವತಮಯವಾದ ಕಾರಣದಿಂದಾಗಿ, ಆಂಬುಲೆನ್ಸ್ಗಳನ್ನು ಕಳುಹಿಸಲು ಸಾಧ್ಯವಾಗಿಲ್ಲ. ಹಾಗಾಗಿ ರಕ್ಷಣಾ ಕಾರ್ಯಗಳು ವಿಳಂಬವಾಗಿದೆ. ಆದರೆ ಅಪಘಾತ ಸ್ಥಳಕ್ಕೆ ಹೆಲಿಕಾಪ್ಟರ್ ಅನ್ನು ಕಳುಹಿಸಲಾಗಿದೆ" ಎಂದು ರಾಷ್ಟ್ರೀಯ ತುರ್ತು ಸೇವೆಗಳ ವಕ್ತಾರ ಮೊಜ್ತಾಬಾ ಖಲೆಡಿ ಅವರು ಐಎಸ್ಎನ್ಎ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.