ಜಿನೇವಾ: Mixing-Matching Of Corona Vaccine - ಕೊರೊನಾ ಮಹಾಮಾರಿಯ (Corona Pandemic) ವಿರುದ್ಧ ಮುಂದುವರೆದಿರುವ ಹೋರಾಟದ ನಡುವೆಯೇ ವಿಶ್ವ ಆರೋಗ್ಯ ಸಂಘಟನೆ (World Health Organization) ಕೊರೊನಾ ವ್ಯಾಕ್ಸಿನ್ ನ ಮಿಕ್ಸಿಂಗ್ ಹಾಗೂ ಮ್ಯಾಚಿಂಗ್ (Covid-19 Vaccine Mixing And Matching) ಗೆ ಸಂಬಂಧಿಸಿದಂತೆ ಎಚ್ಚರಿಕೆಯನ್ನು ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ವಿಶ್ವ ಆರೋಗ್ಯ ಸಂಘಟನೆಯ ಪ್ರಮುಖ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್(Soumya Swaminathan), ಮೊದಲ ಹಾಗೂ ಎರಡನೇ ಪ್ರಮಾಣಗಳ ರೂಪದಲ್ಲಿ ಎರಡು ವಿಭಿನ್ನ ಕಂಪನಿಗಳ ವ್ಯಾಕ್ಸಿನ್ ನೀಡುವುದು ಒಂದು ಅಪಾಯಕಾರಿ ಟ್ರೆಂಡ್ ಆಗಿದೆ. ಏಕೆಂದರೆ, ವ್ಯಾಕ್ಸಿನ್ ಮಿಕ್ಸಿಂಗ್ ಹಾಗೂ ಮ್ಯಾಚಿಂಗ್ ಗೆ ಸಂಬಂಧಿಸಿದಂತೆ ನಮ್ಮ ಬಳಿ ಯಾವುದೇ ನಿಖರ ದತ್ತಾಂಶ ಇಲ್ಲ ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಸತತವಾಗಿ ಈ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ ಜನ
ಈ ಕುರಿತು ಆನ್ಲೈನ್ ಬ್ರೀಫಿಂಗ್ ನಲ್ಲಿ ಮಾತನಾಡಿರುವ ಸೌಮ್ಯಾ ಸ್ವಾಮಿನಾಥನ್, ಒಂದು ಕಂಪನಿಯ ಲಸಿಕೆಯ ಮೊದಲ ಪ್ರಮಾಣ ಪಡೆದ ಬಳಿಕ, ಎರಡನೇ ಪ್ರಮಾಣದ ರೂಪದಲ್ಲಿ ಬೇರೊಂದು ಕಂಪನಿಯ ವ್ಯಾಕ್ಸಿನ್ ಪಡೆಯಬಹುದೇ: ಎಂದು ಜನ ತಮ್ಮನ್ನು ಪ್ರಶ್ನಿಸುತ್ತಾರೆ. ಆದರೆ ಇದೊಂದು ಅಪಪಯಕಾರಿ ಟ್ರೆಂಡ್ ಆಗಿದೆ. ಏಕೆಂದರೆ ನಮ್ಮ ಬಳಿ ವ್ಯಾಕ್ಸಿನ್ ಮಿಕ್ಸಿಂಗ್ ಹಾಗೂ ಮ್ಯಾಚಿಂಗ್ ಗೆ ಸಂಬಂಧಿಸಿದಂತೆ ಸಾಕಷ್ಟು ದತ್ತಾಂಶಗಳಿಲ್ಲ ಎಂದಿದ್ದಾರೆ. ವಿವಿಧ ಕಂಪನಿಗಳ ವ್ಯಾಕ್ಸಿನ್ ಗಳ ಮಿಕ್ಸಿಂಗ್ ಹಾಗೂ ಮ್ಯಾಚಿಂಗ್ (Covid-19 Mixing And Matching) ನ ಈ ಪದ್ಧತಿಯನ್ನು ಇಮ್ಯೂನಿಟಿ ಹೆಚ್ಚಿಸುವ ವಿಧಾನವಾಗಿದೆ ಎನ್ನಲಾಗುತ್ತಿದೆ. ಆದರೆ, ಇದೀಗ ಈ ಕುರಿತು ಸ್ಪಷ್ಟನೆ ನೀಡಿರುವ WHO, ಸದ್ಯಕ್ಕೆ ಈ ಕುರಿತು ಏನನ್ನು ಹೇಳುವುದು ಸಾಧ್ಯವಿಲ್ಲ ಎಂದಿದೆ.


ಇದನ್ನೂ ಓದಿ-"ಹಲವಾರು ದೇಶಗಳಲ್ಲಿ ಉಚಿತ ಮತ್ತು ಮುಕ್ತ ಇಂಟರ್ನೆಟ್ ಮೇಲೆ ದಾಳಿ ನಡೆಯುತ್ತಿದೆ"


