ಮಹಿಂದಾ ರಾಜಪಕ್ಸೆ ಶ್ರೀಲಂಕಾದ ಅಧಿಕೃತ ಪ್ರಧಾನಿಯಲ್ಲ ಎಂದ ಸ್ಪೀಕರ್!
ಶ್ರೀಲಂಕಾದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿ ಮಹಿಂದ್ ರಾಜಪಕ್ಸೆಯವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿರುವುದನ್ನು ಸ್ಪೀಕರ್ ಅಧಿಕೃತವೆಂದು ಪರಿಗಣಿಸಿಲ್ಲ!
ನವದೆಹಲಿ: ಶ್ರೀಲಂಕಾದ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿ ಮಹಿಂದ್ ರಾಜಪಕ್ಸೆಯವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿರುವುದನ್ನು ಸ್ಪೀಕರ್ ಅಧಿಕೃತವೆಂದು ಪರಿಗಣಿಸಿಲ್ಲ!
ಹೌದು, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಹಿಂದಾ ರಾಜಪಕ್ಸೆಯವರ ಇತ್ತೀಚೆಗಷ್ಟೇ ಶ್ರೀಲಂಕಾದ ಪ್ರಧಾನಿಯಾಗಿ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಎದುರು ಪ್ರಮಾಣ ವಚನ ಸ್ವೀಕರಿಸಿದ್ದರು.ಈಗ ಈ ನಡೆಯನ್ನು ಪ್ರಶ್ನಿಸಿ ಶ್ರೀಲಂಕಾ ಸಂಸತ್ತಿನ ಸ್ಪೀಕರ್ ಕಾರು ಜಯಸೂರ್ಯ ಅವರು ಈಗ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಇನ್ನೊಂದೆಡೆ ವಿಕ್ರಮಸಿಂಘೆ ಕೂಡ ಪ್ರಧಾನಮಂತ್ರಿ ಹುದ್ದೆಯಿಂದ ನಿರ್ಗಮಿಸಲು ನಿರಾಕರಿಸಿದ್ದಾರೆ.ತಮ್ಮನ್ನು ಪದಚ್ಯುತಗೊಳಿಸಿದ್ದು ಅಕ್ರಮವಾದದ್ದು ತಾವು ಸದನದಲ್ಲಿ ಇನ್ನು ಕೂಡ ಬಹುಮತವನ್ನು ಹೊಂದಿರುವುದಾಗಿ ತಿಳಿಸಿದರು.ಅಲ್ಲದೆ ತುರ್ತು ಅಧಿವೇಶನವನ್ನು ಕರೆಯಲು ಅವರು ಮನವಿ ಮಾಡಿದ್ದಾರೆ.ಇದಕ್ಕೆ ಸ್ಪೀಕರ್ ಜಾರು ಜಯಸೂರ್ಯ ಬೆಂಬಲ ವ್ಯಕ್ತಪಡಿಸಿದ್ದು ವಿಕ್ರಮಸಿಂಘೆ ಅವರೆ ಶ್ರೀಲಂಕಾದ ಅಧಿಕೃತ ಪ್ರಧಾನಿ ಆದ್ದರಿಂದ ಅವರಿಗೆ ಎಲ್ಲ ರೀತಿಯ ರಕ್ಷಣೆ ಮತ್ತು ಸೌಲಭ್ಯವನ್ನು ಬಹುಮತ ಸಾಭೀತಾಗುವವರೆಗೆ ನೀಡಬೇಕೆಂದು ಅವರು ತಿಳಿಸಿದ್ದಾರೆ.