Marburg Virus: ಪಶ್ಚಿಮ ಆಫ್ರಿಕಾದ ಗಿನಿ ದೇಶದಲ್ಲಿ ದೊರೆತ ಮಾರಕ ಮಾರಬರ್ಗ್ ವೈರಸ್ ಮೊದಲ ಪ್ರಕರಣ, ಇಲ್ಲಿದೆ ವಿವರ
Marburg Virus Cases - ಮಾರ್ಬರ್ಗ್ ವೈರಸ್ ಸಾಮಾನ್ಯವಾಗಿ ಗುಹೆಗಳು ಅಥವಾ ಗಣಿಗಳಲ್ಲಿ ರೂಸೆಟಸ್ ಹೆಸರಿನ ಬಾವಲಿಗಳಲ್ಲಿ ಕಂಡುಬರುತ್ತದೆ. ಇದರ ಮರಣ ಪ್ರಮಾಣವು ಶೇ.88 ರಷ್ಟಿದೆ.
ನವದೆಹಲಿ: Marburg Virus Cases - ಕೊರೊನಾ ವಿರುದ್ಧ ಹೋರಾಡುತ್ತಿರುವ ವಿಶ್ವದ ಮುಂದೆ ಮತ್ತೊಂದು ವೈರಸ್ ಸವಾಲು ಮುಂದೆಬಂದಿದೆ. ಪಶ್ಚಿಮ ಆಫ್ರಿಕಾದ ಗಿನಿ (Guinea) ದೇಶದಲ್ಲಿ Marburg virus ಹರಡುವಿಕೆಯ ಕುರಿತು ವಿಶ್ವ ಆರೋಗ್ಯ ಸಂಸ್ಥೆ (World Health Organization) ಮಾಹಿತಿ ನೀಡಿದೆ. ಪಶ್ಚಿಮ ಆಫ್ರಿಕಾದಲ್ಲಿ ಇದರ ಮೊದಲ ಪ್ರಕರಣ ಪತ್ತೆಯಾಗಿದೆ ಎಂದು WHO ಹೇಳಿದೆ. ಇದೊಂದು ಮಾರಕ ವೈರಸ್ ಆಗಿದ್ದು, ಇದು ಎಬೋಲಾಗೆ (Ebola Virus) ಸಂಬಂಧಿಸಿದೆ ಹಾಗೂ ಕೊರೊನಾ ರೀತಿಯೇ ಪ್ರಾಣಿಗಳಿಂದ ಮನುಷ್ಯನಿಗೆ ಹರಡಿದೆ ಎಂದು ಹೇಳಿದೆ.
ಈ ವೈರಸ್ ಬಾವಲಿಗಳಲ್ಲಿ ಹರಡುತ್ತದೆ ಹಾಗೂ ಶೇ.88ರಷ್ಟು ಮೃತ್ಯುದರ ಹೊಂದಿದೆ. ಆಗಸ್ಟ್ 2ರಂದು ದಕ್ಷಿಣದ ಗುಯೇಕೆಡೌ ಪ್ರಾಂತ್ಯದಲ್ಲಿ ಓರ್ವ ವ್ಯಕ್ತಿ ಈ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾನೆ. ಆ ವ್ಯಕ್ತಿಯ ಸ್ಯಾಂಪಲ್ ನಲ್ಲಿ ಈ ವೈರಸ್ ಪತ್ತೆಯಾಗಿದೆ. ಪೋಸ್ಟ್ ಮಾರ್ಟಂ ವರದಿಯಲ್ಲಿ ಆ ವ್ಯಕ್ತಿಯ ನಮೂನೆಯಲ್ಲಿ ಎಬೋಲಾ ಪತ್ತೆಯಾಗಿಲ್ಲ ಮತ್ತು ಮಾರ್ಬರ್ಗ್ ವೈರಸ್ ಇರುವುದು ಪತ್ತೆಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಆಫ್ರಿಕಾದಲ್ಲಿರುವ WHO ಪ್ರಾದೇಶಿಕ ನಿರ್ದೇಶಕ ಡಾ.ಮಾತ್ಸಿದಿಸೋ ಮೊಯೇತಿ, ಮಾರ್ಬರ್ಗ್ ವೈರಸ್ ಅನ್ನು ದೂರ ದೂರದವರೆಗೆ ಹರಡುವುದನ್ನು ತಡೆಯಲು, ಅದನ್ನು ನಾವು ಟ್ರ್ಯಾಕ್ ನಲ್ಲಿಡುವ ಅವಶ್ಯಕತೆ ಇದೆ" ಎಂದಿದ್ದಾರೆ.
