ಲಂಡನ್ : ಹೆಲ್ತ್‌ಕೇರ್ ಕಂಪನಿ ಜಾನ್ಸನ್ ಅಂಡ್  ಜಾನ್ಸನ್‌ನ ಬೇಬಿ ಪೌಡರ್ United Kingdom ಸೇರಿದಂತೆ ಪ್ರಪಂಚದಾದ್ಯಂತ ನಿಷೇಧವಾಗುವ ಸಾಧ್ಯತೆ ಇದೆ. ಕಂಪನಿಯ ಷೇರುದಾರರೊಬ್ಬರು  Johnson & Johnson ಕಂಪನಿಯ ಬೇಬಿ ಪೌಡರ್ ಅನ್ನು ನಿಷೇಧಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ.


COMMERCIAL BREAK
SCROLL TO CONTINUE READING

ದಿ ಗಾರ್ಡಿಯನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಜಾನ್ಸನ್ ಅಂಡ್ ಜಾನ್ಸನ್ (Johnson & Johnson) ತನ್ನ ಬೇಬಿ ಪೌಡರ್ ಉತ್ಪನ್ನವನ್ನು ಯುಎಸ್ ಮತ್ತು ಕೆನಡಾದಲ್ಲಿ ಮಾರಾಟ ಮಾಡುವುದನ್ನು 2020 ರಲ್ಲಿಯೇ ನಿಲ್ಲಿಸಿದೆ.  ಯುಎಸ್ ರೆಗ್ಯುಲೇಟರ್  ನಡೆಸಿದ ತನಿಖೆಯಲ್ಲಿ ಜಾನ್ಸನ್ ಅಂಡ್ ಜಾನ್ಸನ್ ಬೇಬಿ ಪೌಡರ್‌ನ ಸಾಂಪಲ್ ನಲ್ಲಿ Carcinogenic Chrysotile Fibres ಪತ್ತೆಯಾಗಿತ್ತು. ಇದಾದ ನಂತರ ಬೇಬಿ ಪೌಡರ್‌ನ (Baby powder) ಮಾರಾಟದಲ್ಲಿ ಭಾರೀ ಕುಸಿತ ಕಂಡು ಬಂದಿತ್ತು. 


ಇದನ್ನೂ ಓದಿ : ಜಮ್ಮು & ಕಾಶ್ಮೀರ ಕುರಿತು ಚೀನಾ ಅಧ್ಯಕ್ಷರ ಜೊತೆ ಪಾಕ್ ಪ್ರಧಾನಿ ಮಾತುಕತೆ!


ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ವಿರುದ್ಧ ಸದ್ಯದ ಮಟ್ಟಿಗೆ 34 ಸಾವಿರಕ್ಕೂ ಹೆಚ್ಚು ಮೊಕದ್ದಮೆಗಳನ್ನು ಹೂಡಲಾಗಿದೆ.  ಕಂಪನಿ ವಿರುದ್ಧ ಮೊಕದ್ದಮೆ ಹೂಡಿದವರಲ್ಲಿ ಮಹಿಳೆಯರೇ ಹೆಚ್ಚು.  ಬೇಬಿ ಪೌಡರ್ ಬಳಸಿದ ನಂತರ ಅಂಡಾಶಯದ ಕ್ಯಾನ್ಸರ್ ನಿಂದ (Ovarian cancer) ಬಳಲುವಂತಾಗಿದೆ ಎಂದು ಈ ಮಹಿಳೆಯರು ತಮ್ಮ ದೂರಿನಲ್ಲಿ ಹೇಳಿದ್ದಾರೆ.  


ಟಾಲ್ಕ್ ಅನ್ನು ವಿಶ್ವದ ಅತ್ಯಂತ ಮೃದುವಾದ ಖನಿಜವೆಂದು ಪರಿಗಣಿಸಲಾಗಿದೆ. ಇದರ ಗಣಿಗಾರಿಕೆಯನ್ನು ಅನೇಕ ದೇಶಗಳಲ್ಲಿ ಮಾಡಲಾಗುತ್ತದೆ. ಟಾಲ್ಕ್ (Talc) ಅನ್ನು ಕಾಗದ, ಪ್ಲಾಸ್ಟಿಕ್ ಮತ್ತು ಔಷಧಗಳ ವ್ಯಾಪಾರದಲ್ಲಿ ಬಳಸಲಾಗುತ್ತದೆ. ರಾಷಸ್ (Rashes)ಗೆ ಚಿಕಿತ್ಸೆ ನೀಡಲು ಮತ್ತು ಇತರ ವೈಯಕ್ತಿಕ ನೈರ್ಮಲ್ಯದ ಉದ್ದೇಶಗಳಿಗಾಗಿ ಇದನ್ನು ಬಳಸಲಾಗುತ್ತದೆ.


ಅನೇಕ ಬಾರಿ Asbestos ಕಾರಣದಿಂದಾಗಿ ಟಾಲ್ಕ್ ಭಂಡಾರ ಕೆಲವೊಮ್ಮೆ ಕಲುಷಿತಗೊಳ್ಳುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಅದರ ಫೈಬರ್ ನಮ್ಮ ದೇಹವನ್ನು ಪ್ರವೇಶಿಸಿದರೆ, ಈ ಖನಿಜವು  ಕ್ಯಾನ್ಸರ್ ಗೆ ಕಾರಣವಾಗುತ್ತದೆ.


ಇದನ್ನೂ ಓದಿ : Mia Khalifa: ವಾರ್ನಿಂಗ್ ಕೊಟ್ಟ ಮಿಯಾ ಖಲೀಫಾ, ಫೋಟೋ ಶೇರ್ ಮಾಡಿ ಹೇಳಿದ್ದೇನು ಗೊತ್ತಾ?


ಆದರೆ ಜಾನ್ಸನ್ ಅಂಡ್ ಜಾನ್ಸನ್ ಕಂಪನಿ, ತನ್ನ ಬೇಬಿ ಪೌಡರ್ ಹಾನಿಕಾರಕ ಎನ್ನುವ ಆರೋಪವನ್ನು ನಿರಾಕರಿಸಿದೆ. ತನ್ನ ಬೇಬಿ ಪೌಡರ್ (Baby powder) ಬಗ್ಗೆ ವದಂತಿಗಳನ್ನು ಹರಡಿದ ನಂತರ ಉತ್ತರ ಅಮೆರಿಕಾದಲ್ಲಿ ಉತ್ಪನ್ನವನ್ನು ಮಾರಾಟ ಮಾಡುವುದನ್ನು ನಿಲ್ಲಿಸಿರುವುದಾಗಿ ಜಾನ್ಸನ್ ಅಂಡ್ ಜಾನ್ಸನ್ (Johnson & Johnson) ಹೇಳಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.