ನವದೆಹಲಿ: ಕಠಿಣ ಸಂದೇಶವೊಂದರಲ್ಲಿ, ಯಾವುದೇ "ಪ್ರತೀಕಾರದ ಆಕ್ರಮಣಶೀಲತೆ" ಯತ್ತ ಗಮನ ಹರಿಸುವ ಬದಲು ತವರು ನೆಲದಲ್ಲಿ ಭಯೋತ್ಪಾದನೆ ವಿರುದ್ಧ  ಕ್ರಮ ಕೈಗೊಳ್ಳುವಂತೆ ಯುನೈಟೆಡ್ ಸ್ಟೇಟ್ಸ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.


COMMERCIAL BREAK
SCROLL TO CONTINUE READING

ಇಸ್ಲಾಮಾಬಾದ್ ರಾಜತಾಂತ್ರಿಕ ಸಂಬಂಧಗಳನ್ನು ಕೆಳಮಟ್ಟಕ್ಕಿಳಿಸಿ ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸಿದ ಕೆಲವೇ ಗಂಟೆಗಳ ನಂತರ ಯುಎಸ್ ಈ ಹೇಳಿಕೆ ನೀಡಿದೆ. ಭಾರತ, ನರೇಂದ್ರ ಮೋದಿ ಸರ್ಕಾರವು ಆರ್ಟಿಕಲ್ 370, ಆರ್ಟಿಕಲ್ 35 ಎ ಅನ್ನು ರದ್ದುಗೊಳಿಸಿದ ನಂತರ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ (ಯುಟಿ) ವಿಭಜಿಸಿತು.


ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ವಿಷಯದಲ್ಲಿ, ಇದು ಆಂತರಿಕ ವಿಷಯ  ಮತ್ತು ಅದರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನರೇಂದ್ರ ಮೋದಿ ಸರ್ಕಾರ ಸ್ಪಷ್ಟಪಡಿಸಿದೆ.


ಯುಎಸ್ ಹೌಸ್ ವಿದೇಶಾಂಗ ವ್ಯವಹಾರಗಳ ಸಮಿತಿಯು ಹೌಸ್ ಫಾರಿನ್ ಅಫೇರ್ಸ್ ಕಮಿಟಿಯ ಅಧ್ಯಕ್ಷ ಎಲಿಯಟ್ ಎಲ್ ಎಂಗಲ್ ಮತ್ತು ಸೆನೆಟ್ ವಿದೇಶ ಸಂಬಂಧಗಳ ಸಮಿತಿಯ ರ್ಯಾಂಕಿಂಗ್ ಸದಸ್ಯ ಸೆನೆಟರ್ ಬಾಬ್ ಮೆನೆಂಡೆಜ್ ಅವರ ಜಂಟಿ ಹೇಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿದೆ.


“ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿ, ಸಭೆ ಸ್ವಾತಂತ್ರ್ಯ, ಮಾಹಿತಿಯ ಪ್ರವೇಶ, ಮತ್ತು ಕಾನೂನಿನ ಅಡಿಯಲ್ಲಿ ಸಮಾನ ರಕ್ಷಣೆ ಸೇರಿದಂತೆ ಸಮಾನ ಹಕ್ಕುಗಳನ್ನು ರಕ್ಷಿಸುವ ಮತ್ತು ಉತ್ತೇಜಿಸುವ ಮಹತ್ವವನ್ನು ತನ್ನ ಎಲ್ಲ ನಾಗರಿಕರಿಗೆ ಪ್ರದರ್ಶಿಸಲು ಭಾರತಕ್ಕೆ ಅವಕಾಶವಿದೆ. ಪಾರದರ್ಶಕತೆ ಮತ್ತು ರಾಜಕೀಯ ಭಾಗವಹಿಸುವಿಕೆಯು ಪ್ರತಿನಿಧಿ ಪ್ರಜಾಪ್ರಭುತ್ವಗಳ ಮೂಲಾಧಾರವಾಗಿದೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಸರ್ಕಾರವು ಈ ತತ್ವಗಳಿಗೆ ಬದ್ಧವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಇದರಲ್ಲಿ ಹೇಳಲಾಗಿದೆ.



"ಅದೇ ಸಮಯದಲ್ಲಿ ಪಾಕಿಸ್ತಾನವು ಯಾವುದೇ ಪ್ರತೀಕಾರದ ಆಕ್ರಮಣದಿಂದ ದೂರವಿರಬೇಕು-ನಿಯಂತ್ರಣ ರೇಖೆಯಾದ್ಯಂತ ಒಳನುಸುಳುವಿಕೆಗೆ ಬೆಂಬಲ ನೀಡುವುದನ್ನು ಸ್ಥಗಿತಗೊಳಿಸಬೇಕು ಮತ್ತು ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು" ಎಂದು ಹೇಳಿಕೆ ನೀಡಿದೆ.


ಈ ವಾರದ ಆರಂಭದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ರದ್ದುಪಡಿಸಿತು. ಜಮ್ಮು ಮತ್ತು ಕಾಶ್ಮೀರ (ಮರುಸಂಘಟನೆ) ಮಸೂದೆ 2019 ಅನ್ನು ಕೇಂದ್ರವು ಅಂಗೀಕರಿಸಿತು, ಇದು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿತು - ಜಮ್ಮು ಮತ್ತು ಕಾಶ್ಮೀರ (ವಿಧಾನಸಭೆಯೊಂದಿಗೆ) ಮತ್ತು ಲಡಾಖ್ (ವಿಧಾನಸಭೆ ರಹಿತ) ಕೇಂದ್ರಾಡಳಿತ ಪ್ರದೇಶವಾಗಿವೆ.