ಇಮ್ರಾನ್ ಖಾನ್ ಗೆ ರಕ್ಷಣಾ ಪ್ರೋಟೋಕಾಲ್ ಜಾರಿ
ಇಸ್ಲಾಮಾಬಾದ್: ಇಸ್ಲಾಮಾಬಾದ್ ಆಡಳಿತ ಈಗಾಗಲೇ 2018 ರ ಸಾರ್ವತ್ರಿಕ ಚುನಾವಣೆಗಳ ಅಂತಿಮ ಫಲಿತಾಂಶ ಘೋಷಣೆಗೂ ಮೊದಲು ಪಾಕಿಸ್ತಾನದ ತೆಹ್ರಿಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಗೆ ಸರ್ಕಾರವು ಪ್ರೋಟೋಕಾಲ್ ರಕ್ಷಣೆ ಯನ್ನು ಒದಗಿಸಿದೆ.
ಸಾಮಾ ಟಿವಿ ಪ್ರಕಾರ, ಇಸ್ಲಾಮಾಬಾದ್ ನ್ ಇಮ್ರಾನ್ನ ಬನಿ ಗಾಲಾ ನಿವಾಸದ ಹೊರಗಡೆ ಸುಮಾರು 30 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.ಇಮ್ರಾನ್ ಖಾನ್ ಅವರು ಇಮ್ರಾನ್ ಎನ್ಎ 53 (ಇಸ್ಲಾಮಾಬಾದ್ -2) ಕ್ಷೇತ್ರದಲ್ಲಿ ಮಾಜಿ ಪಾಕಿಸ್ತಾನದ ಪ್ರಧಾನಮಂತ್ರಿ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ನ (ಪಿಎಂಎಲ್-ಎನ್) ಶಾಹಿದ್ ಖಾಕನ್ ಅಬ್ಬಾಸಿ ಅವರನ್ನು ಸೋಲಿಸಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಶರೀಫ್ ಅವರ ಸಹೋದರ ಪಿಎಂಎಲ್-ಎನ್ ಅಧ್ಯಕ್ಷ ಶೇಹಬಾದ್ ಶರೀಫ್ ಎನ್ಐ -192 (ಡೆರಾ ಘಾಜಿ ಖಾನ್ -4) ಕ್ಷೇತ್ರದಲ್ಲಿ ಪಿಟಿಐ ಸರ್ದಾರ್ ಮೊಹಮ್ಮದ್ ಖಾನ್ ಲೆಘಾರಿ ಅವರಿಂದ ಸೋಲನ್ನು ಅನುಭವಿಸಿದ್ದಾರೆ.
ಇನ್ನೊಂದೆಡೆಗೆ NA-124 (ಲಾಹೋರ್-II) ಕ್ಷೇತ್ರದಲ್ಲಿ ಶಹೀಬಾಜ್ ಪಿಟಿಐ ಅಭ್ಯರ್ಥಿ ಮುಹಮ್ಮದ್ ನೌಮನ್ ಖೈಸರ್ ಅವರನ್ನು 65,000 ಮತಗಳಿಂದ ಸೋಲಿಸಿದರು.ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಾಲ್ ಭುಟ್ಟೋ ಅವರು ಪಿಟಿಐ ಅಭ್ಯರ್ಥಿ ಜುನೈದ್ ಅಕ್ಬರ್ಗೆ ಸುಮಾರು 38,000 ಮತಗಳಿಂದ ಸೋಲನುಭವಿಸಿದ್ದಾರೆ ಎಂದು ಜಿಯೋ ನ್ಯೂಸ್ ತಿಳಿಸಿದೆ.