ಕಾಬೂಲ್ ನಗರದಲ್ಲಿನ ಸಿಖ್ ಗುರುದ್ವಾರದ ಮೇಲೆ ನಡೆದ ದಾಳಿಯ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಇದು ಪ್ರವಾದಿ ಮಹಮ್ಮದ್ ಅವರನ್ನು ಅವಮಾನಿಸಿದ್ದಕ್ಕೆ ಪ್ರತಿಕಾರ ಎಂದು ಉಗ್ರ ಸಂಘಟನೆ ಹೇಳಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾತ್ರೋ ರಾತ್ರಿ ರುದ್ರಭೂಮಿಯಲ್ಲಿದ್ದ ಹೆಣಗಳೇ ಮಾಯ! ಶವಗಳ ಮೇಲೆ ತಲೆ ಎತ್ತಿದ ಪಾಲಿಕೆ ಸೌಧ?


ಭಯೋತ್ಪಾದಕ ಗುಂಪಿನ ಸ್ಥಳೀಯ ಅಂಗಸಂಸ್ಥೆಯು ಭಾರತದ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಮಾಜಿ ಸದಸ್ಯರು ಪ್ರವಾದಿಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಳನ್ನು ಉಲ್ಲೇಖಿಸುತ್ತಿದೆ. ಇದು ಗಲ್ಫ್ ಮತ್ತು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಿಂದ ವ್ಯಾಪಕ ಖಂಡನೆಗೆ ಆಹ್ವಾನ ನೀಡಿತು. ಭಾರತ ಮತ್ತು ವಿದೇಶಗಳಲ್ಲಿ ಪ್ರತಿಭಟನೆಗಳನ್ನು ಹುಟ್ಟುಹಾಕಿತು.


ತನ್ನ ಪ್ರಚಾರ ಸೈಟ್‌ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ, ಶನಿವಾರದ ದಾಳಿಯು ಹಿಂದೂಗಳು ಮತ್ತು ಸಿಖ್ಖರನ್ನು ಗುರಿಯಾಗಿಸಿಕೊಂಡಿದೆ ಎಂದು ಐಸಿಸ್ ಹೇಳಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.


ISKP ತನ್ನ ಪ್ರಚಾರ ತಾಣದಲ್ಲಿ ಹಿಂದೂಗಳು ಮತ್ತು ಸಿಖ್ಖರ ಮೇಲಿನ ದಾಳಿಯ ಎಚ್ಚರಿಕೆಯ ವಿಡಿಯೋವನ್ನು ಬಿಡುಗಡೆ ಮಾಡಿದ ಕೆಲವು ದಿನಗಳ ನಂತರ ಈ ದಾಳಿ ನಡೆದಿದೆ. ಶನಿವಾರದ ದಾಳಿಯಲ್ಲಿ, ಒಬ್ಬ ಸಿಖ್ ವ್ಯಕ್ತಿ ಮತ್ತು ತಾಲಿಬಾನ್‌ನ ಇಸ್ಲಾಮಿಕ್ ಎಮಿರೇಟ್ ಆರ್ಮಿಯ ಒಬ್ಬ ಸೈನಿಕ ಕೊಲ್ಲಲ್ಪಟ್ಟರು.


ಇದನ್ನೂ ಓದಿ: Business Ideas: ಕೇವಲ 2 ಸಾವಿರ ಖರ್ಚು ಮಾಡಿ ಈ ಗಿಡ ನೆಡಿ, 4 ಲಕ್ಷದವರೆಗೆ ಗಳಿಸಿ!


ತಾಲಿಬಾನ್‌ನ ಆಂತರಿಕ ಸಚಿವಾಲಯದ ವಕ್ತಾರರು, ಭಯೋತ್ಪಾದಕರು ಸ್ಫೋಟಕ ತುಂಬಿದ ವಾಹನದೊಂದಿಗೆ ಗುರುದ್ವಾರವನ್ನು ಗುರಿಯಾಗಿಸಲು ಪ್ರಯತ್ನಿಸಿದರು, ಆದರೆ ಅದು ಅಲ್ಲಿಗೆ ತಲುಪುವ ಮೊದಲೇ ವಿಫಲಗೊಳಿಸಲಾಯಿತು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.