Video : ಇಸ್ತಾನ್‌ಬುಲ್`ನಲ್ಲಿ ಆತ್ಮಾಹುತಿ ಬಾಂಬ್ ದಾಳಿ, ನಾಲ್ವರ ಸಾವು, 17 ಕ್ಕೂ ಹೆಚ್ಚು ಜನ ಗಾಯ!
ಇಸ್ತಾನ್‌ಬುಲ್‌ನ ಮಧ್ಯದಲ್ಲಿರುವ ಜನನಿಬಿಡ ಪ್ರದೇಶದಲ್ಲಿ ಭಾನುವಾರ ಭಾರಿ ಸ್ಫೋಟ ಸಂಭವಿಸಿದೆ, ವರದಿಗಳ ಪ್ರಕಾರ, ಈ ಸ್ಫೋಟದಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ. ಹಾಗೆ, 11 ಮಂದಿ ಗಾಯಗೊಂಡಿದ್ದಾರೆ.
Istanbul Explosion : ಟರ್ಕಿಯ ರಾಜಧಾನಿ ಇಸ್ತಾನ್‌ಬುಲ್‌ನಲ್ಲಿ ಭಾರಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಇಸ್ತಾನ್‌ಬುಲ್‌ನ ಮಧ್ಯದಲ್ಲಿರುವ ಜನನಿಬಿಡ ಪ್ರದೇಶದಲ್ಲಿ ಭಾನುವಾರ ಭಾರಿ ಸ್ಫೋಟ ಸಂಭವಿಸಿದೆ, ವರದಿಗಳ ಪ್ರಕಾರ, ಈ ಸ್ಫೋಟದಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ. ಹಾಗೆ, 11 ಮಂದಿ ಗಾಯಗೊಂಡಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ಬೆಂಕಿ ಉರಿಯುತ್ತಿರುವ ದೃಶ್ಯ ಕಾಣಬಹುದು. ವಿಡಿಯೋದಲ್ಲಿ ಸಾರ್ವಜನಿಕರು ಗಾಬರಿಗೊಂಡು ಓಡಿ ಹೋಗುತ್ತಿರುವುದನ್ನ ಕಾಣಬಹುದು. ಈ ಸ್ಫೋಟವು ಇಂದು ಸಂಜೆ 4:00 ಗಂಟೆಗೆ (1300 GMT) ಸಂಭವಿಸಿದೆ.
ಇದನ್ನೂ ಓದಿ : World Population: ಮುಂದಿನ 2 ದಿನಗಳಲ್ಲಿ 800 ಕೋಟಿ ತಲುಪಲಿದೆ ವಿಶ್ವದ ಜನಸಂಖ್ಯೆ!
ಭಾರಿ ಆತ್ಮಾಹುತಿ ಬಾಂಬ್ ದಾಳಿ
ಟರ್ಕಿಶ್ ಬ್ರಾಡ್‌ಕಾಸ್ಟರ್ TRT ಮತ್ತು ಇತರ ಮಾಧ್ಯಮ ವರದಿಗಳು ಇಸ್ತಾನ್‌ಬುಲ್‌ನ ಬೆಯೊಗ್ಲು ಜಿಲ್ಲೆಯ ಜನಪ್ರಿಯ ಇಸ್ತಿಕ್‌ಲಾಲ್ ಸ್ಟ್ರೀಟ್‌ನಲ್ಲಿ ಆಂಬ್ಯುಲೆನ್ಸ್‌ಗಳು ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ಹೋಗುತ್ತಿರುವುದನ್ನು ನೋಡಬಹುದು. ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಸರ್ಕಾರಿ ಸ್ವಾಮ್ಯದ ಅನಡೋಲು ಏಜೆನ್ಸಿ ತಿಳಿಸಿದೆ.
ಅವೆನ್ಯೂ ಜನನಿಬಿಡ ಪ್ರದೇಶ ರಸ್ತೆಯಾಗಿದ್ದು, ಪ್ರವಾಸಿಗರು ಮತ್ತು ಸ್ಥಳೀಯರಿಗೆ ಈ ಸ್ಥಳ ಜನಪ್ರಿಯವಾಗಿದೆ. ಇಲ್ಲಿ ಅನೇಕ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳೂ ಇವೆ. ಭಾನುವಾರವಾದ್ದರಿಂದ ಸ್ಫೋಟದ ವೇಳೆ ಜನಸಾಗರವೇ ನೆರೆದಿತ್ತು. ಸ್ಥಳೀಯ ಕಾಲಮಾನ ಸಂಜೆ 4:20ರ ಸುಮಾರಿಗೆ ಸ್ಫೋಟ ಸಂಭವಿಸಿದೆ. 2015-2016ರಲ್ಲಿ ಇಸ್ತಾನ್‌ಬುಲ್ ಅನ್ನು ಗುರಿಯಾಗಿಸಿಕೊಂಡು ನಡೆದ ಸರಣಿ ದಾಳಿಯ ಸಂದರ್ಭದಲ್ಲಿ ಇಸ್ಟಿಕ್‌ಲಾಲ್ ಅವೆನ್ಯೂ ಪರಿಣಾಮ ಬೀರಿತು ಎಂದು ಇಸ್ಲಾಮಿಕ್ ಸ್ಟೇಟ್ ಗುಂಪು ಹೇಳಿಕೊಂಡಿದೆ.
ಇದನ್ನೂ ಓದಿ : ಯುಎಸ್ ಕರೆನ್ಸಿ ಮಾನಿಟರಿಂಗ್ ಪಟ್ಟಿಯಿಂದ ಭಾರತವನ್ನು ಅಮೆರಿಕಾ ತೆಗೆದು ಹಾಕಿದ್ದೇಕೆ...!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.