Monkeypox: ವಿಶ್ವದ ಹಲವು ದೇಶಗಳಲ್ಲಿ ಹರಡಿದ ಮಂಕಿಪಾಕ್ಸ್, ಭಾರತದ ವಿಮಾನ ನಿಲ್ದಾಣಗಳಲ್ಲಿಯೂ ಕೂಡ ಕಟ್ಟೆಚ್ಚರ
Monkeypox Virus Alert: ಮಂಕಿ ಪಾಕ್ಸ್ ಕಾಯಿಲೆ ಹಲವು ದೇಶಗಳಲ್ಲಿ ತನ್ನ ಪಾದ ಚಾಚುತ್ತಿದೆ. ಭಾರತದಲ್ಲಿ ಇದುವರೆಗೆ ಈ ಕಾಯಿಲೆಯ ಯಾವುದೇ ಪ್ರಕರಣ ಕಂಡುಬಂದಿಲ್ಲವಾದರೂ ಕೂಡ, ಕೇಂದ್ರ ಸರ್ಕಾರ ಸಂಪೂರ್ಣ ಕಟ್ಟೆಚ್ಚರವಹಿಸಿದೆ.
Monkeypox Cases Confirmed in 11 Countries: ವಿಶ್ವದ ಸುಮಾರು 11 ದೇಶಗಳಲ್ಲಿ ಮಂಕಿಪಾಕ್ಸ್ ಕಾಯಿಲೆಯ ಸುಮಾರು 80 ಪ್ರಕರಣಗಳು ದೃಢಪಟ್ಟಿದ್ದು, 50 ಪ್ರಕರಣಗಳು ತನಿಖೆಯ ಹಂತದಲ್ಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಪ್ಡೇಟ್ ಬಿಡುಗಡೆ ಮಾಡಿದೆ. ಡಬ್ಲೂಹೆಚ್ಓ ಪ್ರಕಾರ, ಮೇ 5 ರಂದು ಲಂಡನ್ ನಲ್ಲಿ ಮಂಕಿ ಪಾಕ್ಸ್ ಪ್ರಕರಣ ಪತ್ತೆಯಾಗಿತ್ತು. ಲಂಡನ್ ನಲ್ಲಿನ ಒಂದೇ ಕುಟುಂಬದ ಮೂವರು ಸದಸ್ಯರಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ಮೇ 13ರಂದು ವಿಶ್ವ ಆರೋಗ್ಯ ಸಂಸ್ಥೆಗೆ ಈ ಪ್ರಕರಣದ ಕುರಿತು ಮಾಹಿತಿ ನೀಡಲಾಗಿತ್ತು. ಇದೀಗ ಕ್ರಮೇಣ ಈ ಕಾಯಿಲೆ ವಿಶ್ವದ ಸುಮಾರು 11 ದೇಶಗಳಿಗೆ ಪಸರಿಸಿದೆ.
ಈ ದೇಶಗಳಿಗೆ ಹರಡಿದ ಮಂಕಿಪಾಕ್ಸ್
ಯುರೋಪಿಯನ್ ದೇಶಗಳಾಗಿರುವ ಬೆಲ್ಜಿಯಂ, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್ಲ್ಯಾಂಡ್, ಪೋರ್ಚುಗಲ್, ಸ್ಪೇನ್, ಸ್ವೀಡನ್ ಹಾಯಗೋ ಬ್ರಿಟನ್ ನಲ್ಲಿ ಮಂಕಿಪಾಕ್ಸ್ ವೈರಸ್ ಹರಡಿದೆ. ಇದಲ್ಲದೆ ಅಮೆರಿಕಾ, ಆಸ್ಟ್ರೇಲಿಯ ಹಾಗೂ ಕೆನಡಗಳಲ್ಲಿಯೂ ಕೂಡ ಹೆಚ್ಚಾಗುತ್ತಿರುವ ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆ ಚಿಂತೆಯನ್ನು ಹೆಚ್ಚಿಸಿವೆ. ಆದರೆ, ವಿಶ್ವ ಸಂಸ್ಥೆ ಇದುವರೆಗೆ ಈ ಕಾಯಿಲೆಯನ್ನು ಮಹಾಮಾರಿ ಎಂದು ಘೋಷಿಸಿಲ್ಲ. ಆದರೆ, ಕೋರೋನಾ ವೈರಸ್ ಗಿಂತ ಇದು ತೀರಾ ಭಿನ್ನವಾಗಿದೆ ಹಾಗೂ ಪ್ರಸ್ತುತ ಇದು ವ್ಯಾಪಕವಾಗಿ ಹರಡುವ ಸಾಧ್ಯತೆ ತುಂಬಾ ಕಡಿಮೆ ಎನ್ನಲಾಗಿದೆ.
ಈ ಕಾಯಿಲೆ ಹೇಗೆ ಹರಡುತ್ತದೆ?
