VIDEO: ಹಾವಿನ ಹಿಡಿತದಿಂದ ನಾಯಿಯನ್ನು ರಕ್ಷಿಸಿದ ವೀರರು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ನದಿಯ ಒಳಗೆ ಹೆಬ್ಬಾವಿನ ಬಾಲದಲ್ಲಿ ಸಿಲುಕಿದ್ದ ನಾಯಿಯನ್ನು ಮೂವರು ವ್ಯಕ್ತಿಗಳು ಹೇಗೆ ರಕ್ಷಿಸಿದರು ಎಂಬುದನ್ನು ನೋಡಬಹುದಾಗಿದೆ.
ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿ ಜೀವ ರಕ್ಷಣೆಗಾಗಿ ನೀರಿಗೆ ಧುಮುಕುವುದು ಸಹಜ. ಆದರೆ ಪ್ರಾಣಿಗಳ ಜೀವ ರಕ್ಷಿಸಲು ತಮ್ಮ ಜೀವವನ್ನೇ ಪಣಕ್ಕಿಟ್ಟು ಮುನ್ನುಗ್ಗುವವರ ಸಂಖ್ಯೆ ವಿರಳ. ಆದರೆ ಇತ್ತೀಚೆಗೆ ಅಂತಹ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮೂವರು ಯುವಕರು ಹೆಬ್ಬಾವಿನ ಹಿಡಿತದಿಂದ ನಾಯಿಯನ್ನು ರಕ್ಷಿಸಿದ್ದಾರೆ. ಈ ಅದ್ಭುತ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದ್ದು, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ನದಿಯ ಒಳಗೆ ಹೆಬ್ಬಾವಿನ ಬಾಲದಲ್ಲಿ ಸಿಲುಕಿದ್ದ ನಾಯಿಯನ್ನು ಮೂವರು ವ್ಯಕ್ತಿಗಳು ಹೇಗೆ ರಕ್ಷಿಸಿದರು ಎಂಬುದನ್ನು ನೋಡಬಹುದಾಗಿದೆ. ವೀಡಿಯೊದ ಪ್ರಾರಂಭದಲ್ಲಿ ಒಬ್ಬ ಮನುಷ್ಯನು ಹಾವಿನಿಂದ ನಾಯಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ನಂತರ ಇನ್ನಿಬ್ಬರು ವ್ಯಕ್ತಿಗಳು ಬಂದು ಹಾವು ಹಿಡಿಯಲು ಪ್ರಯತ್ನಿಸುತ್ತಾರೆ. ಮೂರನೇ ವ್ಯಕ್ತಿ ಹಾವಿನ ಬಾಲದಿಂದ ನಾಯಿಯನ್ನು ಉಳಿಸಲು ಪ್ರಯತ್ನಿಸುತ್ತಾನೆ.
ಮೂವರ ಪ್ರಯತ್ನದ ಫಲವಾಗಿ ನಾಯಿ ಹಾವಿನಿಂದ ತಪ್ಪಿಸಿಕೊಳ್ಳುತ್ತದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಆದ ಬಳಿಕ ವೈರಲ್ ಆಗುತ್ತಿದೆ. ನಾಯಿ ಬದುಕುಳಿದಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿರುವ ಕೆಲವರು ಪುರುಷರ ಕೆಚ್ಚೆದೆಯ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಈ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು, ಒಂದು ಪ್ರಾಣಿಯನ್ನು ರಕ್ಷಿಸಲು ಮತ್ತೊಂದು ಪ್ರಾಣಿಯನ್ನು ಕೊಲ್ಲುವುದು ಸೂಕ್ತವೇ ಎಂದು ಪ್ರಶ್ನಿಸಿದ್ದಾರೆ?
ಆದಾಗ್ಯೂ, ಈವರೆಗೆ ಹಾವು ಮರಣಹೊಂದಿದೆ ಅಥವಾ ಇಲ್ಲವೆಂದು ದೃಢೀಕರಿಸಲಾಗಿಲ್ಲ.