ನವದೆಹಲಿ: 50 ವರ್ಷಗಳ ಹಿಂದೆ ಮಾನವ ತನ್ನ ಮೊದಲ ಹೆಜ್ಜೆಗಳನ್ನು ಚಂದ್ರನ ಮೇಲೆ ಮೂಡಿಸಿದ್ದ, ಈಗ ಮತ್ತೊಂದು ಹೊಸ ಅನ್ವೇಷಣೆಗೆ ಮುಂದಾಗಿದ್ದಾನೆ. ಅದೇನಂತೀರಾ ಹಾಗಾದ್ರೆ? 


COMMERCIAL BREAK
SCROLL TO CONTINUE READING

ಮಾನವ ಚಂದ್ರನ ಮೇಲೆ 2019ಕ್ಕೆ 4G ನೆಟ್ ವರ್ಕ್ ಕಲ್ಪಿಸುವ ಪ್ರಯತ್ನವನ್ನು ನಡೆಸಿದ್ದಾನೆ. ಇದಕ್ಕೆ ಪೂರಕವಾಗಿ ಖಾಸಗಿ ಮೊಬೈಲ್ ಕಂಪನಿಯಾದ ವೊಡಾಫೋನ್ ಈ ಸಾಹಸಕ್ಕೆ ಕೈ ಜೋಡಿಸಿದೆ ಎಂದು ತಿಳಿದುಬಂದಿದೆ. ಒಂದುವೇಳೆ ಎಲ್ಲವು ಅಂದುಕೊಂಡಂತೆ ನಡೆದರೆ ಮುಂದಿನ ವರ್ಷವೇ ಚಂದ್ರನು ಕೂಡಾ 4G ಸಂಪರ್ಕ ಪಡೆಯಲಿದ್ದಾನೆ.


ಈ ಕುರಿತಾಗಿ ಪ್ರತಿಕ್ರಯಿಸಿರುವ ವೊಡಾಫೋನ್ 2019ಕ್ಕೆ ಮಾನವ ಚಂದ್ರನ ಮೇಲೆ ಹೆಜ್ಜೆ ಇಟ್ಟು 50 ವರ್ಷಗಳನ್ನು ಪೂರೈಸುತ್ತಿರುವ ಹಿನ್ನಲೆಯಲ್ಲಿ ವೊಡಾಫೋನ್ ಮುಂದಿನ ವರ್ಷ 4G ಸಂಪರ್ಕವನ್ನು ವಿಜ್ಞಾನಿಗಳ ಸಹಾಯದೊಂದಿಗೆ ಕಲ್ಪಿಸಲಾಗುತ್ತಿದೆ. ಈ ವೊಡಾಫೋನ್ ನ ಪ್ರಯತ್ನಕ್ಕೆ  ನೋಕಿಯಾ ಕೂಡಾ ಪಾಲುದಾರ ಕಂಪನಿ ಎಂದು ಅದು ತಿಳಿಸಿದೆ.