ನವದೆಹಲಿ: ಪುಲ್ವಾಮಾ ಭಯೋತ್ಪಾದಕ ದಾಳಿಯ ಜವಾಬ್ದಾರಿ ಹೊತ್ತಿದ್ದ ಜೈಷ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕ ಸಂಘಟನೆಯ ಮುಖಂಡ ಮೌಲಾನಾ ಮಸೂದ್ ಅಜರ್'ನನ್ನು ಪಾಕಿಸ್ತಾನ ಎಂದಿಗೂ ಜೈಲಿನಲ್ಲಿ ಇಟ್ಟುಕೊಂಡಿಲ್ಲ. ಪುಲ್ವಾಮಾ ದಾಳಿ ಮತ್ತು ಇದಕ್ಕೆ ಪ್ರತಿಯಾಗಿ ಭಾರತದ ಬಾಲಕೋಟ್ ವಾಯುದಾಳಿಯ ನಂತರ, ಅಂತರರಾಷ್ಟ್ರೀಯ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನವು ಮಸೂದ್ ಅಜರ್ ಅವರನ್ನು ಸೆರೆಹಿಡಿದು ಜೈಲಿಗೆ ಹಾಕಿದೆ ಎಂದು ಹೇಳಲಾಗಿದೆ. ಅಜರ್ ಅವರ ಆರೋಗ್ಯವೂ ಸುಧಾರಣೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈಗ ಗುಪ್ತಚರ ಮೂಲಗಳು ಪುಲ್ವಾಮಾ ದಾಳಿಯ ನಂತರ ಮಸೂದ್ ಅಜರ್'ನನ್ನು ಪಾಕಿಸ್ತಾನ ಎಂದಿಗೂ ಜೈಲಿಗೆ ಹಾಕಿಲ್ಲ ಎಂದು ಮಾಹಿತಿ ನೀಡಿವೆ.


COMMERCIAL BREAK
SCROLL TO CONTINUE READING

ಮೂಲಗಳ ಪ್ರಕಾರ, ಬಹವಾಲ್ಪುರದ ಮಾರ್ಕಾಜ್ ಸುಭಾನ್ ಅಲ್ಲಾಹ್ ನಲ್ಲಿ ಆತನನ್ನು ಕೊನೆಯದಾಗಿ ನೋಡಲಾಗಿದೆ. ಮಸೂದ್ ಅಜರ್ ಪಾಕಿಸ್ತಾನದ ಬಹವಾಲ್ಪುರ ನಿವಾಸಿ. ಅಲ್ಲಿಂದ ಆತ ತನ್ನ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ. ಗುಪ್ತಚರ ಮೂಲಗಳು ಅವರ ಆರೋಗ್ಯವು ಮೊದಲಿಗಿಂತ ಉತ್ತಮವಾಗಿದೆ. ಆದರೆ ಅವರು ಸಾರ್ವಜನಿಕ ಸ್ಥಳಗಳಿಗೆ ಹೋಗಿ ಧರ್ಮೋಪದೇಶ ನೀಡುತ್ತಿಲ್ಲ ಎಂದು ತಿಳಿಸಿವೆ.


ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿ ಪಾಕಿಸ್ತಾನದಲ್ಲಿ ಅಡಗಿರುವ 4 ಸಂಚುಕೋರರನ್ನು ಭಾರತ ಸರ್ಕಾರ ಇತ್ತೀಚೆಗೆ ಭಯೋತ್ಪಾದಕ ಎಂದು ಘೋಷಿಸಿದೆ ಎಂಬುದು ಗಮನಾರ್ಹ ಸಂಗತಿ. ಈ ಪಟ್ಟಿಯಲ್ಲಿ ಹಫೀಜ್ ಸಯೀದ್, ದಾವೂದ್ ಇಬ್ರಾಹಿಂ, ಮಸೂದ್ ಅಜರ್ ಮತ್ತು ಜಾಕಿ ಉರ್ ರೆಹಮಾನ್ ಲಖ್ವಿ ಸೇರಿದ್ದಾರೆ. 


