ಲಾಸ್ ವೇಗಾಸ್: ಅಮೆರಿಕಾದ ಲಾಸ್ ವೇಗಾಸ್ನ  ಮ್ಯಾಂಡಲೆ ಬೇ ಕ್ಯಾಸಿನೊ ಪ್ರದೇಶದಲ್ಲಿ ಬಂದೂಕುದಾರಿಯಿಂದ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 12 ಮಂದಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಲಾಸ್ ವೇಗಾಸ್ ನ ಪೋಲೀಸ್ ಅಧಿಕಾರಿ ಸ್ಟೀವ್ ಗೋಮೆಜ್, ಮಾಧ್ಯಮವೊಂದರಲ್ಲಿ ಮಾತನಾಡುತ್ತಾ ನಾವು ಶಂಕಿತನನ್ನು ನಾವು ಕೊಂಡಿದ್ದೇವೆ. ಈ ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. 


ವರದಿಯ ಪ್ರಕಾರ, ಲಾಸ್ ವೇಗಾಸ್ನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಈ ದುರಂತ ಸಂಭವಿಸಿದೆ. ಈ ಕಾರ್ಯಕ್ರಮದಲ್ಲಿ 30 ಸಾವಿರ ಜನ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.