ಕೋಲಂಬೋ: ಇತ್ತೀಚಿಗೆ ಶ್ರೀಲಂಕಾದ ಪ್ರಧಾನಿಯಾಗಿ ನೇಮಕವಾಗಿದ್ದ ಮಹಿಂದಾ ರಾಜಪಕ್ಸೆ ಅವರ ಆಯ್ಕೆ ನಡೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು, ಈಗ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್ ನ್ಯಾಯಯುತವಾಗಿ ಈ ವಿಚಾರ ಬಗೆ ಹರಿಯುವವರೆಗೂ ಯಾವುದೇ ನಿರ್ಧಾರ ತಗೆದುಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.


COMMERCIAL BREAK
SCROLL TO CONTINUE READING

ಕಳೆದ ಅಕ್ಟೋಬರ್ 26 ರಿಂದ ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರು ರಣೀಲ್ ವಿಕ್ರಮಸಿಂಘೆ ಅವರನ್ನು ಪ್ರಧಾನಿ ಹುದ್ದೆಯಿಂದ ಕಿತ್ತಾಕಿ ರಾಜಪಕ್ಸೆಯವರನ್ನು ಪ್ರಧಾನಿಯನ್ನಾಗಿ ನೇಮಕ ಮಾಡಿದ್ದರು. ನಂತರ ಈ ನಡೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು ,


ಈಗ ವಿಚಾರದಲ್ಲಿ ಮಧ್ಯ ಪ್ರವೇಶಿಸಿರುವ ಸುಪ್ರೀಂಕೋರ್ಟ್ ಪ್ರಧಾನಿಯಾಗಿ ಅವರು ಯಾವುದೇ ಮಹತ್ವದ ನಿರ್ಧಾರವನ್ನು ತಗೆದುಕೊಳ್ಳುವ ಹಾಗಿಲ್ಲ ಎಂದು ತಿಳಿಸಿದೆ.ರಾಜಪಕ್ಸೆ ಅವರು ವಿರುದ್ದ ಸಂಸತ್ತಿನಲ್ಲಿ ಎರಡು ಬಾರಿ ಅವಿಶ್ವಾಸಮತ ಗೊತ್ತುವಳಿ ಜಾರಿಗೆ ತಂದಿದ್ದರು ಸಹಿತಪ್ರಧಾನಿ ಹುದ್ದೆಯಿಂದ ತೊರೆದಿರಲಿಲ್ಲ ಈ ಹಿನ್ನಲೆಯಲ್ಲಿ ಈಗ ಕೋರ್ಟ್ ಮಧ್ಯಪ್ರವೇಶಿಸಿದೆ.