ದ.ಕೊರಿಯಾಗೆ ಪರಮಾಣು ಶಸ್ತ್ರಾಸ್ತ್ರದ ಬೆದರಿಕೆ ಹಾಕಿದ ಕಿಮ್ ಜಾಂಗ್ ಉನ್ ಸಹೋದರಿ
ದಕ್ಷಿಣ ಕೊರಿಯಾ ಮಿಲಿಟರಿ ಯುದ್ಧಕ್ಕೆ ಮುಂದಾದರೆ ನಮ್ಮ ಯುದ್ಧ ಪರಮಾಣು ಪಡೆಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ ಎಂದು ಜೊಂಗ್ ಎಚ್ಚರಿಕೆ ರವಾನಿಸಿದ್ದಾರೆ.
ಪ್ಯೊಂಗ್‌ಯಾಂಗ್ (ಉತ್ತರ ಕೊರಿಯಾ): ದಕ್ಷಿಣ ಕೊರಿಯಾ (South Korea) ಮಿಲಿಟರಿ ಘರ್ಷಣೆಯನ್ನು ಪ್ರಾರಂಭಿಸಿದರೆ ನಮ್ಮ ದೇಶವು ಪರಮಾಣು ಶಸ್ತ್ರಾಸ್ತ್ರಗಳನ್ನು (Nuclear Arms) ಬಳಸುತ್ತದೆ ಎಂದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಹೋದರಿ ಕಿಮ್ ಯೊ ಜೊಂಗ್ ಹೇಳಿದ್ದಾರೆ. ಹೀಗೆಂದು ಕೊರಿಯನ್ ಕೇಂದ್ರ ಸುದ್ದಿ ಸಂಸ್ಥೆ (ಕೆಸಿಎನ್‌ಎ) ವರದಿ ಮಾಡಿದೆ.
ದಕ್ಷಿಣ ಕೊರಿಯಾ ಮಿಲಿಟರಿ (Military) ಯುದ್ಧಕ್ಕೆ ಮುಂದಾದರೆ ನಮ್ಮ ಯುದ್ಧ ಪರಮಾಣು ಪಡೆಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ ಎಂದು ಜೊಂಗ್ ಎಚ್ಚರಿಕೆ ರವಾನಿಸಿದ್ದಾರೆ.
ದಕ್ಷಿಣ ಕೊರಿಯಾದ ಕಡೆಗೆ ನಾವು ಒಂದೇ ಒಂದು ಬುಲೆಟ್ ಅಥವಾ ಶೆಲ್ ಅನ್ನು ಸಹ ಹಾರಿಸುವುದಿಲ್ಲ. ಏಕೆಂದರೆ ನಾವು ಅದನ್ನು ನಮ್ಮ ಸಶಸ್ತ್ರ ಪಡೆಗಳಿಗೆ ಸರಿಸಾಟಿ ಎಂದು ಎಂದಿಗೂ ಪರಿಗಣಿಸುವುದಿಲ್ಲ. ಮುಂಚಿತವಾಗಿ ನಾವು ದಾಳಿ ಮಾಡುವುದಿಲ್ಲ ಎಂದು ತಿಳಿಸಿರುವುದಾಗಿ ಅಲ್ಲಿನ ಮಾಧ್ಯಮ ವರದಿ ಮಾಡಿದೆ.
ಇದನ್ನೂ ಓದಿ-Russia-Ukraine Conflict: ಇಂದು ರಷ್ಯಾ ಅಧ್ಯಕ್ಷ ಪುಟೀನ್ ಜೊತೆ ಪ್ರಧಾನಿ ಮೋದಿ ಮಾತುಕತೆ ಸಾಧ್ಯತೆ
ಖಂಡಾಂತರ ಕ್ಷಿಪಣಿಗಳನ್ನು (Missels) ಪೂರ್ಣ ಪ್ರಮಾಣದಲ್ಲಿ ಕಳೆದ ತಿಂಗಳು ಉಡಾವಣೆ ಮಾಡುವ ಮೂಲಕ ಶಸ್ತ್ರಾಸ್ತ್ರ ಪರೀಕ್ಷೆಯ ಮೇಲೆ ನಿರ್ಬಂಧಗಳನ್ನು ಉತ್ತರ ಕೊರಿಯಾ ಉಲ್ಲಂಘನೆ ಮಾಡಿತ್ತು. ಅದರ ಬೆನ್ನಲ್ಲೇ ಎರಡೂ ನೆರೆಯ ದೇಶಗಳ ನಡುವೆ ಮತ್ತೆ ಉದ್ವಿಗ್ನತೆ ನಿರ್ಮಾಣವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.