ಜಾಗತಿಕ ಒತ್ತಡಕ್ಕೆ ಮಣಿದ ಪಾಕ್; ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ಸಹೋದರ ಬಂಧನ
ಭಯೋತ್ಪಾಧನೆ ನಿಯಂತ್ರಣ ವಿಚಾರವಾಗಿ ಅಂತರಾಷ್ಟ್ರೀಯ ಸಮುದಾಯದಿಂದ ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಜೈಶ್ ಇ ಮೊಹಮ್ಮದ್ ಸಂಘಟನೆ ಉಗ್ರ ಮಸೂದ್ ಸಹೋದರ ಮುಫ್ತಿ ಅಬ್ದುಲ್ ರೌಫ್ ರನ್ನು ಪಾಕ್ ವಶಕ್ಕೆ ಪಡೆದುಕೊಂಡಿದೆ. ಇದುವರೆಗೆ ಪಾಕ್ ಸುಮಾರು 44 ಜನರನ್ನು ಪಾಕ್ ಬಂಧಿಸಿದ್ದು, ಅದರಲ್ಲಿ ಮುಫ್ತಿ ಅಬ್ದುಲ್ ರೌಫ್ ಒಬ್ಬ ಎಂದು ತಿಳಿದು ಬಂದಿದೆ.
ನವದೆಹಲಿ: ಭಯೋತ್ಪಾಧನೆ ನಿಯಂತ್ರಣ ವಿಚಾರವಾಗಿ ಅಂತರಾಷ್ಟ್ರೀಯ ಸಮುದಾಯದಿಂದ ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಜೈಶ್ ಇ ಮೊಹಮ್ಮದ್ ಸಂಘಟನೆ ಉಗ್ರ ಮಸೂದ್ ಸಹೋದರ ಮುಫ್ತಿ ಅಬ್ದುಲ್ ರೌಫ್ ರನ್ನು ಪಾಕ್ ವಶಕ್ಕೆ ಪಡೆದುಕೊಂಡಿದೆ. ಇದುವರೆಗೆ ಪಾಕ್ ಸುಮಾರು 44 ಜನರನ್ನು ಪಾಕ್ ಬಂಧಿಸಿದ್ದು, ಅದರಲ್ಲಿ ಮುಫ್ತಿ ಅಬ್ದುಲ್ ರೌಫ್ ಒಬ್ಬ ಎಂದು ತಿಳಿದು ಬಂದಿದೆ.
ಈ ಕುರಿತಾಗಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಪಾಕ್ ಸರ್ಕಾರ "ನಿಷೇಧಕ್ಕೊಳಪಟ್ಟ ಎಲ್ಲಾ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಹಿನ್ನಲೆಯಲ್ಲಿ, ಮುಫ್ತಿ ಅಬ್ದುಲ್ ರೌಫ್ ಮತ್ತು ಹಮ್ಮದ್ ಅಝರ್ ಸೇರಿದಂತೆ ನಿಷೇಧಿತ ಸಂಸ್ಥೆಗಳ 44 ಸದಸ್ಯರನ್ನು ತನಿಖೆಗೆ ಒಳಪಡಿಸುವ ನಿಟ್ಟಿನಲ್ಲಿ ಬಂಧಿಸಲಾಗಿದೆ. ರಾಷ್ತ್ರೀಯ ಕಾರ್ಯ ಯೋಜನೆ ಪ್ರಕಾರ ರಾಷ್ಟ್ರೀಯ ಭದ್ರತಾ ಸಮಿತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಾಕ್ ಹೇಳಿದೆ.
ಮುಫ್ತಿ ಅಬ್ದುಲ್ ರೌಫ್ ಮತ್ತು ಹಮ್ಮದ್ ಅಜರ್ ಅವರ ಹೆಸರುಗಳನ್ನು ಕಳೆದ ವಾರ ಪಾಕಿಸ್ತಾನದೊಂದಿಗೆ ಭಾರತ ಹಂಚಿಕೊಂಡಿತ್ತು ಎಂದು ತಿಳಿದುಬಂದಿದೆ.ಈಗ ಈ ಉಗ್ರ ಸಂಘಟನೆಗಳ ಸದಸ್ಯರನ್ನು ಯಾವುದೇ ಒತ್ತಡದಿಂದ ಬಂಧಿಸಿಲ್ಲ ಎಂದು ಪಾಕ್ ಹೇಳಿದೆ.