ಹೊಸ ರೀತಿಯ ನೊರೊವೈರಸ್ ಸೋಂಕು 'ಕವಾಸಕಿ ಬಗ್'ಬ್ರಿಟನ್‌ನಲ್ಲಿ ವೇಗವಾಗಿ ಹರಡುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಾಂತಿ ಭೇದಿ ಪ್ರಕರಣ ದುಪ್ಪಟ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ. ತಜ್ಞರ ಪ್ರಕಾರ, ಈ ವೈರಸ್ ಈಗ ಕರೋನಾ ನಂತರ ಹೊಸ ಸವಾಲಾಗಿ ಹೊರಹೊಮ್ಮಿದೆ. ಈ ಬಗ್ಗೆ ಬ್ರಿಟಿಷ್ ವೈದ್ಯರು ಜನರನ್ನು ಜಾಗರೂಕರಾಗಿರುಂತೆ ಸೂಚಿಸಿದ್ದಾರೆ. 


COMMERCIAL BREAK
SCROLL TO CONTINUE READING

AXA ಹೆಲ್ತ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಜಾನ್ ಬರ್ಕ್, ಈ ಹೊಸ ನೊರೊವೈರಸ್‌ನ ಬಗ್ಗೆ ಮಾಹಿತಿ ನೀಡಿದ್ದಾರೆ. ಅದನ್ನು ತಡೆಗಟ್ಟುವ ಮಾರ್ಗಗಳ ಬಗ್ಗೆ ಒತ್ತು ನೀಡಿದ್ದಾರೆ. ನೊರೊವೈರಸ್ ಹೆಚ್ಚು ಸಾಂಕ್ರಾಮಿಕ ವೈರಸ್ ಆಗಿದ್ದು, ಇದು ಸಂಪರ್ಕದ ಮೂಲಕ ಹರಡುತ್ತದೆ.ಸೋಂಕಿತ ವ್ಯಕ್ತಿಯಲ್ಲಿ ವಾಂತಿ ಮತ್ತು ಭೇದಿ ಲಕ್ಷಣಗಳನ್ನು ಉಂಟುಮಾಡಬಹುದು ಎಂದು ಅವರು ಹೇಳಿದ್ದಾರೆ. ಚಳಿಗಾಲದಲ್ಲಿ ಇದನ್ನು 'ವಿಂಟರ್ ವಾಮಿಟಿಂಗ್ ಬಗ್' ಎಂದು ಕರೆಯಲಾಗುತ್ತದೆ. 


ಇದನ್ನೂ ಓದಿ : 2024ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ವಿಶ್ವ ನಾಯಕರು..! ಪ್ರಧಾನಿ ಮೋದಿ ಸ್ಥಾನ ಎಷ್ಟು ಗೊತ್ತೆ..?


ಕವಾಸಕಿ ಬಗ್ ನ ಆರು ಪ್ರಮುಖ ಲಕ್ಷಣಗಳು:
ವಾಕರಿಕೆ,
ವಾಂತಿ,
ಅತಿಸಾರ,
ಅಧಿಕ ಜ್ವರ,
ತಲೆನೋವು,
ಆಯಾಸ


ನೊರೊವೈರಸ್ ರೋಗಲಕ್ಷಣಗಳಿಂದ ಪರಿಹಾರವನ್ನು ಪಡೆಯುವ ಮಾರ್ಗಗಳು:
ನೊರೊವೈರಸ್ ರೋಗಲಕ್ಷಣಗಳನ್ನು ಸಾಮಾನ್ಯವಾಗಿ ಮನೆಯಲ್ಲಿಯೇ ನಿಯಂತ್ರಿಸಬಹುದು. ವಾಂತಿ ಮತ್ತು ಭೇದಿಯಿಂದಾಗಿ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಇದು ನಿರ್ಜಲೀಕರಣದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವೈದ್ಯರು ಬರ್ಕ್ ಹೇಳುತ್ತಾರೆ.ಆದ್ದರಿಂದ, ಈ ಅವಧಿಯಲ್ಲಿ ಸಾಕಷ್ಟು ದ್ರವ ಪದಾರ್ಥ ಮತ್ತು ಎಲೆಕ್ಟ್ರೋಲೈಟ್ ಗಳನ್ನು ಸೇವಿಸುವುದು ಮುಖ್ಯವಾಗಿದೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. .


ಪರಿಹಾರವೇನು? : 
ನೊರೊವೈರಸ್‌ನಿಂದ ಬಳಲುತ್ತಿರುವಾಗ, ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಬೇಕು ಎಂದು ಡಾ.ಬರ್ಕ್ ಸಲಹೆ ನೀಡಿದರು. ಇದಲ್ಲದೆ, ಈ ಸಮಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದು ಬಹಳ ಮುಖ್ಯ, ಇದರಿಂದಾಗಿ ದೇಹವು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಕನಿಷ್ಠ 48 ಗಂಟೆಗಳ ಕಾಲ ಮನೆಯಲ್ಲಿಯೇ ಇರಿ ಮತ್ತು ನೀವು ಸಂಪೂರ್ಣವಾಗಿ ಆರೋಗ್ಯವಂತರಾದ ನಂತರವೇ ಹೊರಗೆ ಹೋಗಿ. ವೈರಸ್ ಹರಡುವುದನ್ನು ತಡೆಯಲು ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸುವಂತೆ ಬ್ರಿಟಿಷ್ ವೈದ್ಯರು ಸಾರ್ವಜನಿಕರನ್ನು ಒತ್ತಾಯಿಸಿದ್ದಾರೆ.


ಸೂಚನೆ : ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು.ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ವಿಚಾರ ಈ ಲೇಖನದಲ್ಲಿ ಕಂಡು ಬಂದರೆ ಸ್ವ ಚಿಕಿತ್ಸೆ ಮಾಡಿಕೊಳ್ಳುವ ಬದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.