ಭೂಮಿಯಿಂದ ಶತಕೋಟಿ ಮೈಲುಗಳ ಅಂತರದಲ್ಲಿ ಪ್ರಯಾಣಿಸುತ್ತಿದ್ದ ವಾಯೇಜರ್ 1 ಗಗನನೌಕೆಯನ್ನು 37 ವರ್ಷಗಳಲ್ಲಿ ಮೊದಲ ಬಾರಿಗೆ ಶುಕ್ರವಾರ ನಾಸಾ ಯಶಸ್ವಿಯಾಗಿ ತನ್ನ ಕಕ್ಷೆಗೆ ಹಿಂತಿರುಗುವಂತೆ ಮಾಡಿದೆ.  


COMMERCIAL BREAK
SCROLL TO CONTINUE READING

ನಮ್ಮ ಸೌರವ್ಯೂಹದ ಅಧ್ಯಯನಕ್ಕಾಗಿ 1977ರ ಸೆಪ್ಟೆಂಬರ್ 5ರಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ, ಫ್ಲೋರಿಡಾ ಉಡ್ಡಯನ ಕೇಂದ್ರದಿಂದ 'ವಾಯೇಜರ್-1' ಎಂಬ ಹೆಸರಿನ, ಸುಮಾರು 722 ಕೆ.ಜಿ. ತೂಕದ ಗಗನ ನೌಕೆಯೊಂದನ್ನು ಹಾರಿ ಬಿಟ್ಟಿತ್ತು. 


ಇದು 2012ರ ನವೆಂಬರ್ ವರೆಗೆ ಭೂಮಿಯ ನಿಯಂತ್ರಣ ಕೇಂದ್ರದಿಂದ ಕಮಾಂಡ್‌ಗಳನ್ನು ಯಶಸ್ವಿಯಾಗಿ ಪಡೆಯುತ್ತಿತ್ತು.ಸೌರವ್ಯೂಹದ ಮತ್ತು ಅದರ ಆಚೆಗಿನ ಸಾಕಷ್ಟು ಮಾಹಿತಿ ಯನ್ನು ಚಿತ್ರ ಸಹಿತ ಭೂಮಿಯಲ್ಲಿರುವ ನಿಯಂತ್ರಣ ಘಟಕಕ್ಕೆ ರವಾನಿಸುತ್ತಿತ್ತು.


ಆದರೆ, ನವೆಂಬರ್ ನಂತರ ಗಗನ ನೌಕೆ ಯಾವುದೋ ಅಜ್ಞಾತ ಸ್ಥಳ ಅಥವಾ ತಾರಾವ್ಯೂಹಕ್ಕೆ ಪ್ರವೇಶಿದೆ ಎಂದು ನಂಬಲಾಗಿತ್ತು. ಆದರೀಗ ವಿಜ್ಞಾನಿಗಳು "ವಾಯೇಜರ್-1 ಗಗನ ನೌಕೆ ಇನ್ನೂ ಸೌರವ್ಯೂಹದಲ್ಲೇ ಇದೆ, ಅದು ಅಲ್ಲಿಂದ ಬೇರೆಲ್ಲಿಯೂ ಹೋಗಿಲ್ಲ, ಯಾವ ಅಂತರ ತಾರಾ ವಲಯವನ್ನೂ ಪ್ರವೇಶಿಸಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.