ನವದೆಹಲಿ: ಈ ಸಮಯದಲ್ಲಿ ಪ್ರಪಂಚದಾದ್ಯಂತ ಕೃತಕ ಬುದ್ಧಿಮತ್ತೆಯ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಯಾವುದೇ ತಂತ್ರಜ್ಞಾನವು ಮನುಷ್ಯರನ್ನು ಸಂಪೂರ್ಣವಾಗಿ ಬದಲಾಯಿಸುವುದಿಲ್ಲ ಎಂದು ಹೆಚ್ಚಿನ ಜನರು ನಂಬುತ್ತಾರೆ. ಈ ಮಧ್ಯೆ, ಒಂದು ಪ್ರಕರಣ ವರದಿಯಾಗಿದೆ, ಜಪಾನ್ನಲ್ಲಿರುವ ಹೋಟೆಲ್ ಒಂದು ಮೊದಲ ಬಾರಿಗೆ 123 ರೋಬೋಟ್ ಗಳನ್ನು ಕೆಲಸದಿಂದ ವಜಾಗೊಳಿಸಿದೆ. ಜಪಾನ್ ನ 'ಹೆನ್ ನಾ' ಜನರ ಅನುಕೂಲಕ್ಕಾಗಿ 243 ರೊಬೊಟ್ಗಳನ್ನು ಇರಿಸಿದ್ದ ಪ್ರಪಂಚದ ಮೊದಲ ಹೋಟೆಲ್. ದರ ಹೆಸರನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ನೋಂದಾಯಿಸಲಾಗಿದೆ.  ಆದರೆ ರೋಬೋಟ್ಗಳು ತಮ್ಮ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಿಲ್ಲ ಎಂದು ಹೋಟೆಲ್ ಭಾವಿಸಿದೆ. ರೋಬೋಟ್ಗಳ ಆಗಮನದ ನಂತರ, ಮನುಷ್ಯರ ಕೆಲಸವು ಅಪಾಯದಲ್ಲಿದೆ, ಆದರೆ ರೋಬೋಟ್ಗಳ ಕೆಲಸವು ಸುರಕ್ಷಿತವಾಗಿಲ್ಲ ಎಂದು ನಂಬಲಾಗಿದೆ.


COMMERCIAL BREAK
SCROLL TO CONTINUE READING

ಗೊರಕೆ ಬರುತ್ತಿದ್ದಂತೆ ಎಬ್ಬಿಸುವ ರೋಬೋಟ್:
ಏಜೆನ್ಸಿಯ ಪ್ರಕಾರ, ಹೊಟೇಲ್ನಲ್ಲಿ ಅತಿಥಿಗಳು ರೊಬೊಟ್ ಗಳ ಬಗ್ಗೆ ಹಲವು ದೂರುಗಳನ್ನು ನೀಡಿದ್ದಾರೆ. ಗೊರಕೆ ಬರುತ್ತಿದ್ದಂತೆ ರೋಬೋಟ್ ಗೆಸ್ಟ್ ಅನ್ನು ಎಬ್ಬಿಸುತ್ತದೆ. ಅತಿಥಿಗಳಿಗೆ ರಾತ್ರಿಯಲ್ಲಿ ಹಲವು ಬಾರಿ ಇಂತಹ ಅನುಭವವಾಗಿದೆ. ರೊಬೊಟ್ ರಿಸೆಪ್ಶನ್ ನಲ್ಲಿ ಕುಳಿತುಕೊಳ್ಳುತ್ತಿದ್ದರೆ, ಜನರ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸಲು ವಿಫಲವಾಗಿದೆ. 


ಸುಲಭ ಕೆಲಸಗಳನ್ನೂ ಮಾಡುವುದಿಲ್ಲ ರೋಬೋಟ್:
ಹೋಟೆಲ್ ನಲ್ಲಿ ನಿಯೋಜಿಸಲಾಗಿರುವ ರೋಬೋಟ್ ಗಳು ಸಣ್ಣ ಪುಟ್ಟ ಕೆಲಸವನ್ನು ಮಾಡುವುದಿಲ್ಲ ಎಂದು ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ಅತಿಥಿಗಳು ದೂರಿದ್ದಾರೆ. ಲೈಟ್ ಅಥವಾ AC ಆಫ್ ಮಾಡಲು ಹೇಳಿದರೂ ಅವುಗಳಿಗೆ ಕೇಳಿಸುವುದೇ ಇಲ್ಲ. ಒಬ್ಬ ಅತಿಥಿ 'ಥೀಮ್ ಪಾರ್ಕ್ ಎಷ್ಟೊತ್ತಿಗೆ ತೆರೆಯುತ್ತದೆ' ಎಂದು ಕೇಳಿದರೆ ಅದಕ್ಕೂ ರೋಬೋಟ್ ಯಾವುದೇ ಉತ್ತರ ನೀಡಲಿಲ್ಲ ಎನ್ನಲಾಗಿದೆ.


ಆರಂಭದಲ್ಲಿ ಖ್ಯಾತಿ:
2015 ರಲ್ಲಿ, ಜಪಾನ್ನ ಸೇಸ್ಬೋದಲ್ಲಿ ಈ ಹೋಟೆಲ್ ತೆರೆಯಲ್ಪಟ್ಟಿತು. ಇದು ಬಹಳ ಖ್ಯಾತಿ ಪಡೆದಿದೆ. ಆರಂಭದಲ್ಲಿ, 80 ರೊಬೊಟ್ಗಳನ್ನು ಹೋಟೆಲ್ನಲ್ಲಿ ಇರಿಸಲಾಗಿತ್ತು. ನಂತರ, ಅವರ ಸಂಖ್ಯೆ ಮೂರು ಪಟ್ಟು ಹೆಚ್ಚಿಸಲಾಯಿತು. ಹೋಟೆಲ್ನ ವೆಬ್ಸೈಟ್ನ ಜನರಲ್ ಕಾನ್ಸೆಪ್ಟ್ಸ್ನಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಜನರಿಗೆ ಅವರು ಹೇಗೆ ಸಹಾಯ ಮಾಡುತ್ತಾರೆಂಬುದನ್ನು ಇದು ಉಲ್ಲೇಖಿಸಲಾಗಿದೆ. ನಾವು ಈ ರೋಬೋಟ್ಗಳನ್ನು ಕೇವಲ ಖ್ಯಾತಿಗಾಗಿ ಇಟ್ಟುಕೊಂಡಿಲ್ಲ, ಆದರೆ ನಾವು ತಂತ್ರಜ್ಞಾನವನ್ನು ಬಳಸಲು ಬಯಸುತ್ತೇವೆ ಎಂದು ಹೋಟೆಲ್ ನಿರ್ದೇಶಕ ಹಿಡಿಯೋ ಸವ್ಡಾ ಹೇಳಿದ್ದರು.