Jack Ma Missing: China ಕೋಟ್ಯಾಧೀಶ Jack Ma ನಾಪತ್ತೆ, ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದರಂತೆ
Jack Ma Missing: ಕಳೆದ ವರ್ಷ ನವೆಂಬರ್‌ನಲ್ಲಿ, ಜ್ಯಾಕ್ ಮಾಗೆ ಬಲವಾದ ಪೆಟ್ಟು ನೀಡಿದ್ದ ಚೀನಾ ಸರ್ಕಾರ , ಅವರ ಆಂಟ್ ಗ್ರೂಪ್ ಗೆ ಸೇರಿದ 37 ಬಿಲಿಯನ್ ಡಾಲರ್ IPOಗಳನ್ನು ಐಪಿಒ ಅಮಾನತುಗೊಳಿಸಿತ್ತು. ವಾಲ್ ಸ್ಟ್ರೀಟ್ ಜನರಲ್ ವರದಿಯ ಪ್ರಕಾರ, ಐಪಿಒ ಅಮಾನತುಗೊಳಿಸುವ ಆದೇಶವು ನೇರವಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಂದ ಬಂದಿದೆ ಎನ್ನಲಾಗಿದೆ
ಬಿಜಿಂಗ್: Jack Ma Missing - ಚೀನಾದ ಕಮ್ಯುನಿಸ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಬಿಲಿಯನೇರ್ ಮತ್ತು ಅಲಿಬಾಬಾ ಗ್ರೂಪ್ ಸಂಸ್ಥಾಪಕ ಜ್ಯಾಕ್ ಮಾ ಕಳೆದ ಎರಡು ತಿಂಗಳಿನಿಂದ ಕಾಣೆಯಾಗಿದ್ದಾರೆ. ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ವಿವಾದದ ನಂತರ ಜ್ಯಾಕ್ ಮಾ ಅವರ ನಾಪತ್ತೆ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಚೀನಾದ ಬಿಲಿಯನೇರ್ ಸರ್ಕಾರದ ನೀತಿಗಳನ್ನು ಅವರು ಟೀಕಿಸಿದ್ದರು. ಅಂದಿನಿಂದ ಸರ್ಕಾರ ಅವರನ್ನು ಗುರಿಯಾಗಿಸಿತ್ತು. ಅವರ ಕಂಪನಿಗಳ ಮೇಲೂ ನಿಗಾ ಇಡಲಾಗಿತ್ತು.
ಈ ವಿಷಯದಿಂದ ಅಸಮಾಧಾನಗೊಂಡಿದ್ದ Jinping
ಡೈಲಿ ಮೇಲ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಕಳೆದ ವರ್ಷ ಶಾಂಘೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜ್ಯಾಕ್ ಮಾ ಸರ್ಕಾರವನ್ನು ಟೀಕಿಸಿದ್ದರು. ಅವರು ಚೀನಾದ 'ಬಡ್ಡಿ ತಿನ್ನುವ' ಹಣಕಾಸು ನಿಯಂತ್ರಕರು ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಗುರಿಯಾಗಿಸಿದ್ದರು. ವ್ಯವಹಾರದಲ್ಲಿ ಹೊಸ ಪ್ರಯತ್ನಗಳನ್ನು ಪ್ರಾರಂಭಿಸುವದನ್ನು ನಿಗ್ರಹಿಸಲು ಪ್ರಯತ್ನ ಮಾಡುವ ಇಂತಹ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಬೇಕೆಂದು ಜ್ಯಾಕ್ ಮಾ ಸರ್ಕಾರದಿಂದ ಒತ್ತಾಯಿಸಿದ್ದರು. ಅವರು ಜಾಗತಿಕ ಬ್ಯಾಂಕಿಂಗ್ ನಿಯಮಗಳನ್ನು 'ಓಲ್ಡ್ ಪೀಪಲ್ಸ್ ಕ್ಲಬ್' ಎಂದೂ ಕೂಡ ಟೀಕಿಸಿದ್ದರು.
ಇದನ್ನು ಓದಿ-ಎಲ್ಲರೂ ಕರೋನಾ ಸಂಕಷ್ಟದಲ್ಲಿದ್ದಾಗ ಚೀನಾ ಬಿಲಿಯನೇರ್‌ಗಳ ಸಂಪತ್ತು ಏಕೆ ಹೆಚ್ಚುತ್ತಲೇ ಇತ್ತು?
ಹಲವು ರೀತಿಯ ಬ್ಯಾನ್ ವಿಧಿಸಲಾಗಿದೆ
ಜ್ಯಾಕ್ ಮಾ (Jack Ma) ಅವರ ಈ ಭಾಷಣ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಕೋಪಕ್ಕೆ ಕಾರಣವಾಗಿದೆ ಎಂದು ವರದಿ ಹೇಳಿದೆ. ಇದರ ನಂತರ, ಅವರ ಕಂಪನಿಗಳನ್ನು ಗುರಿಯಾಗಿಸಲು ಸರ್ಕಾರ ಪ್ರಾರಂಭಿಸಿದೆ. ಸರ್ಕಾರದಿಂದ ವಿವಿಧ ನಿರ್ಬಂಧಗಳನ್ನು ವಿಧಿಸಲಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ, ಜ್ಯಾಕ್ ಮಾಗೆ ಬಲವಾದ ಪೆಟ್ಟು ನೀಡಿದ್ದ ಚೀನಾ ಸರ್ಕಾರ , ಅವರ ಆಂಟ್ ಗ್ರೂಪ್ ಗೆ ಸೇರಿದ 37 ಬಿಲಿಯನ್ ಡಾಲರ್ IPOಗಳನ್ನು ಐಪಿಒ ಅಮಾನತುಗೊಳಿಸಿತ್ತು. ವಾಲ್ ಸ್ಟ್ರೀಟ್ ಜನರಲ್ ವರದಿಯ ಪ್ರಕಾರ, ಐಪಿಒ ಅಮಾನತುಗೊಳಿಸುವ ಆದೇಶವು ನೇರವಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಂದ ಬಂದಿದೆ ಎನ್ನಲಾಗಿದೆ.