'Wait' ಮಾಡುವುದೇ ಉತ್ತಮ
'ವಾಕ್ಸಿನ್ ಮಿಕ್ಸಿಂಗ್ ಹಾಗೂ ಮ್ಯಾಚಿಂಗ್ ಗೆ ಸಂಬಂಧಿಸಿದಂತೆ ಸೀಮಿತ ದತ್ತಾಂಶಗಳು ಮಾತ್ರ ಇವೆ. ಈ ಕುರಿತು ಇನ್ನೂ ಅಧ್ಯಯನ ನಡೆಸುವುದು ಬಾಕಿ ಇದೆ. ಇದೊಂದು ಒಳ್ಳೆಯ ಪ್ರಯತ್ನವಾಗುವ ಸಾಧ್ಯತೆ ಇದೆ. ಆದರೆ, ಪ್ರಸ್ತುತ ನಮ್ಮ ಬಳಿ ಆಸ್ಟ್ರೋಜೆನಿಕಾ (AstraZenica) ಕುರಿತು ಮಾತ್ರ ದತ್ತಾಂಶ ಮಾತ್ರ ಇದೆ. ಒಂದು ವೇಳೆ ವಿಭಿನ್ನ ದೇಶಗಳ ಜನರು ತಮ್ಮಷ್ಟಕ್ಕೆ ತಾವೇ ಎರಡನೇ, ಮೂರನೇ ಹಾಗೂ ನಾಲ್ಕನೇ ಪ್ರಮಾಣದ ರೂಪದಲ್ಲಿ ಯಾವ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ನಿರ್ಧರಿಸಲು ಆರಂಭಿಸಿದರೆ, ಅರಾಜಕತೆಯ ಸ್ಥಿತಿ ಎದುರಾಗಲಿದೆ. ಎಂದು ಡಾ. ಸೌಮ್ಯಾ ಸ್ವಾಮಿನಾಥನ್' (Dr.Soumya Swaminathan) ಹೇಳಿದ್ದಾರೆ. 


ಇದನ್ನೂ ಓದಿ- US Blacklists Chinese Companies: ಚೀನೀ ಕಂಪನಿಗಳ ಬ್ಲಾಕ್ ಲಿಸ್ಟ್, ಸಿಡಿಮಿಡಿಗೊಂಡ ಚೀನಾದಿಂದ USಗೆ ಧಮ್ಕಿ


ಈ ವರದಿ ಟೆನ್ಶನ್ ಹೆಚ್ಚಿಸಿದೆ
ಇನ್ನೊಂದೆಡೆ ಬೆಲ್ಜಿಯಂನಲ್ಲಿ (Belgium) 90 ವರ್ಷದ ಮಹಿಳೆಯೋರ್ವರಲ್ಲಿ ಏಕಕಾಲಕ್ಕೆ ಕೊರೊನಾ ವೈರಸ್ ನ ಎರಡು (Two Covid-19 Variants In One Patient) ವಿಭಿನ್ನ ರೂಪಾಂತರಿಗಳು ಪತ್ತೆಯಾಗಿರುವ ಸಂಗತಿ ಆರೋಗ್ಯ ತಜ್ಞರ ಚಿಂತೆ ಹೆಚ್ಚಿಸಿದೆ. ತನ್ನದೇ ಆದ ರೀತಿಯ ಇದೊಂದು ವಿಭಿನ್ನ ಪ್ರಕರಣವಾಗಿದೆ. ಈ ಕುರಿತು ಹೇಳಿಕೆ ನೀಡಿರುವ ತಜ್ಞರು ಇದು ಕೊವಿಡ್-19 ವಿರುದ್ಧದ ಹೋರಾಟ ಮತ್ತಷ್ಟು ಕಠಿಣಗೊಳಿಸುವ ಸಾಧ್ಯತೆ ಇದೆ. ಕೊರೊನಾ ವೈರಸ್ ನ ಎರಡು ವಿಭಿನ್ನ ವೈರಸ್ ಗಳಿಂದ (Coronavirus) ಸೊಂಕಿತರಾಗಿದ್ದ ಮಹಿಳೆ ಮಾರ್ಚ್ 2021 ರಲ್ಲಿ ಕೇವಲ ಐದೇ ದಿನಗಳಲ್ಲಿ ತಮ್ಮ ಕೊನೆಯುಸಿರೆಳೆದಿದ್ದಳು. ಸಂಶೋಧಕರ ಪ್ರಕಾರ 90 ವರ್ಷದ ಮಹಿಳೆ ಏಕಕಾಲಕ್ಕೆ ಅಲ್ಫಾ (Covid-19 Alpha Variant) ಹಾಗೂ ಬೀಟಾ ವೇರಿಯಂಟ್ (Covid-19 Beta Variant) ನಿಂದ ಸೋಂಕಿತಳಾಗಿದ್ದಳು.  ಆದರೆ, ಮಹಿಳೆ ಕೊರೊನಾ ವ್ಯಾಕ್ಸಿನ್ (Corona Vaccine) ಪಡೆದುಕೊಂಡಿರಲಿಲ್ಲ ಮತ್ತು ಇದೇ ಕಾರಣದಿಂದ ಆಕೆಯ ಸ್ಥಿತಿ ಸುಧಾರಣೆಯಾಗುವ ಬದಲು ಬಿಗಡಾಗಿಸುತ್ತಲೇ ಹೋಗಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Coronavirus Latest News: ಕೊರೊನಾಗೆ ಸಂಬಂಧಿಸದಂತೆ ಬೆಚ್ಚಿಬೀಳಿಸುವ ಮಾಹಿತಿ ಪ್ರಕಟ, ವೈರಸ್ ವಿರುದ್ಧದ ಹೋರಾಟ ಇನ್ನಷ್ಟು ಕಠಿಣ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