ಸ್ಯಾನ್ ಫ್ರಾನ್ಸಿಸ್ಕೋ: ಟೆಕ್ ದೈತ್ಯ ಮೈಕ್ರೋಸಾಫ್ಟ್ ಕಂಪೆನಿಯು ಇಂದು ತನ್ನ ಸಾವಿರಾರು ಉದ್ಯೋಗಿಗಳಿಗೆ ಗೇಟ್‍ಪಾಸ್ ನೀಡಲು ನಿರ್ಧರಿಸಿದೆ. ಸುಮಾರು 2.20 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ವಾಷಿಂಗ್ಟನ್ ಮೂಲದ ಕಂಪನಿಯು ಶೇ.5ರಷ್ಟು ಅಂದರೆ ಸುಮಾರು 11 ಸಾವಿರ ಮಂದಿಯನ್ನು ವಜಾಗೊಳಿಸುತ್ತಿದೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಮಾನವ ಸಂಪನ್ಮೂಲ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಸಾವಿರಾರು ಉದ್ಯೋಗಿಗಳನ್ನು ಮೈಕ್ರೋಸಾಫ್ಟ್ ಕಂಪೆನಿ ವಜಾಗೊಳಿಸುತ್ತಿದೆ. ಕಂಪನಿಯು ಕಳೆದ ವರ್ಷ 2 ಬಾರಿ ತನ್ನ ಉದ್ಯೋಗಿಗಳಿಗೆ ಗೇಟ್‍ಪಾಸ್ ನೀಡಿತ್ತು. ಕಳೆದ ವರ್ಷದ ಅಂದರೆ 2022ರ ಅಂತಿಮ 3 ತಿಂಗಳ ಆದಾಯವನ್ನು ಘೋಷಿಸುವ 1 ವಾರದ ಮೊದಲೇ ಮೈಕ್ರೋಸಾಫ್ಟ್ ಈ ಘೋಷಣೆ ಮಾಡಿದೆ.  


ಇದನ್ನೂ ಓದಿ: ಐಐಎಂ ರಾಂಚಿಯಲ್ಲಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ


ಅಮೆರಿಕದ ತಂತ್ರಜ್ಞಾನ ವಲಯದಲ್ಲಿ ಉದ್ಯೋಗಿಗಳಿಗೆ ಗೇಟ್‍ಪಾಸ್ ನೀಡುವ ಪ್ರಕ್ರಿಯೆ ಮುಂದುವರೆದಿದೆ. ಇತ್ತೀಚೆಗಷ್ಟೇ ಅಮೆಜಾನ್ ಮತ್ತು ಫೇಸ್‍ಬುಕ್ ಅಥವಾ ಮೆಟಾ ಕಂಪೆನಿಗಳು ಕೂಡ ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆ ಸಾವಿರಾರು ನೌಕರರನ್ನು ಸೇವೆಯಿಂದ ವಜಾಗೊಳಿಸಿದ್ದವು.


ಮೈಕ್ರೋಸಾಫ್ಟ್ ಕಂಪೆನಿಯಲ್ಲಿ 2,21,000 ಖಾಯಂ ನೌಕರರಿದ್ದು, ಈ ಪೈಕಿ 1,22,000 ಮಂದಿ ಅಮೆರಿಕದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ 99,0000 ಮಂದಿ ಉದ್ಯೋಗಿಗಳಿದ್ದಾರೆಂದು ಕಳೆದ ವರ್ಷದ ಜೂನ್ 30ರ ಅಂಕಿಅಂಶಗಳು ತಿಳಿಸಿವೆ.


ಇದನ್ನೂ ಓದಿ: ಮಗನ ಸಾವು ನೋಡಲಾರೆ ಎಂದು 22ನೇ ಮಹಡಿಯಿಂದ ಜಿಗಿದು ಮಹಿಳೆ ಸಾವು!


ಜಾಹೀರಾತು ಆಧಾರಿತ ವ್ಯಾಪಾರ ಮಾದರಿಯನ್ನು ಹೊಂದಿರುವ ಪ್ರಮುಖ ಕಂಪನಿಗಳು ಹಣದುಬ್ಬರದ ಮುಖಾಂತರ ವೆಚ್ಚಗಳನ್ನು ಕಡಿಮೆ ಮಾಡುವ ಜಾಹೀರಾತುದಾರರಿಂದ ಬಜೆಟ್ ಕಡಿತವನ್ನು ಎದುರಿಸುತ್ತಿವೆ. ಅತಿಹೆಚ್ಚಿನ ವೇತನ ಮತ್ತು ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಹೆಚ್ಚಿನ ಉದ್ಯೋಗಿಗಳನ್ನು ನೇಮಿಸಿಕೊಂಡ ಕಂಪನಿಗಳಿಗೆ ಆರ್ಥಿಕ ಹೊರೆ ಉಂಟಾಗಿದೆ. ಹೀಗಾಗಿ ಉದ್ಯೋಗಿಗಳಿಗೆ ಗೇಟ್‍ಪಾಸ್ ನೀಡಲು ಕಂಪನಿಗಳು ನಿರ್ಧರಿಸಿವೆ ಎಂದು ತಿಳಿದುಬಂದಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.