ಕಠ್ಮಂಡು :  ಅಚ್ಚರಿಯ ಬೆಳವಣಿಗೆಯೊಂದರಲ್ಲಿ ನೇಪಾಳದ (Nepal) ಪ್ರಧಾನ ಮಂತ್ರಿಯಾಗಿ ಕೆಪಿ ಶರ್ಮಾ ಓಲಿ (KP Sharma Oli) ಮತ್ತೆ ಆಯ್ಕೆಯಾಗಿದ್ದಾರೆ. ಬಹುಮತ  ಸಾಬೀತುಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ನೇಪಾಳ ಪ್ರಧಾನಿ ಸ್ಥಾನಕ್ಕೆ ಕೆಪಿ ಶರ್ಮಾ ಓಲಿ ರಾಜೀನಾಮೆ ನೀಡಿದ್ದರು. ಆದರೆ, ಓಲಿಯನ್ನು ಕೆಳಗಿಳಿಸುವಲ್ಲಿ ಪ್ರತಿಪಕ್ಷಗಳೇನೋ ಯಶಸ್ವಿಯಾದವು. ಆದರೆ, ಖುದ್ದು  ಬಹುಮತ ಸಾಬೀತುಪಡಿಸಲು ನೇಪಾಳದ ಪ್ರತಿಪಕ್ಷಗಳಿಗೆ ಸಾಧ್ಯವಾಗಲಿಲ್ಲ. ಹಾಗಾಗಿ, ನೇಪಾಳದ  ಅತಿದೊಡ್ಡ ಪಕ್ಷದ ನೇತಾರರಾಗಿರುವ ಕೆಪಿ ಶರ್ಮಾ ಓಲಿಯನ್ನು ಮತ್ತೆ ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ಒಲಿ ಇಂದೇ ಪ್ರಮಾಣ ವಚನ:
ನೇಪಾಳ (Nepal) ಸಂಸತ್ತಿನಲ್ಲಿ ಅತಿದೊಡ್ಡ ಪಕ್ಷವಾಗಿರುವ ಸಿಪಿಎನ್-ಯುಎಂಎಲ್  ನೇತಾರರಾಗಿರುವ ಕೆಪಿ ಶರ್ಮಾ ಓಲಿಯವರನ್ನು  ಪ್ರಧಾನ ಮಂತ್ರಿಯಾಗಿ ಮತ್ತೆ ನಿಯುಕ್ತಿ ಮಾಡುತ್ತಿರುವುದಾಗಿ ನೇಪಾಳದ ರಾಷ್ಟ್ರಪತಿ ಬಿದ್ಯಾ ದೇವಿ ಭಂಡಾರಿ (Bidya Devi Bhandari) ಹೇಳಿಕೆ ಹೊರಡಿಸಿದ್ದಾರೆ. ರಾಷ್ರಪತಿ ನಿವಾಸದಲ್ಲಿ ಶುಕ್ರವಾರವೇ ಕೆಪಿ ಶರ್ಮಾ ಓಲಿ  (KP Sharma Oli)  ನೇಪಾಳದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಮೂರು ದಿನಗಳ ಹಿಂದೆ ಕೆಪಿ ಶರ್ಮಾ ಓಲಿ ಪ್ರಧಾನಿ ಪದವಿಗೆ ರಾಜೀನಾಮೆ ನೀಡಿದ್ದರು. ಈ ಮೊದಲು ಓಲಿ ರಾಜೀನಾಮೆ ನಂತರ ಹೊಸ ಸರ್ಕಾರ ರಚಿಸುವಂತೆ ರಾಷ್ಟ್ರಪತಿ  ವಿಪಕ್ಷಗಳಿಗೆ ಗುರುವಾರ ರಾತ್ರಿ ತನಕದ ಸಮಯ ನೀಡಿದ್ದರು. ಆದರೆ ನೇಪಾಳ ಕಾಂಗ್ರೆಸ್ (Congress) ಮತ್ತು ನೇಪಾಳ ಕಮ್ಯುನಿಸ್ಟ್ ಪಾರ್ಟಿಗೆ (Communist party) ಬಹುಮತ ಸಿಗಲಿಲ್ಲ. 


ಇದನ್ನೂ ಓದಿ : Mask: ಅಮೇರಿಕನ್ನರಿಗೆ ಬಿಗ್ ರಿಲೀಫ್, Corona vaccine ಪಡೆದವರು ಈ ನಿಯಮ ಪಾಲಿಸುವ ಅಗತ್ಯವಿಲ್ಲ


ಪ್ರತಿಪಕ್ಷಗಳು ವಿಫಲವಾಗಿದ್ದೆಲ್ಲಿ..?
ನೇಪಾಳ ಕಾಂಗ್ರೆಸ್ ಗೆ ಪ್ರಚಂಡ ನೇತೃತ್ವದ ಸಿಪಿಎನ್ - ಮಾವೋವಾದಿ ಪಕ್ಷದ ಬೆಂಬಲ ಸಿಕ್ಕಿತ್ತು. ಆದರೆ, ಕೊನೆಯ ಹಂತದಲ್ಲಿ ಜನತಾ ಸಮಾಜವಾದಿ ಪಕ್ಷದ ಬೆಂಬಲ ಸಿಗಲಿಲ್ಲ. ಹಾಗಾಗಿ ಪ್ರತಿಪಕ್ಷಗಳ ಮೈತ್ರಿಕೂಟ ಸದನದಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಯಿತು. ಓಲಿ ಮತ್ತೆ ನೇಪಾಳದ ಪ್ರಧಾನಿಯಾದರು. 


ಇದನ್ನೂ ಓದಿ : Coronavirus: ಭಾರತದಲ್ಲಿ ಕರೋನಾ ಅನಿಯಂತ್ರಿತವಾಗಲು ಕಾರಣ ಬಿಚ್ಚಿಟ್ಟ WHO


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.