ʼಬಿಪರ್ ಜಾಯ್ʼ ಚಂಡಮಾರುತ ಅಬ್ಬರ : ಆಳ ತೋರಿಸಲು ಸಮದ್ರಕ್ಕೆ ಹಾರಿದ ʼರಿಪೋರ್ಟರ್ʼ..!
Biporjoy cyclone effect : ವರದಿಗಾರನೊಬ್ಬ ಬಿಪರ್ ಜಾಯ್ ಚಂಡಮಾರುತ ಪರಿಣಾಮದ ಬಗ್ಗೆ ಗ್ರೌಂಡ್ ರಿಪೋರ್ಟ್ ಕೊಡುತ್ತಿದ್ದಾರೆ. ಚಂಡಮಾರುತದಿಂದ ತಗ್ಗು ಪ್ರದೇಶಗಳಿಗೆ ನೀರು ಹೇಗೆ ತಲುಪುತ್ತಿದೆ, ನೀರಿನ ಆಳ ಎಷ್ಟಿದೆ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ನೀರಿಗೆ ಹಾರಿ ಎಷ್ಟು ಆಳವಿದೆ ಎಂದು ತೋರಿಸುತ್ತೇನೆ ಎಂದು ತಕ್ಷಣವೇ ಸಮುದ್ರಕ್ಕೆ ಹಾರುವ ದೃಶ್ಯ ವಿಡಿಯೋದಲ್ಲಿದೆ.
Viral video : ಅತ್ಯಂತ ಭೀಕರ ಚಂಡಮಾರುತವಾಗಿ ಮಾರ್ಪಟ್ಟಿರುವ ʼಬಿಪರ್ ಜಾಯ್ʼ ಭಾರತದ ಗುಜರಾತ್ ಕರಾವಳಿ ಮತ್ತು ಪಾಕಿಸ್ತಾನದ ಸಿಂಧ್ ಪ್ರದೇಶದಲ್ಲಿ ರೌದ್ರ ರೂಪ ತಾಳಿದೆ. ಅಲ್ಲದೆ, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಇದೇ ವೇಳೆ ಸಾಹಸವೋ ಅಥವಾ ಹುಚ್ಚುತನವೋ ಗೊತ್ತಿಲ್ಲ ಪಾಕಿಸ್ತಾನ ವರದಿಗಾರನೊಬ್ಬ ಸಮುದ್ರಕ್ಕಿಳಿದು ವರದಿ ಮಾಡಿದ ವಿಡಿಯೋ ಒಂದು ಇಂಟ್‌ನೆಟ್‌ನಲ್ಲಿ ವೈರಲ್ ಆಗಿದೆ.
ಹೌದು.. ಅರೇಬಿಯನ್ ಸಮುದ್ರದಲ್ಲಿ ಬಿಪರ್ ಜಾಯ್ ಚಂಡಮಾರುತದ ಅಬ್ಬರ ಹೆಚ್ಚಾಗುತ್ತಿದೆ. ಆರಂಭದಲ್ಲಿ ಪಾಕಿಸ್ತಾನದ ಕರಾವಳಿಯನ್ನು ದಾಟಿ ಸಾಗುತ್ತದೆ ಭಾರತಕ್ಕೆ ಪ್ರವೇಶ ಮಾಡುವುದಿಲ್ಲ ಎಂದು ಊಹಿಸಲಾಗಿತ್ತು. ಆದರೆ, ಬಿಪರ್ ಜಾಯ್ ತನ್ನ ದಿಕ್ಕನ್ನು ಬದಲಾಯಿಸಿದ್ದು, ಗುಜರಾತ್‌ನ ಕಚ್ ಕರಾವಳಿಯನ್ನು ದಾಟಲಿದೆ ಎಂದು IMD ಬಹಿರಂಗಪಡಿಸಿದೆ. ಈ ಚಂಡಮಾರುತದ ಪ್ರಭಾವದಿಂದಾಗಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯವೂ ಸಹ ಹಾನಿಯನ್ನು ಅನುಭವಿಸಲಿದೆ.
ಚಿತ್ರರಂಗಕ್ಕೆ ಆಘಾತ..! ಖ್ಯಾತ ಹಿರಿಯ ಗಾಯಕಿ ಶಾರದಾ ನಿಧನ
ಅದಕ್ಕಾಗಿಯೇ ಸಿಂಧ್ ಪ್ರಾಂತ್ಯದ ತಗ್ಗು ಪ್ರದೇಶದ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈ ಅನುಕ್ರಮದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವೀಡಿಯೋ ವರದಿಗಾರನೊಬ್ಬನಿಗೆ ಸಂಬಂಧಿಸಿದ್ದಾಗಿದ್ದು, ಬಿಪರ್‌ಜೋಯ್ ಚಂಡಮಾರುತದ ಪ್ರಭಾವವನ್ನು ವಿವರಿಸುವ ಸಲುವಾಗಿ ರಿಪೋರ್ಟರ್ ಸಮುದ್ರಕ್ಕಿಳಿದಿದ್ದಾನೆ. ಆತನ ಧೈರ್ಯ ಎಲ್ಲರನ್ನು ಆಶ್ಚರ್ಯಗೊಳಿಸಿದ್ದು, ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಪಾಕ್ ಸ್ಥಳೀಯ ಚಾನೆಲ್ ವರದಿಗಾರ ಕರಾಚಿ ಬಳಿಯ ಕಡಲತೀರದಲ್ಲಿ ಬಿಪರ್ ಜಾಯ್ ಚಂಡಮಾರುತ ಪರಿಣಾಮದ ಬಗ್ಗೆ ಗ್ರೌಂಡ್ ರಿಪೋರ್ಟ್ ಕೊಡುತ್ತಿದ್ದಾರೆ. ಚಂಡಮಾರುತದಿಂದ ತಗ್ಗು ಪ್ರದೇಶಗಳಿಗೆ ನೀರು ಹೇಗೆ ತಲುಪುತ್ತಿದೆ, ನೀರಿನ ಆಳ ಎಷ್ಟಿದೆ ಎಂದು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ನೀರಿಗೆ ಹಾರಿ ಎಷ್ಟು ಆಳವಿದೆ ಎಂದು ತೋರಿಸುತ್ತೇನೆ ಎಂದು ತಕ್ಷಣವೇ ಸಮುದ್ರಕ್ಕೆ ಹಾರುವ ದೃಶ್ಯ ವಿಡಿಯೋದಲ್ಲಿದೆ. ಇದನ್ನು ನೋಡಿದ ಕೆಲ ನೆಟ್ಟಿಗರು ಸಾಹಸ ಎಂದು ಬಣ್ಣಿಸಿದರೆ ಮತ್ತೆ ಕೆಲವರು ಹುಚ್ಚು ಸಾಹಸ ಎಂದು ಟೀಕೆಮಾಡುತ್ತಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.