ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೋವೊಂದರಲ್ಲಿ ವ್ಯಕ್ತಿಯೊಬ್ಬ ಬಿರುಗಾಳಿ ಹೊಡೆತಕ್ಕೆ ಸಿಕ್ಕು ಛತ್ರಿಯ ಜೊತೆಗೆ ಹಾರಿದ ದೃಶ್ಯ ಈಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.


COMMERCIAL BREAK
SCROLL TO CONTINUE READING


ಈ ಘಟನೆಯೂ ಟರ್ಕಿಯ ಓಸ್ಮಾನಿ ಪ್ರಾಂತ್ಯದಲ್ಲಿ ನಡೆದಿದ್ದು, ಸಾಡಿಕ್ ಕೋಕಾಡಲಿ ಎನ್ನುವ ವ್ಯಕ್ತಿಯೂ ಗಾಳಿಯರಬಸವನ್ನು ತಪ್ಪಿಸಿಕೊಳ್ಳಲು ಛತ್ರಿಯ ಕೆಳಗೆ ಆಶ್ರಯ ಪಡೆಯಲು ಬಂದಾಗ ಏಕಾಏಕಿ ಆ ಛತ್ರಿ ಮೂಲಕ ಆತನೂ ಕೂಡ ಹಾರಿ ಹೋಗುತ್ತಿರುವ ಸಂಗತಿ ನಿಜಕ್ಕೂ ಎಲ್ಲರನ್ನು ಅಚ್ಚರಿಗೊಳಿಸಿದೆ.


ಈಗ ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ ಸಾಕಷ್ಟು ಬಾರಿ ಶೇರ್ ಮಾಡಲಾಗಿದೆ.ಟರ್ಕಿ ಮೂಲದ ಪತ್ರಿಕೆಯೊಂದಕ್ಕೆ ಮಾತನಾಡಿರುವ ಈ ವ್ಯಕ್ತಿ " ನನಗೆ ಚೆನ್ನಾಗಿದ್ದೇನೆ.ಛತ್ರಿ ಮೇಲಕ್ಕೆ ಹಾರಿ ಹೋಗುತ್ತಿದ್ದ ಸಂದರ್ಭದಲ್ಲಿ ತಕ್ಷಣ 3,4 ಮೀಟರ್ ದಿಂದ ಹಾರಿದ್ದೇನೆ ಎಂದು ಹೇಳಿದರು.ಆದರೆ ಈತನ ಜೊತೆಯಿದ್ದ ಇನ್ನೊಬ್ಬ ವ್ಯಕ್ತಿಯು ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.