ನವದೆಹಲಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಶನಿವಾರ, ತನ್ನನ್ನು ಕೊಲ್ಲಲು ಸಂಚು ರೂಪಿಸಲಾಗುತ್ತಿದೆ ಮತ್ತು ತನ್ನ ಸರ್ಕಾರವನ್ನು ಪದಚ್ಯುತಗೊಳಿಸುವ ಸಂಚಿನಲ್ಲಿ ಭಾಗಿಯಾಗಿರುವ ಎಲ್ಲ ಜನರ ಹೆಸರನ್ನು ಹೊಂದಿರುವ ವೀಡಿಯೊವನ್ನು ರೆಕಾರ್ಡ್ ಮಾಡಿದ್ದೇನೆ ಎಂದು ಹೇಳಿದ್ದಾರೆ. ಅವರಿಗೆ ಏನಾದರೂ ಸಂಭವಿಸಿದರೆ ವೀಡಿಯೊವನ್ನು ಸಾರ್ವಜನಿಕಗೊಳಿಸಲಾಗುವುದು ಎಂದು ಖಾನ್ ಹೇಳಿದರು.


COMMERCIAL BREAK
SCROLL TO CONTINUE READING

ಸಿಯಾಲ್‌ಕೋಟ್‌ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್ ಈ ಹೇಳಿಕೆಗಳನ್ನು ನೀಡಿದ್ದಾರೆ."ಪಾಕಿಸ್ತಾನ ಮತ್ತು ವಿದೇಶದಲ್ಲಿರುವ ಜನರು ನನ್ನನ್ನು ಕೊಲ್ಲಲು ಯೋಜಿಸುತ್ತಿದ್ದಾರೆಂದು ನನಗೆ ತಿಳಿದಿದೆ. ನನ್ನ ವಿರುದ್ಧದ ಪಿತೂರಿಯ ಸಂಪೂರ್ಣ ವಿವರಗಳೊಂದಿಗೆ ನಾನು ವೀಡಿಯೊವನ್ನು ಎಲ್ಲಾ ಹೆಸರುಗಳೊಂದಿಗೆ ರೆಕಾರ್ಡ್ ಮಾಡಿದ್ದೇನೆ ಮತ್ತು ವೀಡಿಯೊವನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಿದ್ದೇನೆ." ಎಂದು ಅವರು ಹೇಳಿದರು.


ಇದನ್ನೂ ಓದಿ-World War: ಮಹಾಯುದ್ಧ ಆರಂಭದ ಸಂಕೇತವೇ ಇದು! ಉಕ್ರೇನ್-ರಷ್ಯಾ ಯುದ್ಧದಲ್ಲಿ ಯಾರು ಯಾರಿಗೆ ಸಾಥ್? ಇಲ್ಲದೆ ಡಿಟೇಲ್ಸ್


'ನನ್ನ ವಿರುದ್ಧ ವಿದೇಶದಲ್ಲಿ ಮತ್ತು ಪಾಕಿಸ್ತಾನದಲ್ಲಿ ನನ್ನನ್ನು ಕೊಲ್ಲಲು ಸಂಚು ರೂಪಿಸಲಾಗುತ್ತಿದೆ. ನನ್ನ ಹತ್ಯೆಗೆ ಯಾರು ಯೋಜನೆ ಹಾಕಿದ್ದಾರೆಂದು ನನಗೆ ತಿಳಿದಿದೆ. ನನ್ನನ್ನು ಕೊಂದರೆ ಈ ವೀಡಿಯೊವನ್ನು ಸಾರ್ವಜನಿಕಗೊಳಿಸಲಾಗುವುದು'ಎಂದು ಅವರು ಹೇಳಿದರು.


ಅಧಿಕಾರಕ್ಕೆ ತಂದ ಕಳ್ಳರು ಪ್ರತಿಯೊಂದು ಸಂಸ್ಥೆ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ನಾಶಪಡಿಸಿದ್ದಾರೆ ಎಂದು ಹೇಳಿದ ಅವರು, ಈಗ ಯಾವ ಸರ್ಕಾರಿ ಅಧಿಕಾರಿ "ಈ ಅಪರಾಧಿಗಳ" ಪ್ರಕರಣಗಳನ್ನು ತನಿಖೆ ಮಾಡುತ್ತಾರೆ ಎಂದು ಕೇಳಿದರು.ಇಮ್ರಾನ್ ಖಾನ್ ಅವರು ಸರ್ಕಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಭಾಷಣ ಮಾಡುವ ಮೂಲಕ ಪಾಕಿಸ್ತಾನದ ಜನರ ಮನಸ್ಸನ್ನು ವಿಷಪೂರಿತಗೊಳಿಸುತ್ತಿದ್ದಾರೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.


ಇದನ್ನೂ ಓದಿ-Pfizer On COVID-19: 2024ರವರೆಗೆ ಬೆನ್ನು ಬಿಡಲ್ಲ ಕೊರೊನಾ, ಫೈಜರ್ ಕಂಪನಿಯ ಭವಿಷ್ಯವಾಣಿ


ಮೇ 20 ರಂದು ನಡೆಯಲಿರುವ ಲಾಂಗ್ ಮಾರ್ಚ್‌ನಲ್ಲಿ ಫೆಡರಲ್ ರಾಜಧಾನಿಗೆ ಪ್ರವೇಶಿಸುವುದನ್ನು ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ ಎಂದು ಇಮ್ರಾನ್ ಖಾನ್ ಶೆಹಬಾಜ್ ಷರೀಫ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.


ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ನೇತೃತ್ವದ ಫೆಡರಲ್ ಸರ್ಕಾರಕ್ಕೆ ಅವರು ಎರಡು ಮಿಲಿಯನ್ ಜನರು ನಿಜವಾದ ಸ್ವಾತಂತ್ರ್ಯವನ್ನು ಪಡೆಯಲು ಇಸ್ಲಾಮಾಬಾದ್ ತಲುಪುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.ತಾಪಮಾನ ಹೆಚ್ಚಾದರೆ ಜನ ಹೊರಗೆ ಬರುವುದಿಲ್ಲ ಎಂದು ನಮ್ಮ ವಿರೋಧಿಗಳು ಹೇಳುತ್ತಾರೆ, ಎಷ್ಟು ಕಂಟೈನರ್‌ಗಳನ್ನು ಬೇಕಾದರೂ ಹಾಕಿ, ಆದರೆ 2 ಮಿಲಿಯನ್ ಜನರು ಇಸ್ಲಾಮಾಬಾದ್‌ಗೆ ಬರುತ್ತಾರೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.