ನವದೆಹಲಿ: Jack Ma's Alibaba Group Fined - ಚೀನಾದ ಖ್ಯಾತ ಉದ್ಯಮಿ ಜ್ಯಾಕ್ ಮಾ (Jack Ma) ಹಿಂದೆ ಚೀನಾ ರಾಷ್ಟ್ರಪತಿ ಶಿ ಜಿಂಪಿಂಗ್ (Xi Jinping) ಕೈ ತೊಳೆದು ಬಿದ್ದಿದ್ದಾರೆ ಎಂಬಂತೆ ಭಾಸವಾಗುತ್ತಿದೆ. ಏಕೆಂದರೆ, ಹಲವು ವಿಧದ ನಿರ್ಬಂಧನೆಗಳ ಬಳಿಕ ಇದೀಗ ಚೀನಾ ಸರ್ಕಾರ (China Government) ಜ್ಯಾಕ್ ಮಾ ಅವರ ಕಂಪನಿಯಾಗಿರುವ ಅಲಿಬಾಬಾ (Alibaba Group) ವಿರುದ್ಧ ಏಕಾಧಿಕಾರ ವಿರೋಧಿ ನಿಯಮಗಳ (Anti-Monopoly Rules) ಉಲ್ಲಂಘನೆಯ ಪ್ರಕರಣದಲ್ಲಿ ದೊಡ್ಡ ಕ್ರಮವನ್ನೇ ಕೈಗೊಂಡಿದೆ. ಚೀನಾದ ದಿಗ್ಗಜ ಕಂಪನಿಯಾಗಿರುವ ಅಲಿಬಾಬಾ ಗ್ರೂಪ್ ಗೆ ಅಲ್ಲಿನ ಸರ್ಕಾರ 2.78 ಬಿಲಿಯನ್ ಡಾಲರ್ ದಂಡ ವಿಧಿಸಿದೆ. ಇದು ಅಲಿಬಾಬಾ ಗ್ರೂಪ್ ವಿರುದ್ದ ಕೈಗೊಂಡ ಇದುವರೆಗಿನ ಅತಿ ದೊಡ್ಡ ಕ್ರಮ ಎಂದೇ ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಕಂಪನಿಯ ಆದಾಯದ ಶೇ.4 ರಷ್ಟು ದಂಡ
ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಅಲಿಬಾಬಾ ಗ್ರೂಪ್ ಕೇವಲ ಆಂಟಿ ಮೊನೋಪಾಲಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ನಿಯಂತ್ರಕರು ಹೇಳಿದ್ದಾರೆ. ಇದಲ್ಲದೆ ಮಾರುಕಟ್ಟೆಯಲ್ಲಿ ತನ್ನ ಬ್ರಾಂಡ್ ನ ದುರುಪಯೋಗ ಕೂಡ ಮಾಡಿದೆ. ಹೀಗಾಗಿ ಕಂಪನಿಯ ವಿರುದ್ಧ 18 ಬಿಲಿಯನ್ ಯುವಾನ್ (2.78 ಬಿಲಿಯನ್ ಡಾಲರ್) ದಂಡ ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ದಂಡದ ಈ ರಾಶಿ ಅಲಿಬಾಬಾ ಸಮೂಹ 2019 ರಲ್ಲಿ ಮಾಡಿರುವ  ಒಟ್ಟು ಗಳಿಕೆಯ ಶೇ. 4 ರಷ್ಟಕ್ಕೆ ಸಮನಾಗಿದೆ. ಕಳೆದ ವರ್ಷ ಸಮೂಹದ ಮುಖ್ಯಸ್ಥ ಜ್ಯಾಕ್ ಮಾ ಸರ್ಕಾರದ ನೀತಿಗಳನ್ನು ಬಹಿರಂಗವಾಗಿ ಟೀಕಿಸಿದ್ದರು. ಬಳಿಕ ಅಲ್ಲಿನ ಸರ್ಕಾರ ಅವರನ್ನು ನಿರಂತರವಾಗಿ ಗುರಿಯಾಗಿಸುತ್ತಿದೆ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನೂ ಓದಿ- Jack Ma Missing: China ಕೋಟ್ಯಾಧೀಶ Jack Ma ನಾಪತ್ತೆ, ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದರಂತೆ


ಕಳೆದ ವರ್ಷ ಡಿಸೆಂಬರ್ ತಿಂಗಳಿನಿಂದ ಅಲಿಬಾಬಾ ಸಂಕಷ್ಟದಲ್ಲಿ ಏರಿಕೆಯಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಚೀನಾ ಸರ್ಕಾರ ಅಲಿಬಾಬಾ ಗ್ರೂಪ್ ವತಿಯಿಂದ ಮೊನೋಪಾಲಿ ಅಂದರೆ ಏಕಾಧಿಕಾರ ಕಾಯಿದೆಯ ದುರುಪಯೋಗದ ಕುರಿತು ತನಿಖೆಗೆ ಆದೇಶ ನೀಡಿತ್ತು. ಮಾರುಕಟ್ಟೆ ನಿಯಂತ್ರಣದ ರಾಜ್ಯ ಆಡಳಿತ ಅಂದರೆ SAMR ಪ್ರಕಾರ ಅಲಿಬಾಬಾ ವಿರುದ್ಧ   'ಎರಡರಲ್ಲಿ ಒಂದನ್ನು ಆಯ್ಕೆ ಮಾಡುವ' ಅಭ್ಯಾಸದಲ್ಲಿ ಅಲಿಬಾಬಾ ವಿರುದ್ಧ ತನಿಖೆಯನ್ನು ಪ್ರಾರಂಭಿಸಲಾಯಿತು. ಇದು ಜ್ಯಾಕ್-ಮಾ ಅವರ ಇ-ಕಾಮರ್ಸ್ ಕಂಪನಿ ಮತ್ತು ಫಿನ್ಟೆಕ್ ಸಾಮ್ರಾಜ್ಯಕ್ಕೆ ಭಾರಿ ದೊಡ್ಡ ಹಿನ್ನೆಡೆ ಎಂದೇ ಬಿಂಬಿತಗೊಂಡಿತ್ತು.


ಇದನ್ನೂ ಓದಿ- ಎಲ್ಲರೂ ಕರೋನಾ ಸಂಕಷ್ಟದಲ್ಲಿದ್ದಾಗ ಚೀನಾ ಬಿಲಿಯನೇರ್‌ಗಳ ಸಂಪತ್ತು ಏಕೆ ಹೆಚ್ಚುತ್ತಲೇ ಇತ್ತು?


ಈ ಕುರಿತು ಕಳೆದ ಡಿಸೆಂಬರ್ ನಲ್ಲಿ ವರದಿ ಮಾಡಿದ್ದ ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಸಿನ್ಹುವಾ, ಅಲಿಬಾಬಾ ಸಮೂಹ ಒಂದು ವಿಶೇಷ ಡೀಲ್ ಅಗ್ರಿಮೆಂಟ್ ಗಾಗಿ ಏಕಾಧಿಕಾರದ ದುರುಪಯೋಗ ಮಾಡಿಕೊಂಡಿದೆ ಎಂದು ನಿಯಂತ್ರಕರು ಆರೋಪಿಸಿದ್ದಾರೆ ಎಂದಿತ್ತು. ಅಷ್ಟೇ ಅಲ್ಲ ಮುಂಬರುವ ದಿನಗಳಲ್ಲಿ, ಜ್ಯಾಕ್ ಮಾ(Jack Ma) ಕಂಪನಿಯ ಆಂಟ್ ಗ್ರೂಪ್‌ಗೆ ನೋಟಿಸ್ ಕಳುಹಿಸಲಾಗುವುದು ಎಂದು ನಿಯಂತ್ರಕರು ಹೇಳಿದ್ದರು.  ಕಳೆದ ತಿಂಗಳು ಮಾತ್ರ, ಚೀನಾ ಸರ್ಕಾರ ಆಂಟ್ ಗ್ರೂಪ್‌ನ 37 ಬಿಲಿಯನ್ ಡಾಲರ್ ಮೊತ್ತದ IPO ಅನ್ನು ನಾಟಕೀಯವಾಗಿ ತಿರಸ್ಕರಿಸಿದೆ  ಎಂಬುದು ಕೂಡ ಇಲ್ಲಿ ಉಲ್ಲೇಖನೀಯ.


ಇದನ್ನೂ ಓದಿ- ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪನಿ ಅಲಿಬಾಬಾ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿದ ಜ್ಯಾಕ್ ಮಾ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.