ಇನ್ನೊಂದೆಡೆ, ವಿಶ್ವ ಆರೋಗ್ಯ ಸಂಸ್ಥೆ ಈ ಕಾಯಿಲೆಗೆ ಸಂಬಂಧಿಸಿದಂತೆ ತುರ್ತುಸಭೆ ನಡೆಸಿದೆ. ಈ ಕಾಯಿಲೆ ಸಾಮಾನ್ಯವಾಗಿ ಇಲಿ ಹಾಗೂ ಅಳಿಲುಗಳಂತಹ ಪ್ರಾಣಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆಫ್ರಿಕಾದಂತಹ ಮಳೆ ಹೆಚ್ಚಾಗುವ ಪ್ರದೇಶ ಮತ್ತು ದಟ್ಟಅರಣ್ಯ ಪ್ರದೇಶಗಳನ್ನು ಹೊಂದಿರುವ ದೇಶಗಳಲ್ಲಿ ಇದರ ಅತಿ ಹೆಚ್ಚು ಪ್ರಕರಣಗಳು ಕಂಡುಬರುತ್ತವೆ. ಈ ಕಾಯಿಲೆಯ ಮೊದಲ ಪ್ರಕರಣ 1970ರಲ್ಲಿ ಗುರುತಿಸಲಾಗಿತ್ತು.
ಇದನ್ನೂ ಓದಿ-ಕೇನ್ಸ್ ಚಿತ್ರೋತ್ಸವದಲ್ಲಿ ಕಿರುಚುತ್ತಾ ಫೋಟೋಗ್ರಾಫರ್ ಬಳಿ ಓಡಿಬಂದ ಉಕ್ರೇನ್ ಮಹಿಳೆ!
ಭಾರತದ ವಿಮಾನ ನಿಲ್ದಾಣಗಳಲ್ಲಿ ಅಲರ್ಟ್ ಘೋಷಣೆ
ಭಾರತದಲ್ಲಿ ಇದುವರೆಗೆ ಈ ಕಾಯಿಲೆಯ ಅಥವಾ ವೈರಸ್ ನ ಯಾವುದೇ ಪ್ರಕರಣ ವರದಿಯಾಗಿಲ್ಲ, ಆದರೆ ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ, ಆಫ್ರಿಕನ್ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ವಿಮಾನ ನಿಲ್ದಾಣದಲ್ಲಿ ನಿಗಾ ಇರಿಸಲಾಗುತ್ತಿದೆ, ಅಗತ್ಯ ಬಿದ್ದರೆ, ಅವರ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ತನಿಖೆಗಾಗಿ ಕಳುಹಿಸಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ-Guinness Record: 50 ವರ್ಷಗಳ ಕಾಲ ಬರ್ಗರ್ ತಿಂದು ವಿಶ್ವದಾಖಲೆ ಮಾಡಿದ ವ್ಯಕ್ತಿ
ಈ ರೋಗವನ್ನು ತಪ್ಪಿಸುವುದು ಹೇಗೆ?
ಮಂಕಿಪಾಕ್ಸ್ ವೈರಸ್ ಒಬ್ಬ ವ್ಯಕ್ತಿಗೆ ಹರಡಲು 5 ರಿಂದ 12 ದಿನಗಳ ಸಮಾಯಾವಕಾಶ ತೆಗೆದುಕೊಳ್ಳುತ್ತದೆ, ಈ ರೋಗವು ಸೋಂಕಿತ ಪ್ರಾಣಿಯಿಂದ ಹರಡಬಹುದು, ಇದಲ್ಲದೆ, ಸೋಂಕಿತ ವ್ಯಕ್ತಿಯ ಲಾಲಾರಸ ಅಥವಾ ಚರ್ಮದ ಸಂಪರ್ಕದಿಂದ ಇತರ ವ್ಯಕ್ತಿಗೆ ಈ ರೋಗ ಬರಬಹುದು, ಸಾಮಾನ್ಯವಾಗಿ 20 ದಿನಗಳೊಳಗೆ ಈ ಕಾಯಿಲೆ ತನ್ನಷ್ಟಕ್ಕೆ ತಾನೇ ವಾಸಿಯಾಗುತ್ತದೆ, ಕೆಲವು ಸಂದರ್ಭಗಳಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅಗತ್ಯ ಬೀಳುತ್ತದೆ. ಸಿಡುಬು ರೋಗದಂತೆ, ಮಂಗನ ಕಾಯಿಲೆಯ ರೋಗಿಯನ್ನೂ ಕೂಡ ಪ್ರತ್ಯೇಕವಾಗಿ ಇರಿಸಬೇಕಾಗುತ್ತದೆ. ಇದರಿಂದ ರೋಗವು ಇತರರಿಗೆ ಹರಡುವುದಿಲ್ಲ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.