2008 ರಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್, ಪಾಕಿಸ್ತಾನದಲ್ಲಿ ಜಮಾತ್ ಉದ್ ದಾವಾ ಎಂಬ ಭಯೋತ್ಪಾದಕ ಸಂಘಟನೆಯನ್ನು ನಡೆಸುತ್ತಿದ್ದಾನೆ. ಅದೇ ಸಮಯದಲ್ಲಿ, ಈ ಪಟ್ಟಿಯಲ್ಲಿರುವ ಮತ್ತೊಂದು ಹೆಸರು ಲಷ್ಕರ್-ಎ-ತೊಯ್ಬ ಎಂಬ ಭಯೋತ್ಪಾದಕ ಸಂಘಟನೆಯ ನಾಯಕ ಜಾಕಿ ಉರ್ ರೆಹಮಾನ್ ಲಖ್ವಿ ಹೆಸರು. ಲಖ್ವಿ ಕಾಶ್ಮೀರದ ಎಲ್‌ಇಟಿಯ ಸುಪ್ರೀಂ ಕಮಾಂಡರ್ ಆಗಿದ್ದು, ಎನ್‌ಐಎಯ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿಯೂ ಸೇರಿದ್ದಾರೆ. ಈ ಪಟ್ಟಿಯಲ್ಲಿ ಮೂರನೇ ಹೆಸರು ಜೈಶ್-ಎ-ಮೊಹಮ್ಮದ್ ಮಾಸ್ಟರ್ ಮಸೂದ್ ಅಜರ್. ಈ ಪಟ್ಟಿಯಲ್ಲಿರುವ ಮತ್ತೊಂದು ಹೆಸರು ಮುಂಬೈ ಬಾಂಬ್ ಸ್ಫೋಟದ ಆರೋಪಿ ಮತ್ತು ಭೂಗತ ಜಗತ್ತಿನ ಡಾನ್ ದಾವೂದ್ ಇಬ್ರಾಹಿಂ.


ಮೌಲಾನಾ ಮಸೂದ್ ಅಜರ್ ವಿರುದ್ಧದ ಪ್ರಕರಣಗಳು:


  • ಅಕ್ಟೋಬರ್ 1, 2001 ರಂದು ಶ್ರೀನಗರದ ಜಮ್ಮು ಮತ್ತು ಕಾಶ್ಮೀರ ರಾಜ್ಯ ಅಸೆಂಬ್ಲಿ ಕಾಂಪ್ಲೆಕ್ಸ್ ಮೇಲೆ ಭಯೋತ್ಪಾದಕ ದಾಳಿಯಲ್ಲಿ ಮೂವತ್ತೆಂಟು ಜನರು ಸಾವನ್ನಪ್ಪಿದರು.

  • ಡಿಸೆಂಬರ್ 13, 2001 ರಂದು, ಭಾರತದ ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿಯಲ್ಲಿ 6 ಭದ್ರತಾ ಸಿಬ್ಬಂದಿ, ಇಬ್ಬರು ಸಂಸತ್ತು ಭದ್ರತಾ ಸೇವಾ ಸಿಬ್ಬಂದಿ ಮತ್ತು ಸಾಮಾನ್ಯ ನಾಗರಿಕನನ್ನು ಕೊಲ್ಲಲಾಯಿತು.

  • ಜನವರಿ 2, 2016 ರಂದು ಪಾಕಿಸ್ತಾನದಿಂದ ಬರುತ್ತಿದ್ದ ಜೈಶ್-ಎ-ಮೊಹಮ್ಮದ್‌ಗೆ ಸೇರಿದ ಭಯೋತ್ಪಾದಕರು ಪಂಜಾಬ್‌ನ ಪಠಾಣ್‌ಕೋಟ್ ಮೇಲೆ ಭಯೋತ್ಪಾದಕ ದಾಳಿ ನಡೆಸಿದ್ದು, ಇದರಲ್ಲಿ ಏಳು ಭದ್ರತಾ ಪಡೆಗಳ ಸಿಬ್ಬಂದಿ ಸಾವನ್ನಪ್ಪಿದ್ದು, 37 ಮಂದಿ ಗಾಯಗೊಂಡಿದ್ದರು.

  • ಅಕ್ಟೋಬರ್ 2017ರಲ್ಲಿ ಶ್ರೀನಗರದ ಹಮಾಹಾಮಾದಲ್ಲಿನ ಬಿಎಸ್‌ಎಫ್ ಶಿಬಿರದ ಮೇಲೆ, ಡಿಸೆಂಬರ್ 2017ರಲ್ಲಿ ಪುಲ್ವಾಮಾದ ಲೆಥ್‌ಪೋರಾದಲ್ಲಿ ಸಿಆರ್‌ಪಿಎಫ್ ಶಿಬಿರದ ಮೇಲೆ ಹಾಗೂ ಫೆಬ್ರವರಿ, 2018ರಲ್ಲಿ ಜಮ್ಮುವಿನ ಸಂಜ್ವಾನ್‌ನಲ್ಲಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಆರೋಪ.

  • 2019 ರ ಫೆಬ್ರವರಿ 14 ರಂದು ನಡೆದ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ 40 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಈ ದಾಳಿಯ ಹೊಣೆಯನ್ನೂ ಜೈಷ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕ ಸಂಘಟನೆಯ ಮುಖಂಡ ಮೌಲಾನಾ ಮಸೂದ್ ಅಜರ್ ಹೊತ್ತಿದ್ದಾನೆ.