ರೈಲಿನಲ್ಲಿ ಇತ್ತೀಚೆಗೆ ಕೋಳಿಗಳನ್ನು, ಕುರಿಗಳನ್ನು ಪ್ರಯಾಣಿಕರು ತಮ್ಮೊಂದಿಗೆ ಕರೆದೊಯ್ಯಲು ಪ್ರಯತ್ನಿಸಿದ್ದ ಘಟನೆಗಳು ಭಾರತದಲ್ಲಿ ಬೆಳಕಿಗೆ ಬಂದಿದ್ದವು. ಆದರೆ ಇದೀಗ ಆಸ್ಟ್ರೇಲಿಯಾದ ಭೂಪನೊಬ್ಬ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕುದುರೆಯನ್ನು ರೈಲಿನಲ್ಲಿ ಕರೆದೊಯ್ದಿದ್ದಾನೆ. ಇದೀಗ ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಆಸ್ಟ್ರೇಲಿಯಾದ ಸ್ಟೈರಿಯಾ ರಾಜ್ಯದ ವ್ಯಕ್ತಿಯೊಬ್ಬ ತನ್ನ ಕುದುರೆ ಫ್ರಿಡಾ ಜೊತೆ ಎರಡು ರೈಲು ಹತ್ತಲು ಪ್ರಯತ್ನಿಸಿದ್ದಾನೆ. ಆದರೆ ರೈಲು ನಿರ್ವಾಹಕರು ಆತನನ್ನು ಕುದುರೆಯೊಂದಿಗೆ ಪ್ರಯಾಣಿಸಲು ತಡೆದಿದ್ದಾರೆ. ಈ ಸನ್ನಿವೇಶ ಅಲ್ಲಿದ್ದ ಇತರ ಪ್ರಯಾಣಿಕರನ್ನು ನಗೆಗಡಲಲ್ಲಿ ಮುಳುಗುಸಿತು. 



ಈ ಫೋಟೋವನ್ನು ಅಲ್ಲಿನ ಒಬಿಬಿ ಸೋಷಿಯಲ್ ಮೀಡಿಯಾ ಟೀಂ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.