ನವದೆಹಲಿ:ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಈಗ ಶ್ರೀಲಂಕಾದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಶುಕ್ರವಾರಂದು ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರ ಸಮ್ಮುಖದಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ಬಗ್ಗೆ  ಶ್ರೀಲಂಕಾದ ಮಾಧ್ಯಮಗಳು ವರದಿ ಮಾಡಿವೆ.ದೂರದರ್ಶನದಲ್ಲಿ ಪ್ರಸಾರವಾದ ದೃಶ್ಯವೊಂದರಲ್ಲಿ ಮಹಿಂದ್ ರಾಜಪಕ್ಸೆ ಅಧ್ಯಕ್ಷ ಮೈಥಿಪ್ರಲಾ ಸಿರಿಸೇನಾ ಅವರ ಮುಂದೆ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭಕ್ಕೆ ವಿರೋಧ ಪಕ್ಷದ ನಾಯಕರು ಸಾಕ್ಷಿಯಾದರು.



ಈಗ ಪ್ರಧಾನಿ ರಣೀಲ್ ವಿಕ್ರಸಿಂಗೇ ಅವರ ಸ್ಥಾನವನ್ನು ಮಹಿಂದ್ ರಾಜಪಕ್ಸೆ ಅಲಂಕರಿಸುವ ಮೂಲಕ  ಶ್ರೀಲಂಕಾದ 11 ನೇ ಪ್ರಧಾನಿಯಾಗಿ ಆಯ್ಕೆಯಾದರು.ಇದಕ್ಕೂ ಮುಂಚೆ ಅವರು 2015 ರವರೆಗೂ ಶ್ರೀಲಂಕಾದ ಆರನೇ ಅಧ್ಯಕ್ಷರಾಗಿ ರಾಜಪಕ್ಸ ಅವರು ಸೇವೆ ಸಲ್ಲಿಸಿದ್ದರು ಮತ್ತು 2004 ರಲ್ಲಿ ಪ್ರಧಾನಿಯಾಗಿಯೂ ಕಾರ್ಯನಿರ್ವಹಿಸಿದ್ದರು.