Palestinian death toll exceeds : ಅಕ್ಟೋಬರ್ ನಲ್ಲಿ ಪ್ರಾರಂಭವಾದ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಪ್ಯಾಲೆಸ್ಟೀನ್ ಜನರ ಸಂಖ್ಯೆಯು ಮೂವತ್ತು ಸಾವಿರ ಗಡಿ ದಾಟಿದೆ ಎಂದು ಗಾಜಾ ಆರೋಗ್ಯ ಸಚಿವಾಲಯವು ಗುರುವಾರ ತಿಳಿಸಿದೆ.


COMMERCIAL BREAK
SCROLL TO CONTINUE READING

ಇಸ್ರೇಲ್ ಸೇನೆಯು ಹಮಾಸ್ ನಡೆಸಿದ ದಾಳಿಗೆ ಪ್ರತಿಯಾಗಿ ತನ್ನ ಮೊದಲ ಗುರಿಯಾಗಿ ಕಾಜನಗರ ಮತ್ತು ಗಾಜಾ ಪಟ್ಟಿಯ ಉತ್ತರ ಭಾಗವನ್ನು ಆಯ್ಕೆ ಮಾಡಿಕೊಂಡು ಈ ಪ್ರದೇಶದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದೆ.


ಇದನ್ನು ಓದಿ :  ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.60ರಷ್ಟು ಕನ್ನಡ ನಾಮಫಲಕ ಅಳವಡಿಸಲು 2 ವಾರಗಳ ಕಾಲ ವಿಸ್ತರಣೆ


ಈ ಕಾರಣದಿಂದ ಗಾಜಾ ಪಟ್ಟಿಯ ಇತರ ಪ್ರದೇಶಗಳ ಜೊತೆಗಿನ ಸಂಪರ್ಕವನ್ನು ಕಳೆದುಕೊಂಡಿದೆ ಮತ್ತು ಗಾಜಾನಗರದ ಅಲ್ ಶಿಫಾ ಆಸ್ಪತ್ರೆಯಲ್ಲಿ ಅಪೌಷ್ಟಿಕತೆ, ನಿರ್ಜಲೀಕರಣ ಹಾಗೂ ಆಹಾರ ಕೊರತೆಯಿಂದಾಗಿ ಮಕ್ಕಳು ಮೃತಪಟ್ಟಿದ್ದಾರೆ


ಗಾಜಾ ಪಟ್ಟಿಯಲ್ಲಿ ಬುಧವಾರ ರಾತ್ರಿ ನಡೆದ ದಾಳಿಗಳಲ್ಲಿ ಕನಿಷ್ಠ 70 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಗಾಜಾದಲ್ಲಿ ಆಗುತ್ತಿರುವ ಸಾವುಗಳನ್ನು ತಡೆಯಲು ಅಂತರಾಷ್ಟ್ರೀಯ ಸಂಘಟನೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಸಚಿವಾಲಯದ ಭಕ್ತರ ಅಶ್ರಫ್ ಅಲ್ ಕುದ್ರಾ ಮನವಿ ಮಾಡಿದ್ದಾರೆ


ಇದನ್ನು ಓದಿ : Teaser : ತಾಪ್ಸಿ ಪನ್ನು ನಟನೆಯ 'ಫಿರ್ ಆಯಿ ಹಸಿನ್ ದಿಲ್ರುಬಾ' : ಟೀಸರ್ ಬಿಡುಗಡೆ


ರಂಜಾನ್ ಮಾಸ ಶುರುವಾಗುವ ಮೊದಲೇ ಕದನ ವಿರಾಮ ಘೋಷಣೆ ಸಾಧ್ಯವಾಗಬಹುದು ಮತ್ತು ಇಸ್ರೇಲ್ ಮತ್ತು ಹಮಾಸ್ ನಡುವೆ ಕನಿಷ್ಠ ಆರು ವಾರಗಳ ಕದನ ವಿರಾಮ ಜಾರಿಗೆ ತರಲು ಈಜಿಪ್ಟ್ , ಕತಾಲ್ ಮತ್ತು ಅಮೆರಿಕಾದ ಮಧ್ಯಸ್ಥಿಕೆದಾರರು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.