Earthquake in China Xinjiang: ಸೋಮವಾರ (ಜನವರಿ 22, 2024) ರಾತ್ರಿ ಭಾರತದ ನೆರೆಯ ರಾಷ್ಟ್ರ ಚೀನಾದ ದಕ್ಷಿಣ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಇದರ  ತೀವ್ರತೆ 7.2 ಎಂದು ದಾಖಲಾಗಿದೆ. ಚೀನಾದಲ್ಲಿ ಭೂಕಂಪದ ಬಳಿಕ ಭಾರತದ ರಾಜಧಾನಿ ದೆಹಲಿ ಹಾಗೂ ಅದರ ಸುತ್ತಮುತ್ತಲಿನ ಎನ್‌ಸಿ‌ಆರ್‌ ಪ್ರದೇಶಗಳಲೂ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿಯಾಗಿದೆ. 


COMMERCIAL BREAK
SCROLL TO CONTINUE READING

ಚೀನಾದ ದಕ್ಷಿಣ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಜನವರಿ 22, 2024ರಂದು  23:39ರಾತ್ರಿ ಸುಮಾರು 11:39ರ ವೇಳೆಗೆ ಭೂಕಂಪ ಸಂಭವಿಸಿದೆ. ಕಂಪನಗಳು ಅಕ್ಷಾಂಶ 40.96 ಮತ್ತು ರೇಖಾಂಶ 78.30 ನಲ್ಲಿ ಕೇಂದ್ರೀಕೃತವಾಗಿವೆ ಮತ್ತು 80 ಕಿಮೀ ಆಳದಲ್ಲಿ ನೆಲೆಗೊಂಡಿವೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ತಿಳಿಸಿದೆ. 


ಜಪಾನ್ ನಲ್ಲಿ ಭೂಕಂಪಕ್ಕೆ ಉಯ್ಯಾಲೆಯಂತೆ ತೂಗಾಡಿದ ಕಟ್ಟಡಗಳು ! ಇಲ್ಲಿದೆ ವಿಡಿಯೋ


ಭೂಕಂಪದಿಂದಾಗಿ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಭೂಕಂಪದ ತೀವ್ರತೆಯಿಂದಾಗಿ ಚೀನಾದ  ಕಿರ್ಗಿಸ್ತಾನ್-ಕ್ಸಿನ್‌ಜಿಯಾಂಗ್ ಗಡಿಯಲ್ಲಿ ಕೆಲವು ಮನೆಗಳು ಕುಸಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪದ ನಂತರ ಕ್ಸಿನ್‌ಜಿಯಾಂಗ್ ರೈಲ್ವೆ ಇಲಾಖೆಯು ತಕ್ಷಣವೇ ಕಾರ್ಯಾಚರಣೆಯನ್ನು  ಸ್ಥಗಿತಗೊಳಿಸಿದ್ದು  27 ರೈಲು ಸಂಚಾರವನ್ನು ನಿಲ್ಲಿಸಲಾಗಿದೆ. 


ಚೀನಾದ ಮಾಧ್ಯಮಗಳ ಪ್ರಕಾರ, ಚೀನಾದ ವಾಯುವ್ಯ ಪ್ರದೇಶದಲ್ಲಿ ವೂಶಿ ಕೌಂಟಿಯ ಕೇಂದ್ರಬಿಂದುವಿನ ಬಳಿ 3.0 ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣದ 14 ಆಘಾತಗಳು ದಾಖಲಾಗಿವೆ. ಭೂಕಂಪದ ಕೇಂದ್ರದಿಂದ ಸುಮಾರು 17 ಕಿ.ಮೀ ದೂರದಲ್ಲಿ 5.3 ತೀವ್ರತೆಯ ನಂತರದ ಕಂಪನ ಸಂಭವಿಸಿದೆ.


ಇದನ್ನೂ ಓದಿ- China Earthquake: ಚೀನಾದಲ್ಲಿ ಪ್ರಬಲ ಭೂಕಂಪ, 110ಕ್ಕೂ ಹೆಚ್ಚು ಮಂದಿ ಮೃತ, ಹಲವರಿಗೆ ಗಾಯ


ಚೀನಾದಲ್ಲಿ ಭೂಕಂಪದ ಬಳಿಕ ಸರಿಸುಮಾರು 1,400 ಕಿಲೋಮೀಟರ್ ದೂರದಲ್ಲಿರುವ ನವದೆಹಲಿಯಲ್ಲೂ ಭೂಮಿ ಕಂಪಿಸಿರುವ ಬಗ್ಗೆ ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ. ಇದಲ್ಲದೆ, ಸಮೀಪದ ಕಝಾಕಿಸ್ತಾನ್‌ನಲ್ಲಿ, ತುರ್ತು ಸಚಿವಾಲಯವು 6.7 ತೀವ್ರತೆಯೊಂದಿಗೆ ಒಂದೇ ರೀತಿಯ ಭೂಕಂಪವನ್ನು ದಾಖಲಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.