ನವದೆಹಲಿ: ಕೊರೊನಾ ವೈರಸ್ ಹಿನ್ನೆಲೆ ವಿಶ್ವಾದ್ಯಂತ ಕೋಲಾಹಲವೇ ಸೃಷ್ಟಿಯಾಗಿದೆ. ಈ ನಡುವೆ ಜೂನ್ 21, 2020ಕ್ಕೆ ಪ್ರಪಂಚವೇ ಅಂತ್ಯಕಾಣಲಿದೆ ಎಂಬ ಬೆಚ್ಚಿಬೀಳಿಸುವ ಮಾಹಿತಿಯೊಂದು ಪ್ರಕಟವಾಗಿದೆ.


COMMERCIAL BREAK
SCROLL TO CONTINUE READING

ಈ ಥಿಯರಿ ಪ್ರಾಚೀನ ಮಾಯಾ ಕ್ಯಾಲೆಂಡರ್ ಅನ್ನು ಆಧರಿಸಿದೆ. ಆದರೆ, ಇಂದು ವಿಶ್ವಾದ್ಯಂತ ಜನರು ಗ್ರೆಗೋರಿಯನ್ ಕ್ಯಾಲೆಂಡರ್ ಬಳಕೆ ಮಾತ್ರ ಮಾಡುತ್ತಾರೆ. ಆದೆ, ಈ ಕ್ಯಾಲೆಂಡರ್ 1582ಕ್ಕೆ ಅಸ್ತಿತ್ವದಲ್ಲಿ ಬಂದಿದೆ ಹಾಗೂ ಇದಕ್ಕೂ ಮೊದಲು ಜನರು ಹಲವು ವಿಧದ ಕ್ಯಾಲೆಂಡರ್ ಅನ್ನು ಉಪಯೋಗಿಸುತ್ತಿದ್ದರು. ಅವುಗಳಲ್ಲಿ ಮಾಯಾ ಕ್ಯಾಲೆಂಡರ್ ಹಾಗೂ ಜ್ಯೂಲಿಯನ್ ಕ್ಯಾಲೆಂಡರ್ ಹೆಚ್ಚು ಜನಪ್ರೀಯತೆ ಪಡೆದಿದ್ದವು.


ತಜ್ಞರು ಹೇಳುವ ಪ್ರಕಾರ, ಗ್ರೆಗೋರಿಯನ್ ಕ್ಯಾಲೆಂಡರ್ ಪೃಥ್ವಿ ಸೂರ್ಯನ ಸುತ್ತ ಸುತ್ತಲು ತೆಗೆದುಕೊಳ್ಳುವ ಕಾಲಾವಕಾಶವನ್ನು ಉತ್ತಮ ರೀತಿಯಲ್ಲಿ ಸಾದರುಪಡಿಸಲು ಪ್ರಸ್ತುತಪಡಿಸಲಾಗಿದೆ. ಆದರೆ, ಇಂದಿಗೂ ಕೂಡ ಹಲವರು ಆ ವರ್ಷ ಜ್ಯೂಲಿಯನ್ ಕ್ಯಾಲೆಂಡರ್ ಮೂಲಕ ನಿರ್ಧರಿಸಲಾಗಿದ್ದ 11 ದಿನಗಳನ್ನು ಅಂತ್ಯಗೊಳಿಸಲಾಗಿತ್ತು ಎನ್ನುತ್ತಾರೆ.


ಕಾಲಕ್ಕೆ ತಕ್ಕಂತೆ ಈ ಕಳೆದುಹೋದ ದಿನಗಳಲ್ಲಿ ಕ್ರಮೇಣ ಏರಿಕೆಯಾಗಿದ್ದು, ಇದೀಗ ಒಂದು ಸಂಚಿನ ಸಿದ್ಧಾಂತ ನಿರ್ಮಾಣಗೊಂಡಿದ್ದು, ವಾಸ್ತವಿಕವಾಗಿ ಇಂದು ನಾವು 2020ರ ಬದಲಾಗಿ 2012 ರಲ್ಲಿ ಇರಬೇಕಾಗಿತ್ತು ಎಂದು ವಾದಿಸುತ್ತದೆ.


ಈ ಕುರಿತು ವಿಜ್ಞಾನಿ ಪೌಲೋ ಟಾಗಾಲೋಗಯೂನ್ ಟ್ವೀಟ್ ವೊಂದನ್ನು ಮಾಡಿ ನಂತರ ಅದನ್ನು ಡಿಲೀಟ್ ಮಾಡಿದ್ದಾರೆ. ಈ ಟ್ವೀಟ್ ನಲ್ಲಿ ಅವರು, "ಜ್ಯೂಲಿಯನ್ ಕ್ಯಾಲೆಂಡರ್ ಪ್ರಕಾರ ತಾಂತ್ರಿಕವಾಗಿ ಇಂದು ನಾವು 2012ರಲ್ಲಿದ್ದೇವೆ. ಆದರೆ, ಗ್ರೆಗೋರಿಯನ್ ಕ್ಯಾಲೆಂಡರ್ ಗೆ ಪರಿವರ್ತನೆಯಾದ ಬಳಿಕ ಪ್ರತಿವರ್ಷ 11 ದಿನಗಳು ಕಳೆದುಹೋಗುತ್ತಿವೆ. ಕಳೆದ 268 ವರ್ಷಗಳಲ್ಲಿ ಗ್ರೆಗೋರಿಯನ್ ಕ್ಯಾಲೆಂಡರ್ ಅಡಿ (1752-2020) 11 ದಿನಗಳು =2948 ದಿನಗಳು. ಅಂದರೆ, 2948/365ದಿನಗಳು =8 ವರ್ಷಗಳಷ್ಟಾಗುತ್ತದೆ.


ಈ ಸಿದ್ಧಾಂತದ ಬಳಿಕ ಜೂನ್ 21, 2020, ವಾಸ್ತವಿಕವಾಗಿ 21 ಡಿಸೆಂಬರ್ 2012 ಆಗಿದೆ. ಇದಕ್ಕೂ ಮೊದಲು 2012ರಲ್ಲಿ ವಿಶ್ವ ವಿನಾಶ ಸಂಭವಿಸಲಿದೆ ಎಂದು ಹೇಳಲಾಗಿರುವುದು ಇಲ್ಲಿ ಉಲ್ಲೇಖನೀಯ.


ಜ್ಯೂಲಿಯನ್ ಕ್ಯಾಲೆಂಡರ್ ಪ್ರಕಾರ ಡಿಸೆಂಬರ್ 2012 ರಲ್ಲಿ ನಡೆಯಬೇಕಿರುವ ಈ ಅಸಾಮಾನ್ಯ ಘಟನೆಗಳಿಗೆ ಸಂಬಂಧಿಸಿದಂತೆ ನೀಡಲಾಗುತ್ತಿರುವ ತರ್ಕಗಳಿಗೆ ಯಾವುದೇ ಅಧಿಕೃತ ಸಾಕ್ಷಾಧಾರಗಳನ್ನು ಇದುವರೆಗೆ ನೀಡಲಾಗಿಲ್ಲ ಎಂದು ನಾಸಾ ಹೇಳಿದೆ.