ಎರಡು ತಿಂಗಳ ಹಿಂದೆಯೇ ಗಿನಿಯಲ್ಲಿ ಎಬೋಲಾ ವೈರಸ್ ಅಂತ್ಯವಾಗಿದೆ ಎಂದು WHO ಘೋಷಿಸಿರುವ ಬೆನ್ನಲ್ಲೇ ಇದೀಗ ಮಾರ್ಬರ್ಗ್ ವೈರಸ್ ಪತ್ತೆಯಾಗಿರುವುದು ಇಲ್ಲಿ ಗಮನಾರ್ಹ. ಕಳೆದ ವರ್ಷ ಅಲ್ಲಿ ಎಬೋಲಾ ವೈರಸ್ ವ್ಯಾಪಕವಾಗಿ ಹರಡಿತ್ತು ಮತ್ತು 12 ಜನರ ಪ್ರಾಣ ತೆಗೆದಿಟ್ಟು. ಸದ್ಯ ಪ್ರಾದೇಶಿಕ ಮಟ್ಟದಲ್ಲಿ ಮಾರ್ಬರ್ಗ್ ವೈರಸ್ ಪ್ರಭಾವ ಹೆಚ್ಚಾಗಿದೆ ಆದರೆ ಜಾಗತಿಕ ಮಟ್ಟದಲ್ಲಿ ಕಡಿಮೆಯಾಗಿದೆ ಎಂದು WHO ಹೇಳಿದೆ.
ಇದನ್ನೂ ಓದಿ-Coronavirus Delta Variant: ಮಕ್ಕಳಲ್ಲಿ ಕರೋನಾ ಸೋಂಕಿನ ಪ್ರಕರಣಗಳಲ್ಲಿ ಭಾರೀ ಏರಿಕೆ
"ಪ್ರಸ್ತುತ ನಾವು ಆರೋಗ್ಯ ಅಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಇದರಲ್ಲಿ ನಾವು ಎಬೋಲಾ ನಿರ್ವಹಣೆಯಲ್ಲಿ ಗಿನಿಯ ಅನುಭವ ಹಾಗೂ ವಿಶೇಷಜ್ಞತೆಯ ಆದಾರದ ಮೇಲೆ ಇಸ್ ವೈರಸ್ ಅನ್ನು ತಡೆಯುಲು ಕಾರ್ಯನಿರ್ವಹಿಸಲು ಯತ್ನಿಸುತ್ತಿದ್ದೇವೆ" ಎಂದು ಮೊಯೇತಿ ಹೇಳಿದ್ದಾರೆ. ಗಿನಿ ಸರ್ಕಾರ ಕೂಡ ಹೇಳಿಕೆಯೊಂದರಲ್ಲಿ ಮಾರ್ಬರ್ಗ್ ವೈರಸ್ ಪ್ರಕರಣವನ್ನು ಖಚಿತಪಡಿಸಿದೆ.
ಇದನ್ನೂ ಓದಿ-Good News: ವಾಹನ ಸವಾರರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ... ಶೀಘ್ರದಲ್ಲಿಯೇ ಪೆಟ್ರೋಲ್ ಡಿಸೇಲ್ ಬೆಲೆ...!
ಸಾಮಾನ್ಯವಾಗಿ ಮಾರ್ಬರ್ಗ್ ವೈರಸ್ ಗುಹೆಗಳು ಅಥವಾ ಗಣಿಗಳಲ್ಲಿ ಕಂಡು ಬರುತ್ತದೆ ಎಂದು WHO ಹೇಳಿದೆ. ಈ ಗಣಿಗಳು ಅಥವಾ ಗುಹೆಗಳಲ್ಲಿ ರೌಸೆಟಸ್ ಬಾವಲಿಗಳು ವಾಸಿಸುತ್ತವೆ. WHO ಪ್ರಕಾರ, ಒಂದೊಮ್ಮೆ ಒಬ್ಬ ವ್ಯಕ್ತಿಯು ಇದರ ಸಂಪರ್ಕಕ್ಕೆ ಬಂದ ನಂತರ, ಅದು ದೇಹದ ದ್ರವಗಳು, ಕಲುಷಿತ ಮೇಲ್ಮೈಗಳು ಮತ್ತು ವಸ್ತುಗಳ ಸಂಪರ್ಕದ ಮೂಲಕ ಹರಡುತ್ತದೆ.
ಇದನ್ನೂ ಓದಿ-Cosmic Ghosts: ಬ್ರಹ್ಮಾಂಡದಲ್ಲಿ ಕುಣಿಯುತ್ತಿರುವ ಈ ದೆವ್ವಗಳನ್ನು ನೀವೆಂದಾದರೂ ನೋಡಿದ್ದೀರಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