ನವದೆಹಲಿ: ಕ್ರೆಮ್ಲಿನ್ ನಾಯಕ ವ್ಲಾಡಿಮಿರ್ ಪುಟಿನ್ ಒಬ್ಬ ಕೊಲೆಗಾರನೆಂಬ ಹೇಳಿಕೆಯನ್ನು ಹಿಂತೆಗೆದುಕೊಳ್ಳುವುದರ ಜೊತೆಗೆ ಅವರು ಕ್ಷಮೆಯಾಚಿಸಬೇಕೆಂದು ರಷ್ಯಾದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಜೋ ಬಿಡೆನ್ (Joe Biden) ಅವರ ಹೇಳಿಕೆ ಯಾವುದೇ ಕಾರಣಕ್ಕೂ ಸ್ವೀಕಾರ್ಹವಲ್ಲ, ಈ ವಿಚಾರವಾಗಿ ಅಮೇರಿಕ ಕ್ಷಮೆಯಾಚನೆ ಮಾಡದ ಹೊರತು ಯಾವುದೇ ಮಾತುಕತೆ ಇಲ್ಲ ಎಂದು ರಷ್ಯಾದ ಸಂಸತ್ತಿನ ಮೇಲ್ಮನೆಯ ಉಪ ಸ್ಪೀಕರ್ ಕಾನ್ಸ್ಟಾಂಟಿನ್ ಕೊಸಾಚ್ಯೋವ್ ಗುರುವಾರ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.


ಇದನ್ನೂ ಓದಿ: ಪ್ರಮುಖ ಆಡಳಿತಾತ್ಮಕ ಹುದ್ದೆಗಳಿಗೆ ಇಬ್ಬರು ಭಾರತೀಯ-ಅಮೇರಿಕನ್ ರನ್ನು ನೇಮಿಸಿದ ಬಿಡೆನ್


ವಿದೇಶಾಂಗ ಸಚಿವಾಲಯ ಬುಧವಾರ ತಡರಾತ್ರಿ ಹೇಳಿಕೆಯಲ್ಲಿ ಸಮಾಲೋಚನೆಗಾಗಿ ರಾಯಭಾರಿ ಅನಾಟೊಲಿ ಆಂಟೊನೊವ್ ಅವರನ್ನು ಕರೆಸಿಕೊಳ್ಳುವುದಾಗಿ ಘೋಷಿಸಿತು.ಹೊಸ ಯು.ಎಸ್.ಆಡಳಿತದೊಂದಿಗೆ ಸಂಬಂಧಗಳಲ್ಲಿ ಕ್ಷೀಣಿಸುವಿಕೆಯ ಅಪಾಯಗಳ ಬಗ್ಗೆಯೂ ಕೂಡ ರಷ್ಯಾ ಎಚ್ಚರಿಕೆ ನೀಡಿದೆ.


ಇದನ್ನೂ ಓದಿ: Farmers Bill: ರೈತರ ಕೃಷಿ ಮಸೂದೆಗೆ ಬೆಂಬಲ ಸೂಚಿಸಿದ ಅಮೇರಿಕ..!


ಮಂಗಳವಾರ ದಾಖಲಾದ ಬಿಡೆನ್ ಅವರ ಕಾಮೆಂಟ್‌ಗಳು ಯುಎಸ್ ಗುಪ್ತಚರ ಸಮುದಾಯದ ವರದಿಯೂ ಬಿಡೆನ್ ಅವ ಉಮೇದುವಾರಿಕೆಗೆ ಹಿನ್ನಡೆಯನ್ನುಂಟು ಮಾಡಲು ಪುಟಿನ್ ಯತ್ನಿಸಿದ್ದರು ಎನ್ನುವ ಸಂಗತಿ ಬಹಿರಂಗವಾದ ದಿನವೇ ಅವರ ಹೇಳಿಕೆ ಬಂದಿರುವುದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