ನವದೆಹಲಿ: ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪನಿಯಾದ ಅಲಿಬಾಬಾ ಗ್ರೂಪ್ ಅನ್ನು ಸ್ಥಾಪಿಸಿದ ಜ್ಯಾಕ್ ಮಾ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಗಿಳಿದಿದ್ದಾರೆ.


COMMERCIAL BREAK
SCROLL TO CONTINUE READING

ಅಮೇರಿಕಾ ಮತ್ತು ಚೀನಾದ ಮಧ್ಯ ನಡೆಯುತ್ತಿರುವ ವ್ಯಾಪಾರ ಯುದ್ದದ ಹಿನ್ನಲೆಯಲ್ಲಿ ಈಗ ಉದ್ಯಮ ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಜ್ಯಾಕ್ ಮಾ ಅಧ್ಯಕ್ಷ ಹುದ್ದೆಯಿಂದ ತ್ಯಜಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.


ಒಂದು ವರ್ಷದ ಹಿಂದೆ ಘೋಷಿಸಿದ ಉತ್ತರಾಧಿಕಾರದ ಭಾಗವಾಗಿ ಮಾ ಮಂಗಳವಾರ ಕೆಳಗಿಳಿದರು. ಕಂಪನಿಯ ಬಹುಪಾಲು ನಿರ್ದೇಶಕರ ಮಂಡಳಿಗೆ ನಾಮನಿರ್ದೇಶನ ಮಾಡುವ ಹಕ್ಕನ್ನು ಹೊಂದಿರುವ 36 ಜನರ ಗುಂಪಿನ ಅಲಿಬಾಬಾ ಪಾಲುದಾರಿಕೆಯ ಸದಸ್ಯರಾಗಿ ಅವರು ಮುಂದುವರಿಯಲಿದ್ದಾರೆ ಎನ್ನಲಾಗಿದೆ.


ಜ್ಯಾಕ್ ಮಾ ಚೀನೀ ರಫ್ತುದಾರರನ್ನು ಅಮೆರಿಕನ್ ಚಿಲ್ಲರೆ ವ್ಯಾಪಾರಿಗಳೊಂದಿಗೆ ಸಂಪರ್ಕಿಸಲು 1999 ರಲ್ಲಿ ಅಲಿಬಾಬಾವನ್ನು ಸ್ಥಾಪಿಸಿದರು. ಈಗ ಕಂಪನಿಯು ಚೀನಾದ ಬೆಳೆಯುತ್ತಿರುವ ಗ್ರಾಹಕ ಮಾರುಕಟ್ಟೆಗೆ ಸೇವೆ ಸಲ್ಲಿಸುವತ್ತ ಗಮನ ಹರಿಸಿದೆ. ಜೂನ್ ಅಂತ್ಯದ ತ್ರೈಮಾಸಿಕದಲ್ಲಿ ದೇಶೀಯ ವ್ಯವಹಾರಗಳು ಅದರ 16.7 ಬಿಲಿಯನ್ ಯುಎಸ್ಡಿ ಆದಾಯದಲ್ಲಿ ಶೇಕಡಾ 66 ರಷ್ಟನ್ನು ಹೊಂದಿದೆ ಎನ್ನಲಾಗಿದೆ.