ವಾಷಿಂಗ್ಟನ್: ಯುಎಸ್ ಅಧ್ಯಕ್ಷರಾಗಿ ಜೋ ಬೈಡನ್  (Joe Biden) ಅಧಿಕಾರ ವಹಿಸಿಕೊಂಡು ಇಂದು (ಜ.20)ಕ್ಕೆ ಒಂದು ವರ್ಷ ಪೂರ್ಣವಾಗಿದೆ. 


COMMERCIAL BREAK
SCROLL TO CONTINUE READING

ಅಧಿಕಾರದ ಮೊದಲ ವರ್ಷವನ್ನು ಸ್ಮರಿಸುತ್ತಾ, ಯುಎಸ್ ಅಧ್ಯಕ್ಷ (US President) ಜೋ ಬೈಡನ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ 2024 ರಲ್ಲಿ ತಮ್ಮ ಉತ್ತರಾಧಿಕಾರಿಗಲಿದ್ದಾರೆ ಎಂದು ಹೇಳಿದ್ದಾರೆ.


ಮತದಾನದ ಹಕ್ಕುಗಳ ಕುರಿತಾದ ಉಪಾಧ್ಯಕ್ಷೆ ಹ್ಯಾರಿಸ್‌ ಅವರ ಕೆಲಸದಿಂದ ಪ್ರೇರಿತರಾದ ಬೈಡನ್, 2024 ರಲ್ಲಿ ಅವರ ಉತ್ತರಾಧಿಕಾರಿ ಎಂದು ತಿಳಿಸಿದ್ದಾರೆ. ಈ ಮೂಲಕ 2024 ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ.


ಇದನ್ನೂ ಓದಿ: Asteroid:ಕಾದಿದ್ಯಾ ಅಪಾಯ? ಭೂಮಿಯ ಬಳಿ ಬರಲಿದೆ ಬುರ್ಜ್ ಖಲೀಫಾಕ್ಕಿಂತ ದುಪ್ಪಟ್ಟು ಗಾತ್ರದ ಕ್ಷುದ್ರಗ್ರಹ


ಅಮೆರಿಕದ (America) ಇತಿಹಾಸದಲ್ಲಿ ಕಮಲಾ ಹ್ಯಾರಿಸ್ ಅವರು ಉಪಾಧ್ಯಕ್ಷೆಯಾದ ಮೊದಲ ಕಪ್ಪು ಮಹಿಳೆಯಾಗಿದ್ದು ಮೊದಲ ಭಾರತೀಯ ಮೂಲದ (Indian-American) ಅಮೆರಿಕ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 


ಹ್ಯಾರಿಸ್ ಓಕ್ಲ್ಯಾಂಡ್‌ನಲ್ಲಿ ಜನಿಸಿದರು ಮತ್ತು ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿ ಬೆಳೆದರು. ಅವರ ತಾಯಿ ಭಾರತ ಮೂಲದವರು ಮತ್ತು ತಂದೆ ಜಮೈಕಾದವರು. 


2017 ರಲ್ಲಿ, ಹ್ಯಾರಿಸ್ ಕ್ಯಾಲಿಫೋರ್ನಿಯಾದ ಯುನೈಟೆಡ್ ಸ್ಟೇಟ್ಸ್ ಸೆನೆಟರ್ ಆಗಿ ಪ್ರಮಾಣವಚನ ಸ್ವೀಕರಿಸಿದರು. ಮೊದಲ ದಕ್ಷಿಣ ಏಷ್ಯಾದ-ಅಮೆರಿಕನ್ ಸೆನೆಟರ್ ಮತ್ತು ಇತಿಹಾಸದಲ್ಲಿ ಎರಡನೇ ಆಫ್ರಿಕನ್-ಅಮೆರಿಕನ್ ಮಹಿಳೆ.


ಅವರು ಹೋಮ್ಲ್ಯಾಂಡ್ ಸೆಕ್ಯುರಿಟಿ ಮತ್ತು ಸರ್ಕಾರಿ ವ್ಯವಹಾರಗಳ ಸಮಿತಿ, ಗುಪ್ತಚರ ಆಯ್ಕೆ ಸಮಿತಿ, ಬಜೆಟ್ ಸಮಿತಿ ಮತ್ತು ನ್ಯಾಯಾಂಗ ಸಮಿತಿಯಲ್ಲಿ ಸೇವೆ ಸಲ್ಲಿಸಿದರು.


ಆಗಸ್ಟ್ 2019 ರಲ್ಲಿ, ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಅವರನ್ನು ತನ್ನ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದರು. ನವೆಂಬರ್ 2020 ರ ಚುನಾವಣೆಯಲ್ಲಿ ಬೈಡನ್ ಮತ್ತು ಹ್ಯಾರಿಸ್ ವಿಜಯಶಾಲಿಯಾದರು. 


ಇದನ್ನೂ ಓದಿ: World Economic Forum Davos 2022: ನಾವು 'Make In India' ಜೊತೆಗೆ 'Make The World' ವಿಚಾರದೊಂದಿಗೆ ಮುಂದುವರೆಯುತ್ತಿದ್ದೇವೆ ಎಂದ PM Modi


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.