Coronavirus ಲಸಿಕೆಯ ಯಶಸ್ವಿ ಮಾನವ ಪರೀಕ್ಷೆ ನಡೆಸಿದ US ಕಂಪನಿ
ಅಮೆರಿಕಾದ ಮೊರ್ಡೆನಾ ಹೆಸರಿನ ಔಷಧಿ ತಯಾರಿಸುವ ಕಂಪನಿ ಕೊರೊನಾ ವೈರಸ್ ನ ಲಸಿಕೆಯ ಯಶಸ್ವಿ ಮಾನವ ಪರೀಕ್ಷೆ ನಡೆಸಲಾಗಿದೆ ಎಂದು ಪ್ರತಿಪಾದಿಸಿದೆ. ಅಷ್ಟೇ ಅಲ್ಲ ಶೀಘ್ರದಲ್ಲಿಯೇ ಈ ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದೂ ಕೂಡ ಹೇಳಿದೆ.
ನವದೆಹಲಿ: ಸದ್ಯ ಇಡೀ ವಿಶ್ವವೇ ಕೊರೊನಾ ವೈರಸ್ ನಿಂದ ಸೃಷ್ಟಿಯಾಗಿರುವ ಪ್ರಕೋಪವನ್ನು ಎದುರಿಸುತ್ತಿದ್ದು, ಇದುವರೆಗೆ ವಿಶ್ವಾದ್ಯಂತ 48 ಲಕ್ಷ 94 ಸಾವಿರಕ್ಕೂ ಅಧಿಕ ಜನರು ಈ ಮಾರಕ ವೈರಸ್ ಸೋಂಕಿಗೆ ಗುರಿಯಾಗಿದ್ದಾರೆ. ಇನ್ನೊಂದೆಡೆ ಈ ವೈರಸ್ ವಿರುದ್ಧ ಹೋರಾಡುವ ಔಷಧಿ ಅಥವಾ ಲಸಿಕೆ ಯಾವಾಗ ಮಾರುಕಟ್ಟೆಗೆ ಬರಲಿದೆ ಎಂಬುದರ ಕುರಿತು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಈ ನಿಟ್ಟಿನಲ್ಲಿ ನೆಮ್ಮದಿಯ ಸುದ್ದಿಯೊಂದು ಪ್ರಕಟಗೊಂಡಿದ್ದು, ಅಮೆರಿಕಾದ ಔಷಧಿ ತಯಾರಿಕಾ ಕಂಪನಿಯೊಂದು ಕೊರೊನಾ ವೈರಸ್ ವಿರುದ್ಧ ಹೋರಾಡುವ ಲಸಿಕೆಯನ್ನು ತಯಾರಿಸಲಾಗಿದ್ದು, ಅದರ ಹ್ಯೂಮನ್ ಟ್ರಯಲ್ ಕೂಡ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಹೇಳಿದೆ. ಜೊತೆಗೆ ಶೀಘ್ರವೇ ಈ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿರುವುದಾಗಿಯೂ ಕೂಡ ಹೇಳಿಕೊಂಡಿದೆ.
ಅಮೆರಿಕದ ಫಾರ್ಮಾ ಕಂಪನಿ ಮಾಡರ್ನಾ ಕರೋನಾ ಲಸಿಕೆ ತಯಾರಿಸಿರುವುದಾಗಿ ಹೇಳಿ ಭರವಸೆಯನ್ನು ಹುಟ್ಟುಹಾಕಿದೆ, ಅಷ್ಟೇ ಅಲ್ಲ ಸುಮಾರು 45 ಜನರ ಮೇಲೆ ಈ ಲಸಿಕೆಯ ಯಶಸ್ವಿ ಮಾನವ ಪ್ರಯೋಗ ನಡೆಸಲಾಗಿದೆ ಎಂದು ಪ್ರತಿಪಾದಿಸಿದೆ. ಅಮೆರಿಕಾದ ಸಿಯಾಟಲ್ ನಲ್ಲಿ ಒಟ್ಟು 8 ಸ್ವಯಂಸೇವಕರ ಗುಂಪಿನ ಮೇಲೆ ಈ ಲಸಿಕೆಯ ಪ್ರಯೋಗ ನಡೆಸಲಾಗಿದೆ ಎನ್ನಲಾಗಿದ್ದು , ಪರೀಕ್ಷೆಗೆ ಒಳಪಟ್ಟವರ ಶರೀರದಿಂದ ಲಸಿಕೆಯ ಸಹಾಯದಿಂದ ಆಂಟಿ ಬಾಡಿಗಲು ಉತ್ಪತ್ತಿಯಾಗಿದ್ದು, ಇದು ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯ ಸಾಬೀತು ಪಡಿಸಿದೆ ಎನ್ನಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಮಾಡರ್ನಾ ಕಂಪನಿ, ಹ್ಯೂಮನ್ ಕ್ಲಿನಿಕಲ್ ಟ್ರಯಲ್ ನ ಮೊದಲ ಪರಿಣಾಮಗಳು ಪಾಸಿಟಿವ್ ಬಂದಿವೆ ಹಾಗೂ ಜುಲೈ ತಿಂಗಳಿನಲ್ಲಿ ಈ ವ್ಯಾಕ್ಸಿನ್ ನ ಮೂರನೇ ಹಂತದ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದೆ.
ಮಾಡರ್ನಾ ಔಷಧಿ ತಯಾರಿಕಾ ಕಂಪನಿ ಕಳೆದ ಜನವರಿಯಿಂದ ಕೊರೊನಾ ವೈರಸ್ ವಿರುದ್ಧ ಹೋರಾಡುವ ಲಸಿಕೆ ತಯಾರಿಕೆಯ ಕಾರ್ಯದಲ್ಲಿ ನಿರತವಾಗಿದೆ ಹಾಗೂ ಲಸಿಕೆ ತಯಾರಿಕೆಗಾಗಿ ಬೇಕಾಗಿರುವ ಜನೆತಿಕ್ ಕೋಡ್ ಕೂಡ ಪಡೆದುಕೊಂಡಿದ್ದು, ಮನುಷ್ಯರ ಮೇಲೆ ಲಸಿಕೆಯ ಪ್ರಯೋಗದ ಪ್ರಯಾಣವನ್ನು ಬಹಳ ಬೇಗನೆ ಪೂರ್ಣಗೊಳಿಸಿದೆ.
ಗಂಭೀರವಲ್ಲದ ಸೈಡ್ ಇಫೆಕ್ಟ್ ಗಳೂ ಕೂಡ ಕಂಡುಬಂದಿವೆ
ಸಾಮಾನ್ಯವಾಗಿ ಯಾವುದೇ ಒಂದು ವ್ಯಾಕ್ಸಿನ್ ಗೆ ಸೈಡ್ ಇಫೆಕ್ಟ್ ಕಂಡು ಬರುವಂತೆ, ಈ ವ್ಯಾಕ್ಸಿನ್ ಗೂ ಕೂಡ ಅಡ್ಡಪರಿಣಾಮಗಳು ಕಂಡು ಬಂದಿವೆ. ಆದರೆ, ಈ ಅಡ್ಡ ಪರಿಣಾಮಗಳು ಅಷ್ಟೊಂದು ಗಂಭೀರ ಸ್ವರೂಪದ ಅಡ್ಡಪರಿಣಾಮಗಳಲ್ಲ ಎಂದು ಕಂಪನಿ ಹೇಳಿಕೊಂಡಿದೆ.