ದುಬೈ: ಯುಎಇಯಲ್ಲಿ ಅವಿವಾಹಿತ ಮಗನ ಮರಣದ ಎಂಟು ವರ್ಷಗಳ ನಂತರ ಭಾರತೀಯ ಮಹಿಳೆಯೊಬ್ಬರಿಗೆ ಕರೆಯೊಂದು ಬಂದಿದೆ. ಈ ಮೂಲಕ ಅವರಿಗೆ ಲಕ್ಷಾಂತರ ರೂ. ಸಂಪತ್ತು ದೊರೆತಿದೆ. ವಾಸ್ತವವಾಗಿ, ಮೇರಿಕುಟ್ಟಿ ಥಾಮಸ್ ಎಂಬುವವರ 35 ವರ್ಷದ ಮಗ ಶಿನೋ ದುಬೈನಲ್ಲಿ ಉತ್ತಮ ಸಂಬಳದಲ್ಲಿ ಕೆಲಸದಲ್ಲಿದ್ದರು. ಶಿನೋ ಮರಣದ 8 ವರ್ಷಗಳ ನಂತರ, ಅವರ ಉಳಿತಾಯ ಕೇರಳದಲ್ಲಿದ್ದ ಅವರ ತಾಯಿಗೆ ದೊರೆತಿದೆ.


COMMERCIAL BREAK
SCROLL TO CONTINUE READING

ಗಲ್ಫ್ ನ್ಯೂಸ್ ಪ್ರಕಾರ, ಶಿನೋ ಅವರ ಹಿರಿಯ ಸಹೋದರ ಕಂಪನಿಯೊಂದಿಗೆ ಸಂಪರ್ಕದಲ್ಲಿದ್ದರು, ಕಳೆದ ವರ್ಷ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದರಿಂದ ಆಘಾತಕ್ಕೊಳಗಾಗಿದ್ದ ಮೇರಿಕುಟ್ಟಿ ಥಾಮಸ್ ಅಗತ್ಯವಾದ ಕಾಗದದ ಕೆಲಸಗಳನ್ನು ಸಹ ಮಾಡಲು ಸಾಧ್ಯವಾಗಿರಲಿಲ್ಲ. ದುಬೈನಲ್ಲಿ ವಿಲ್ ಬರೆಯುವ ಕಂಪನಿಯೊಂದು ಮಗ ತಾಯಿಗಾಗಿ ಬಿಟ್ಟು ಹೋದ ಆಸ್ತಿಯನ್ನು ಅವರಿಗೆ ತಲುಪಿಸಿದೆ. ಮಗ ಒಟ್ಟು 75 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ತಾಯಿಗೆ ವಿಲ್ ಮಾಡಿದ್ದು ಅದರಲ್ಲಿ 33 ಲಕ್ಷ ಶೇರ್ ಮಾಡಲಾಗಿದೆ.


ನಿವೃತ್ತ ನರ್ಸ್ ಆಗಿರುವ ಮೇರಿಕುಟ್ಟಿ ಥಾಮಸ್, "ಇದು ದೊಡ್ಡ ಪ್ರಮಾಣದ ಮೊತ್ತ ಎಂಬುದು ಮಾತ್ರವಲ್ಲ, ಅದು ನನ್ನ ಮಗನ ಕಠಿಣ ಪರಿಶ್ರಮದ ಸಂಪಾದನೆಯಾಗಿದೆ". ನನ್ನ ಮಗನ ಹಣವನ್ನು ಉಳಿಸುವ ಬಗ್ಗೆ ತನಗೆ ತಿಳಿದಿತ್ತು, ಆದರೆ ಸಾಧನೆಯ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದರು.