ಪಾಕಿಸ್ತಾನದಲ್ಲಿ ಭೂಕಂಪ: ಇಂದು ಬೆಳ್ಳಂಬೆಳಿಗ್ಗೆ 6.18 ರ ಸುಮಾರಿಗೆ ಪಾಕಿಸ್ತಾನದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.1ರಷ್ಟಿತ್ತು.  ಆದಾಗ್ಯೂ, ಯಾವುದೇ ಜೀವ ಹಾನಿ ಆಗಿಲ್ಲ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಪಾಕಿಸ್ತಾನದಲ್ಲಿ ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ ಭೂಕಂಪದಿಂದಾಗಿ ಮನೆಯಲ್ಲಿಟ್ಟಿದ್ದ ವಸ್ತುಗಳು ಅಲುಗಾಡಿದ್ದು ವಸ್ತುಗಳೆಲ್ಲಾ ಅಲ್ಲೋಲ ಕಲ್ಲೋಲವಾಗಿದೆ. ಈ ಸಂದರ್ಭದಲ್ಲಿ ಜನರು ಮನೆಗಳಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಜೊತೆಗೆ, ಅಫ್ಘಾನಿಸ್ತಾನ ಮತ್ತು ಇರಾನ್‌ನಲ್ಲಿಯೂ ಇದರ ಪರಿಣಾಮಗಳು ಕಂಡುಬಂದಿದೆ. ಈ ಪ್ರದೇಶಗಳಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿಗಳು ಬಂದಿವೆ.


ಇದನ್ನೂ ಓದಿ- ಶೀಘ್ರದಲ್ಲೇ ಮತ್ತೊಂದು ಹೊಸ ಕೊರೊನಾ ರೂಪಾಂತರ ಹೊರಹೊಮ್ಮುವ ಸಾಧ್ಯತೆ..!


ಭೂಕಂಪದ ನಂತರ ಈ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜನರು ಭಯಭೀತರಾಗಿದ್ದಾರೆ. ಆದರೂ ಶಾಂತಿ ಕಾಪಾಡಿ ತಾಳ್ಮೆಯಿಂದ ಇರುವಂತೆ ಆಡಳಿತ ಮಂಡಳಿ ಸಾರ್ವಜನಿಕರಿಗೆ ಮನವಿ ಮಾಡಿದೆ.


ಕಚ್‌ನಲ್ಲಿಯೂ ಭೂಕಂಪ:
ಪಾಕಿಸ್ತಾನದ ಗಡಿಯಲ್ಲಿರುವ ಕಚ್ ಕೂಡ ಇತ್ತೀಚೆಗೆ ಭೂಕಂಪಕ್ಕೆ ತುತ್ತಾಗಿತ್ತು. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 3.0 ಇತ್ತು. ಭೂಕಂಪದ ಕೇಂದ್ರ ಬಿಂದು ಗರ್ಶಿಶಾದಿಂದ 14 ಕಿ.ಮೀ. ಹಿಂದಿನ ದಿನ, ಗಿರ್ ಸೋಮನಾಥದಲ್ಲಿ ತಲಾಲಾ ಭೂಕಂಪದ ನಂತರ ಜನರು ಭಯಭೀತರಾಗಿ ಮನೆಗಳಿಂದ ಹೊರಬಂದಿದ್ದರು.


ಭೂಕಂಪಗಳು ಏಕೆ ಸಂಭವಿಸುತ್ತವೆ ಗೊತ್ತಾ?
ಭೂಮಿಯೊಳಗೆ 7 ಫಲಕಗಳಿವೆ, ಅವು ನಿರಂತರವಾಗಿ ತಿರುಗುತ್ತಿರುತ್ತವೆ. ಈ ಫಲಕಗಳು ಎಲ್ಲಿ ಹೆಚ್ಚು ಡಿಕ್ಕಿ ಹೊಡೆಯುತ್ತವೆಯೋ ಆ ವಲಯವನ್ನು ಫಾಲ್ಟ್ ಲೈನ್ ಎಂದು ಕರೆಯಲಾಗುತ್ತದೆ. ಪುನರಾವರ್ತಿತ ಘರ್ಷಣೆಯಿಂದಾಗಿ, ಫಲಕಗಳ ಮೂಲೆಗಳಲ್ಲಿ ಹೆಚ್ಚಿನ ಒತ್ತಡವು ನಿರ್ಮಾಣವಾದಾಗ, ಫಲಕಗಳು ಒಡೆಯುತ್ತವೆ ಮತ್ತು ಕೆಳಗಿನ ಶಕ್ತಿಯು ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ.  ಈ ಅಡಚಣೆಯ ನಂತರ ಭೂಕಂಪ ಸಂಭವಿಸುತ್ತದೆ.


Knowledge Story: OK ಎಂಬುದರ ಪೂರ್ಣ ರೂಪ ನಿಮಗೆ ತಿಳಿದಿದೆಯೇ? ಆಸಕ್ತಿಕರ ಮಾಹಿತಿ ಇಲ್ಲಿದೆ
 
ಭೂಕಂಪವು ಇಷ್ಟು ವಿನಾಶವನ್ನು ಯಾವಾಗ ತರುತ್ತದೆ?


ರಿಕ್ಟರ್ ಮಾಪಕದಲ್ಲಿ ತೀವ್ರತೆ ಪರಿಣಾಮ
0 ರಿಂದ 1.9 ಇದನ್ನು ಸೀಸ್ಮೋಗ್ರಾಫ್ ಮೂಲಕ ಮಾತ್ರ ನೋಡಬಹುದು.
2 ರಿಂದ 2.9 ಸೌಮ್ಯವಾದ ಕಂಪನ.
3 ರಿಂದ 3.9 ಟ್ರಕ್ ನಿಮ್ಮ ಬಳಿ ಹಾದು ಹೋದರೆ, ಅಂತಹ ಪರಿಣಾಮ.
4 ರಿಂದ 4.9 ಕಿಟಕಿಗಳು ಒಡೆಯಬಹುದು. ಗೋಡೆಗಳ ಮೇಲೆ ನೇತಾಡುವ ಚೌಕಟ್ಟುಗಳು ಬೀಳಬಹುದು.
5 ರಿಂದ 5.9 ಪೀಠೋಪಕರಣಗಳು ಚಲಿಸಬಹುದು.
6 ರಿಂದ 6.9 ಕಟ್ಟಡಗಳ ಅಡಿಪಾಯ ಬಿರುಕು ಬಿಡಬಹುದು. ಮೇಲಿನ ಮಹಡಿಗಳು ಹಾನಿಗೊಳಗಾಗಬಹುದು.
7 ರಿಂದ 7.9 ಕಟ್ಟಡಗಳು ಬೀಳುತ್ತವೆ. ನೆಲದೊಳಗೆ ಪೈಪ್‌ಗಳು ಒಡೆಯುತ್ತವೆ
8 ರಿಂದ 8.9 ಕಟ್ಟಡಗಳು ಸೇರಿದಂತೆ ದೊಡ್ಡ ಸೇತುವೆಗಳು ಸಹ ಕುಸಿಯುತ್ತವೆ. ಸುನಾಮಿ ಭೀತಿ ಎದುರಾಗಬಹುದು.
9 ಮತ್ತು ಹೆಚ್ಚಿನದು ಸಂಪೂರ್ಣ ವಿನಾಶ.  ಸಮುದ್ರವು ಹತ್ತಿರದಲ್ಲಿದ್ದರೆ, ಸುನಾಮಿ ಉಂಟಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.