ಕಾಬೂಲ್‌ನಲ್ಲಿ ಸ್ಫೋಟ:  ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಇಂದು ಎರಡು ಪ್ರಬಲ  ಸ್ಫೋಟಗಳು ಸಂಭವಿಸಿವೆ. ಈ ದುರ್ಘಟನೆಯಲ್ಲಿ ಇದುವರೆಗೆ ಆರು ಜನರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾದಿಗೆ. ಕಾಬೂಲ್‌ನ ಪಶ್ಚಿಮ ಭಾಗದಲ್ಲಿ ಈ ಎರಡೂ ಸ್ಪೋಟಗಳು ಸಂಭವಿಸಿವೆ. 


COMMERCIAL BREAK
SCROLL TO CONTINUE READING

ವಿಪರ್ಯಾಸವೆಂದರೆ ಈ ಎರಡೂ ಸ್ಪೋಟಗಳು ಶಾಲೆಯಲ್ಲಿ ಸಂಭವಿಸಿದೆ.  ಮೊದಲ ಸ್ಪೋಟವು  ಮಮ್ತಾಜ್ ಶಾಲೆಯಲ್ಲಿ ಸಂಭವಿಸಿದ್ದು ಇಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಎರಡನೇ ಸ್ಪೋಟ ಮತ್ತೊಂದು ಶಾಲೆಯಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ.


ಇದನ್ನೂ ಓದಿ- ಉಕ್ರೇನ್‌ ಮೇಲೆ ರಷ್ಯಾ ನಿರಂತರ ಕ್ಷಿಪಣಿ ದಾಳಿ: ನಾಲ್ಕು ಶಸ್ತ್ರಕೋಠಿಗಳು ಧ್ವಂಸ


ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಪಶ್ಚಿಮ ಕಾಬೂಲ್‌ನಲ್ಲಿ ಸಂಭವಿಸಿರುವ ಈ ಸ್ಪೋಟಗಳಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಇದಲ್ಲದೆ, ಬಹುತೇಕ ಮಂದಿ ಗಾಯಗೊಂಡಿದ್ದಾರೆ. ವಿದ್ಯಾರ್ಥಿಗಳು ತರಗತಿಯಿಂದ ಹೊರಬರುತ್ತಿದ್ದಾಗ ಈ ಘಟನೆ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.  


ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ, ಕಾಬೂಲ್‌ನ ಪಶ್ಚಿಮದಲ್ಲಿರುವ "ಮುಮ್ತಾಜ್" ತರಬೇತಿ ಕೇಂದ್ರದ ಬಳಿ ಸ್ಫೋಟವು ಹ್ಯಾಂಡ್ ಗ್ರೆನೇಡ್‌ನಿಂದ ಸಂಭವಿಸಿದೆ ಎಂದು ಮಾಧ್ಯಮವು ವರದಿ ಮಾಡಿದೆ. ಆದಾಗ್ಯೂ, ಈವರೆಗೂ ಯಾವುದೇ ಸಂಘಟನೆಯು ಘಟನೆಯ ಹೊಣೆ ಹೊತ್ತಿಲ್ಲ.


ಈ ಘಟನೆಗೂ ಮೊದಲು ಶನಿವಾರ ಅಂದರೆ ಏಪ್ರಿಲ್ 16 ರಂದು ಪಾಕಿಸ್ತಾನಿ ವಾಯುಪಡೆಯು ಅಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ ನಡೆಸಿತ್ತು. ಖೋಸ್ಟ್ ಮತ್ತು ಕುನಾರ್ ಪ್ರಾಂತ್ಯಗಳಲ್ಲಿ ನಡೆದ  ಪಾಕಿಸ್ತಾನಿ ವಾಯುಪಡೆ ಯವೈಮಾನಿಕ ದಾಳಿಯಲ್ಲಿ ಸುಮಾರು 47 ಜನರು ಪ್ರಾಣ ಕಳೆದುಕೊಂಡಿದ್ದರು. ಪಾಕಿಸ್ತಾನ ವಾಯು ಪಡೆಯು ಆಗ್ನೇಯ ಖೋಸ್ಟ್ ಪ್ರಾಂತ್ಯದ ಸ್ಪರೈ ಜಿಲ್ಲೆ ಮತ್ತು ಪೂರ್ವ ಕುನಾರ್ ಪ್ರಾಂತ್ಯದ ಶಾಲ್ತಾನ್ ಜಿಲ್ಲೆಯಲ್ಲಿ ವಜೀರಿಸ್ತಾನ್ ನಿರಾಶ್ರಿತರ ಮೇಲೆ ಈ ವೈಮಾನಿಕ ದಾಳಿ ನಡೆಸಿತ್ತು ಎಂಬುದು ಗಮನಾರ್ಹ ಸಂಗತಿಯಾಗಿದೆ.


ಇದನ್ನೂ ಓದಿ- ಶಾಂಘೈನಲ್ಲಿ ಹೆಚ್ಚಿದ ಕೋವಿಡ್ ಸಾವಿನ ಪ್ರಕರಣ!


ಪಾಕಿಸ್ತಾನ ವಾಯುಪಡೆಯ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದ ಅಫ್ಘಾನಿಸ್ತಾನ, ದಾಳಿಗೆ ಪ್ರತಿಕ್ರಿಯೆಯಾಗಿ ವಿದೇಶಾಂಗ ಸಚಿವಾಲಯವು ಪಾಕಿಸ್ತಾನದ ರಾಯಭಾರಿ ಮನ್ಸೂರ್ ಅಹ್ಮದ್ ಖಾನ್ ಅವರನ್ನು  ಕಾಬೂಲ್‌ಗೆ  ಕರೆಸಿದೆ. ಇದಾದ ನಂತರ, ಅಫ್ಘಾನಿಸ್ತಾನವು ಪಾಕಿಸ್ತಾನ-ಅಫ್ಘಾನ್ ಗಡಿಯ ಸುತ್ತಲಿನ ಪ್ರದೇಶವನ್ನು ರಕ್ಷಿಸಬೇಕು ಮತ್ತು ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಕಿಸ್ತಾನ ಆಗ್ರಹಿಸಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.