ಸಾವಿರಾರು ಬ್ರೆಡ್ ತುಂಡುಗಳಿಂದ ಮೂಡಿದ ಮೊನಾಲಿಸಾ ಚಿತ್ರ!
ಜಪಾನಿನ ವಿದ್ಯಾರ್ಥಿಗಳು 2 ಸಾವಿರಕ್ಕೂ ಅಧಿಕ ಬ್ರೆಡ್ ತುಂಡುಗಳನ್ನು ಬಳಸಿ ತಯಾರಿಸಿದ್ದಾರೆ.
ಫುಕೋಕಾ: ಲಿಯೋನಾರ್ಡೋ ಡಾ ವಿನ್ಸಿಯ 'ಮೊನಾಲಿಸಾ' ಚಿತ್ರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ... ಆ ಪ್ರಸಿದ್ಧ ಕಲಾಕೃತಿಯನ್ನು ಇದೀಗ ಜಪಾನಿನ ವಿದ್ಯಾರ್ಥಿಗಳು 2 ಸಾವಿರಕ್ಕೂ ಅಧಿಕ ಬ್ರೆಡ್ ತುಂಡುಗಳನ್ನು ಬಳಸಿ ತಯಾರಿಸಿದ್ದಾರೆ. ಅಚ್ಚರಿಯಾಗುತ್ತಿದೆಯೇ? ಆದರೂ ಇದು ಸತ್ಯ.
ಜಪಾನಿನ ಫುಕೋಕಾದ ಅಡುಗೆ ಶಾಲೆಯ ವಿದ್ಯಾರ್ಥಿಗಳು ಇಂತಹ ವಿನೂತನ ಪ್ರಯತ್ನ ಮಾಡಿದ್ದಾರೆ. ಸುಮಾರು 30 ವಿದ್ಯಾರ್ಥಿಗಳ ತಂಡ 2 ಸಾವಿರಕ್ಕೂ ಅಧಿಕ ಬ್ರೆಡ್ ತುಂಡುಗಳನ್ನು ಬಳಸಿ 2.4 ಮೀಟರ್ ಎತ್ತರ ಮತ್ತು 1.5 ಮೀಟರ್ ಅಗಲದ ಮೋನಾಲಿಸಾ ಈ ಕಲಾಕೃತಿ ರಚನೆಗೆ ಶ್ರಮಿಸಿದೆ. ಇದೀಗ ಈ ಕಲಾಕೃತಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.