ಕೊಲಂಬೊ:ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರ ವಿವಾದಾತ್ಮಕ ನಡೆಯಿಂದ ಪ್ರಧಾನಿಯಾಗಿ ನೇಮಕವಾಗಿದ್ದ ಮಹಿಂದಾ ರಾಜಪಕ್ಸೆ ಭಾನುವಾರದಂದು  ಎಸ್ಎಲ್ಎಫ್ಪಿ ಪಕ್ಷದೊಂದಿಗೆ ಇದ್ದ ಐದು ದಶಕಗಳ ಸಂಬಂಧಕ್ಕೆ ವಿದಾಯ ಹೇಳಿದರು.


COMMERCIAL BREAK
SCROLL TO CONTINUE READING

ಸಿರಿಸೇನಾ ಅವರ ಶ್ರೀಲಂಕಾ ಫ್ರೀಡಂ ಪಾರ್ಟಿ ಜೊತೆ ಹೊಂದಿದ್ದ ಸುಧೀರ್ಘ ಕಾಲಗಳ ಸಂಬಂಧಕ್ಕೆ ಗುಡ್ ಬೈ ಹೇಳಿ ಈಗ ಹೊಸದಾಗಿ ಘೋಷಿಸಿರುವ ಶ್ರೀಲಂಕಾ ಪಿಪಲ್ಸ್ ಪಾರ್ಟಿಗೆ ಸೇರಿದ್ದಾರೆ. ಆ ಮೂಲಕ  ಜನವರಿ 5 ರಂದು ನಡೆಯುವ ಚುನಾವಣೆಯಲ್ಲಿ ಹೊಸದಾಗಿ ಘೋಷಣೆಯಾಗಿರುವ ಪಕ್ಷದ ಮೂಲಕ ಅವರು ಸ್ಪರ್ಧಿಸಲಿದ್ದಾರೆ.


ಮಹಿಂದಾ ರಾಜಪಕ್ಸೆ ಅವರ ತಂದೆ ಡಾನ್ ಆಲ್ವಿನ್ ಅವರು 1951ರಲ್ಲಿ ಸ್ಥಾಪಿಸಲಾಗಿರುವ  ಶ್ರೀಲಂಕಾ ಫ್ರೀಡಂ ಪಾರ್ಟಿ ಸ್ಥಾಪಕ ಸದಸ್ಯರಾಗಿದ್ದರು.ಈಗ ಮಹಿಂದಾ ರಾಜಪಕ್ಷೆ ಬೆಂಬಲಿಗರು ಕಳೆದ ವರ್ಷ ಮರು ರಾಜಕೀಯಕ್ಕೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ  ಶ್ರೀಲಂಕಾ ಫ್ರೀಡಂ ಪಾರ್ಟಿ ಪ್ರಾರಂಭಿಸಿದ್ದರು.ಈ ಪಕ್ಷವು ಫೆಬ್ರುವರಿಯಲ್ಲಿ ನಡೆದ ಸ್ಥಳೀಯ ಕೌನ್ಸಿಲ್ ಚುನಾವಣೆಯಲ್ಲಿ 340ಸ್ಥಾನಗಳಲ್ಲಿ ಮೂರನೇ ಎರಡರಷ್ಟು ಸ್ಥಾನಗಳನ್ನು ಗಳಿಸಿತ್ತು. 2005 ರಿಂದ ದಶಕಗಳ ಕಾಲ ಶ್ರೀಲಂಕಾವನ್ನು ಆಳಿದ್ದ ರಾಜಪಕ್ಷೆ 2015 ರಲ್ಲಿ ಅಚ್ಚರಿ ಎನ್ನುವ ರೀತಿಯಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತಿದ್ದರು. ಈಗ ಮಹಿಂದಾ ರಾಜಪಕ್ಷೆ  ನೂತನ ಪಕ್ಷದ ಮೂಲಕ ಸಕ್ರೀಯ ಮರು ರಾಜಕೀಯಕ್ಕೆ ಪ್ರವೇಶಿಸಿದ್ದಾರೆ.