ವಾಷಿಂಗ್ಟನ್: ಏಲಿಯನ್‌ಗಳು ಈಗಾಗಲೇ ಭೂಮಿಗೆ ಬಂದಿರಬಹುದು, ಆದರೆ ಅದನ್ನು ನಾವು ಗಮನಿಸಿಲ್ಲ ಎಂದು ನಾಸಾದ ವಿಜ್ಞಾನಿಯೊಬ್ಬರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನಾಸಾದ ಎಮ್ಸ್ ರಿಸರ್ಚ್ ಸೆಂಟರ್ ನ ಕಂಪ್ಯೂಟರ್ ವಿಜ್ಞಾನಿ ಮತ್ತು ಪ್ರೊಫೆಸರ್ ಸಿಲ್ವನೋ ಪಿ ಕೊಲೊಂಬನೋ ತಮ್ಮ ಸಂಶೋಧನಾ ಪತ್ರಿಕೆಯಲ್ಲಿ ಏಲಿಯನ್'ಗಳ ಬಗ್ಗೆ ವಿವರಣೆ ನೀಡಿದ್ದಾರೆ. ಮಾನವನ ಕಲ್ಪನೆಗಿಂತಲೂ ಏಲಿಯನ್ ಗಳು ವಿಭಿನ್ನವಾಗಿದ್ದು, ನಾವಂದುಕೊಂಡಂತೆ ಕಾರ್ಬನ್‌ ಆಧಾರಿತ ಜೀವಿಗಳಲ್ಲ ಎಂದಿದ್ದಾರೆ.


ಏಲಿಯನ್‌ಗಳು ಗಾತ್ರದಲ್ಲಿ ಸಣ್ಣದಾಗಿದ್ದರೂ, ಅತೀ ಬುದ್ದಿಮತ್ತೆಯಿಂದ ಕೂಡಿವೆ ಎನ್ನಲಾಗಿದೆ. ಹಾಗಾಗಿ "ನಾವು ಯಾವ ರೀತಿಯ ಉನ್ನತ ಕಲ್ಪನೆಗಳು ಮತ್ತು ತಂತ್ರಜ್ಞಾನದ ಬಗೆಗಿನ ಹೊಸ ಆಲೋಚನೆಗಳನ್ನು ಅಳವಡಿಸಿಕೊಂಡರೆ, ನಿರ್ದಿಷ್ಟ ಸಿದ್ಧಾಂತಗಳಿಗೆ ಅನುಗುಣವಾಗಿ ಕೆಲವು ವಿದ್ಯಮಾನಗಳ ಬಗ್ಗೆ ಸೂಕ್ಷ್ಮವಾಗಿ ಸಂಶೋಧನೆ ಆರಂಭಿಸಬಹುದು ಎಂದು ಸಿಲ್ವನೋ ಹೇಳಿದ್ದಾರೆ.