ನವದೆಹಲಿ: ಕಾಶ್ಮೀರವು ಕಾಶ್ಮೀರಿ ಜನರಿಗೆ ಸೇರಿದೆ ಹೊರತು ಪಾಕ್ ಅಥವಾ ಭಾರತಕ್ಕೆ ಅಲ್ಲ ಎಂದು ಪಾಕ್ ಕ್ರಿಕೆಟ್ ಆಟಗಾರ ಶಾಹಿದ್ ಆಫ್ರಿದಿ ಅಭಿಪ್ರಾಯಪಟ್ಟಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ತಮ್ಮ ಆತ್ಮಕತೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಹಿದ್ ಆಫ್ರಿದಿ "ಕಾಶ್ಮೀರವು ಕಾಶ್ಮೀರದ ಜನರಿಗೆ ಸೇರಿದೆ ಹೊರತು, ಅದು ಪಾಕಿಸ್ತಾನ ಅಥವಾ ಭಾರತಕ್ಕೆ ಸೇರಿಲ್ಲ, ಈ ಕುರಿತಾಗಿನ ಚರ್ಚೆ ಅನಂತರ ಬರುತ್ತದೆ. ಮೊದಲನೆಯದಾಗಿ ಕಾಶ್ಮೀರವನ್ನು ಕಾಶ್ಮೀರಿಗಳಿಗೆ ಮೊದಲ ಪ್ರಾಧಾನ್ಯತೆಯನ್ನಾಗಿ ಪರಿಗಣಿಸಬೇಕು "ಎಂದು ಹೇಳಿದರು.


ಇದೇ ವೇಳೆ ಪಾಕ್ ಪ್ರಧಾನಿ ಇಮ್ರಾನ್ ಖಾನ್  ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಆಫ್ರಿದಿ ಈಗಾಗಲೇ ಕರ್ತಾರ್ಪುರ್ ಕಾರಿಡಾರ್ ನ್ನು ಮುಕ್ತಗೊಳಿಸಿದ್ದು, ಮತ್ತು ಐಎಎಫ್ ಪೈಲೆಟ್ ಅಭಿನಂದನ್ ವರ್ತಮಾನ್ ರನ್ನು ಬಿಡುಗಡೆಗೊಳಿಸಿರುವ ಪ್ರಧಾನಿ ಕ್ರಮಕ್ಕೆ ಶ್ಲಾಘಿಸಿದರು.


"ಆದಾಗ್ಯೂ, ಇಮ್ರಾನ್ ಖಾನ್ ಕಾಶ್ಮೀರ ಬಗ್ಗೆ ಹೆಚ್ಚಿನ ಕೆಲಸ ಮಾಡಬೇಕು. ನಾವು ಆ ಸಮಸ್ಯೆಯನ್ನು ಪರಿಹರಿಸಬೇಕು. ನಾವು ಕಾಶ್ಮೀರಿ ಜನರನ್ನು ಉಳಿಸಬೇಕಾಗಿದೆ ಮತ್ತು ಶಾಂತಿ ಪ್ರಕ್ರಿಯೆಯಲ್ಲಿ ಅವರನ್ನು ಕೂಡ ಒಳಗೊಳ್ಳಬೇಕಾಗಿದೆ. ಭಾರತೀಯ ಉಪಖಂಡದಲ್ಲಿ ಯಾರೂ ಕಾಶ್ಮೀರರಷ್ಟು ಸಮಸ್ಯೆಗಳನ್ನು ಅನುಭವಿಸಿದವರು ಯಾರು ಇಲ್ಲ " ಎಂದು ಆಫ್ರಿದಿ ಹೇಳಿದರು.ಅಲ್ಲದೆ ಕಾಶ್ಮೀರ ವಿಚಾರದಲ್ಲಿ ಇಮ್ರಾನ್ ಖಾನ್ ಮೋದಿಗಿಂತ ಹೆಚ್ಚು ಮೃದು ಧೋರಣೆಯನ್ನು ಹೊಂದಿದ್ದಾರೆ ಎಂದು ಹೇಳಿದರು.