ಅಮೇರಿಕಾದಲ್ಲಿ ಸ್ಥಾಪನೆಯಾದ 25 ಅಡಿ ಎತ್ತರದ ಆಂಜನೇಯ ಮೂರ್ತಿ, ತಯಾರಾಗಿದ್ದು ಎಲ್ಲಿ ಗೊತ್ತಾ?
ಆಂಜನೇಯ ಸ್ವಾಮಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಭಕ್ತರಿದ್ದಾರೆ.
ನವದೆಹಲಿ: ಆಂಜನೇಯ ಸ್ವಾಮಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಭಕ್ತರಿದ್ದಾರೆ. ಇದಕ್ಕೆ ಜೀವಂತ ಉದಾಹರಣೆ ಎಂದರೆ 25 ಅಡಿ ಎತ್ತರದ ಆಂಜನೇಯ ಸ್ವಾಮಿಯ ಮೂರ್ತಿ, ಇದನ್ನು ಅಮೆರಿಕಾದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಮೂರ್ತಿ ಎಷ್ಟೊಂದು ಭವ್ಯವಾಗಿದೆ ಎಂದರೆ ಎಲ್ಲೆಂದರಲೆಲ್ಲಾ ಈ ಮೂರ್ತಿಯ ಚರ್ಚೆಗಳು ನಡೆಯುತ್ತಿವೆ.
ವರದಿಗಳ ಪ್ರಕಾರ ಈ ಮೂರ್ತಿ ಅಮೆರಿಕಾದ ಡೆಲಾವೆಯರ್ ನಲ್ಲಿ ಸ್ಥಾಪಿಸಲಾಗಿದೆ. ಸ್ಥಳೀಯ ಮಾಧ್ಯಮ ಕೂಡ ಈ ಮೂರ್ತಿಗೆ ವ್ಯಾಪಕ ಪ್ರಚಾರ ನೀಡಿದೆ.
ಅಮೇರಿಕಾದಲ್ಲಿ ಪ್ರತಿಷ್ಠಾಪನೆಗೊಂಡಿರುವ ಈ ಮೂರ್ತಿಯ ಕುರಿತು ಇಷ್ಟೊಂದು ಚರ್ಚೆ ಯಾಕೆ ನಡೆಯುತ್ತಿದೆ ಎಂದರೆ, ಇದು ಹಿಂದೂ ದೇವರ ಅತಿ ದೊಡ್ಡ ಮೂರ್ತಿಯಾಗಿದೆ.
ಈ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಗ್ರ್ಯಾನೈಟ್ ಕಲ್ಲಿನಿಂದ ತಯಾರಿಸಲಾಗಿದೆ. ಮೂರ್ತಿಯ ಮೇಲೆ ಸುಂದರ ಕರಕುಶಲತೆಯನ್ನು ಕೆತ್ತಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಹಿಂದೂ ಟೆಂಪಲ್ ಆಫ್ ಡೋಲಾವೆಯರ್ ಅಸೋಸಿಯೇಷನ್ ಅಧ್ಯಕ್ಷ ಪತಿಬಂದ್ ಶರ್ಮಾ, "ಇದರ ತೂಕ 45 ಟನ್ ಗಳಷ್ಟಾಗಿದ್ದು, ಇದನ್ನು ತೆಲಂಗಾಣ ರಾಜ್ಯದ ವಾರಂಗಲ್ ನಿಂದ ಆಮದು ಮಾಡಿಕೊಳ್ಳಲಾಗಿದೆ: ಎಂದು ಹೇಳಿದ್ದಾರೆ