ನವದೆಹಲಿ: ಅಮೆರಿಕಾದ ಮಾಜಿ ಉಪಾಧ್ಯಕ್ಷ ಜೋ ಬಿಡನ್ ತಮ್ಮನ್ನು ಈಗ ಅಮೆರಿಕಾದ ಅಧ್ಯಕ್ಷ ಹುದ್ದೆಗೆ ಸ್ಪರ್ಧಿ ಎಂದು ಘೋಷಿಸಿದ್ದಾರೆ. 


COMMERCIAL BREAK
SCROLL TO CONTINUE READING

ಜೋಯ್ ಬಿಡನ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ "ನಾವು ಈ ರಾಷ್ಟ್ರದ ಆತ್ಮಕ್ಕಾಗಿ ಈ ಯುದ್ಧದಲ್ಲಿದ್ದೇವೆ" ಎಂದು ಘೋಷಿಸಿದರು." ವೈಟ್ ಹೌಸ್ನಲ್ಲಿ ಎಂಟು ವರ್ಷಗಳನ್ನು ಡೊನಾಲ್ಡ್ ಟ್ರಂಪ್ ಗೆ ನೀಡಿದರೆ, ಅವರು ಈ ದೇಶದ ರಚನೆಯನ್ನು ಶಾಶ್ವತವಾಗಿ ಬದಲಿಸುತ್ತಾರೆ. ಆದ್ದರಿಂದ ಅದನ್ನು ನೋಡಿಕೊಳ್ಳುತ್ತಾ ಕುಳಿತುಕೊಳ್ಳಲು ಸಾಧ್ಯವಿಲ್ಲ"ಎಂದು ಹೇಳಿದರು.



ಆದರೆ 76 ವರ್ಷ ವಯಸ್ಸಿನ ಬಿಡನ್ ಅವರು ಅಧ್ಯಕ್ಷ ಹುದ್ದೆ ಸ್ಪರ್ಧೆಗಾಗಿನ ಉಮೇದುವಾರಿಕೆಗೆ ಹಲವು ಪ್ರತಿರೋಧವನ್ನು ಎದುರಿಸಲಿದ್ದಾರೆ ಎನ್ನಲಾಗಿದೆ.ಇದರಲ್ಲಿ ಅವರು ಪ್ರಮುಖವಾಗಿ ಅವರು ಮಧ್ಯಮ ಮಾರ್ಗದ ರಾಜಕೀಯ ನಿಲುವು ಹಾಗೂ ವಯಸ್ಸಿನ ಕಾರಣದಿಂದ ಅವರ ಉಮೆದುವಾರಿಕೆಗೆ ಡೆಮಾಕ್ರೆಟಿಕ್ ಪಕ್ಷದಲ್ಲಿ ವಿರೋಧ ವ್ಯಕ್ತವಾಗಲಿದೆ ಎನ್ನಲಾಗಿದೆ.


ಸದ್ಯ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಅವರಿಗಿಂತ ನಾಲ್ಕು ವರ್ಷ ಹಿರಿಯರಾಗಿರುವ ಬಿಡನ್ ಒಂದು ವೇಳೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೆ ಆದಲ್ಲಿ ಅಧ್ಯಕ್ಷ ಹುದ್ದೆಗೆ ಏರಿದ ಅತಿ ಹಿರಿಯ ವ್ಯಕ್ತಿ ಎನ್ನುವ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಈಗ ಚುನಾವಣೆಯಲ್ಲಿ ಅವರು ಒಬಾಮಾ-ಬಿಡನ್ ಡೆಮೊಕ್ರಾಟಿಕ್ ಎಂದು ಪ್ರಚಾರ ಮಾಡುತ್ತಾ ಕಾರ್ಮಿಕ ವರ್ಗದ ಬಿಳಿ ನೌಕರರು ಹಾಗೂ ಯುವಕರುರನ್ನು ಗಮನ ಸೆಳೆಯುವ ಯತ್ನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.