ಇದನ್ನು ಓದಿ- ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಕಂಪನಿ ಅಲಿಬಾಬಾ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿದ ಜ್ಯಾಕ್ ಮಾ
ದೇಶ ತೊರೆಯುವ ಎಚ್ಚರಿಕೆ
ಜ್ಯಾಕ್ ಮಾ ಅವರ ಅಲಿಬಾಬಾ ಗ್ರೂಪ್ ವಿರುದ್ಧ ನಡೆಯುತ್ತಿರುವ ತನಿಖೆ ಪೂರ್ಣಗೊಳ್ಳುವವರೆಗೆ ಚೀನಾವನ್ನು ಬಿಡಬೇಡಿ ಎಂದು ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಸರ್ಕಾರ ಹೇಳಿತ್ತು.ಇದರ ನಂತರ, ಜ್ಯಾಕ್ ಮಾ ನವೆಂಬರ್‌ನಲ್ಲಿ ತಮ್ಮ ಟಿವಿ ಶೋ 'ಆಫ್ರಿಕಾ ಬ್ಯುಸಿನೆಸ್ ಹೀರೋಸ್' ಫೈನಲ್‌ಗೆ ಮುನ್ನ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಅಷ್ಟೇ ಅಲ್ಲ, ಅವರ ಚಿತ್ರವನ್ನೂ ಪ್ರದರ್ಶನದಿಂದ ತೆಗೆದುಹಾಕಲಾಗಿದೆ. ವೇಳಾಪಟ್ಟಿ ವಿವಾದದಿಂದಾಗಿ ಜ್ಯಾಕ್ ಮಾ ನ್ಯಾಯಾಧೀಶರ ಸಮಿತಿಯ ಭಾಗವಲ್ಲ ಎಂದು ಅಲಿಬಾಬಾ ಗ್ರೂಪ್ ವಕ್ತಾರರು ತಿಳಿಸಿದ್ದಾರೆ. ಆದರೂ ಕೂಡ ಫೈನಲ್‌ಗೆ ಹಲವು ವಾರಗಳ ಮೊದಲು, ಜ್ಯಾಕ್ ಮಾ ಅವರು ಟ್ವೀಟ್ ಮಾಡಿದ್ದು, ಎಲ್ಲ ಸ್ಪರ್ಧಿಗಳನ್ನು ಭೇಟಿಯಾಗಲು ಕಾತರರಾಗಿರುವುದಾಗಿ ಹೇಳಿದ್ದಾರೆ.
ಇದನ್ನು ಓದಿ-ಎಚ್ಚರ! ಚೀನೀ ಸರ್ವರ್ ಸಂಪರ್ಕ ಹೊಂದಿರುವ 5 ಹಣಕಾಸು ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಗೂಗಲ್
ಈ ಮೊದಲು ಕೂಡ ಇಂತಹ ಘಟನೆಗಳು ನಡೆದಿದ್ದವು
ಜಾಕ್ ಮಾ ಅವರ ಸಾಮಾಜಿಕ ಖಾತೆಗಳ ಮೇಲೂ ಕೂಡ ಯಾವುದೇ ಚಟುವಟಿಕೆ ಕಂಡುಬಂದಿಲ್ಲ. ಇದಕ್ಕೂ ಮೊದಲು ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಕ್ರೀಯರಾಗಿದ್ದರು. ಸರ್ಕಾರದ ವಿರುದ್ಧ ಧ್ವನಿ ಎತ್ತಿದವರು ಕಣ್ಮರೆಯಾದ ಘಟನೆ ಇದೆ ಮೊದಲಲ್ಲ. ರಾಷ್ಟ್ರಪತಿ ಜಿನ್ ಪಿಂಗ್ ಅವರ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಉದ್ಯಮಿ ರೇನ್ ಝಿಕಿಯಾಂಗ್ ಕೂಡ ನಾಪತ್ತೆಯಾಗಿದ್ದರು. ಕೊರೊನಾ ಮಹಾಮಾರಿಯ ವಿಷಯದಲ್ಲಿ ಅವರು ಜಿನ್ ಪಿಂಗ್ ಅವರನ್ನು ಟೀಕಿಸಿದ್ದರು. ಬಳಿಕ ಅವರನ್ನು 18 ವರ್ಷಗಳ ಕಾಲ ಜೈಲಿಗಟ್ಟಲಾಗಿದೆ. ಚೀನಾದ ಮತ್ತೋರ್ವ ಕೋಟ್ಯಾಧೀಶ ಶಿಯಾನ್ ಝಿಆನ್ಹುವಾ ಕೂಡ 2017 ರಿಂದ ಗೃಹಬಂಧನದಲ್ಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.