ತಮ್ಮ ಪಕ್ಷದಿಂದಲೇ ಹೊರ ಹಾಕಲ್ಪಟ್ಟ Nepal PM KP Sharma Oli
Nepal PM KP Sharma Oli Removed From His Party - ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ ಮತ್ತು ಕಮ್ಯುನಿಸ್ಟ್ ಪಕ್ಷವು ಎರಡು ತುಂಡುಗಳಾಗಿ ವಿಭಜನೆಯಾಗುತ್ತಿದೆ ಎಂಬ ಊಹಾಪೋಹಗಳ ನಡುವೆ, ಎದುರಾಳಿ ಬಣವು ಹಂಗಾಮಿ ಪ್ರಧಾನಿ ಕೆ.ಪಿ.ಶರ್ಮಾ ಒಲಿಯನ್ನು ಉಚ್ಚಾಟಿಸಿರುವುದಾಗಿ ಘೋಷಿಸಿದೆ.
Nepal PM KP Sharma Oli - ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ ಮತ್ತು ಕಮ್ಯುನಿಸ್ಟ್ ಪಕ್ಷವು ಎರಡು ತುಂಡುಗಳಾಗಿ ವಿಭಜನೆಯಾಗುತ್ತಿದೆ ಎಂಬ ಊಹಾಪೋಹಗಳ ನಡುವೆ, ಎದುರಾಳಿ ಬಣವು ಹಂಗಾಮಿ ಪ್ರಧಾನಿ ಕೆ.ಪಿ.ಶರ್ಮಾ ಒಲಿಯನ್ನು ಉಚ್ಚಾಟಿಸಿರುವುದಾಗಿ ಘೋಷಿಸಿದೆ. ಪುಷ್ಪ್ ಕಮಲ್ ದಹಲ್ ಉರ್ಫ್ ಪ್ರಚಂಡ್ ನೇತೃತ್ವದ ಬಣದ ವಲಯ ಸಮಿತಿಯ ಸಭೆಯಲ್ಲಿ ಓಲಿಗೆ ಪಕ್ಷದಿಂದ ಹೊರಹೋಗುವ ಮಾರ್ಗವನ್ನು ತೋರಿಸಲಾಗಿದೆ. ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ಎದುರಾಳಿ ಬಣದ ವಕ್ತಾರ ನಾರಾಯಣ್ ಕಾಜಿ ಶ್ರೇಷ್ಠಾ, "ಅವರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ" ಎಂದು ಹೇಳಿದ್ದಾರೆ. ಕಳೆದ ವರ್ಷ ಡಿಸೆಂಬರ್ 22 ರಂದು ಓಲಿಯನ್ನು ಕಮ್ಯುನಿಸ್ಟ್ ಪಕ್ಷದ ಸಹ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿತು.
ಕಳೆದ ಶುಕ್ರವಾರವಷ್ಟೇ ಎದುರಾಳಿ ಬನದ ನಾಯಕರು ಒಲಿಯ ಸದಸ್ಯತ್ವವನ್ನು ರದ್ದುಪಡಿಸುವುದಾಗಿ ಬೆದರಿಕೆ ಹಾಕಿದ್ದರು. ವಿರೋಧಿ ಬಣದ ನಾಯಕರು ಹಾಗೂ ಕಾರ್ಯಕರ್ತರು ಒಂದೇ ತಿಂಗಳಿನಲ್ಲಿ ಎರಡು ಬಾರಿ ಒಲಿ ವಿರುದ್ಧ ಬೀದಿಗಿಳಿದಿದ್ದರು. ಕಳೆದ ವರ್ಷ ಸಂಸತ್ತನ್ನು ವಿಸರ್ಜಿಸುವ ಕುರಿತು ಒಲಿ ನೀಡಿದ್ದ ಹೇಳಿಕೆಯಿಂದ ಅವರು ಅಸಮಾಧಾನಗೊಂಡಿದ್ದಾರೆ. ಸಂಸತ್ತನ್ನು ವಿಸರ್ಜಿಸಿ ಈ ವರ್ಷದ ಮೇ ತಿಂಗಳಿನಲ್ಲಿ ಚುನಾವಣೆ ನಡೆಸುವುದಾಗಿ ಒಲಿ ಘೋಷಿಸಿದ್ದಾರೆ. ಒಲಿ ಅವರ ಈ ನಿರ್ಧಾರಕ್ಕೆ ನೇಪಾಲದ ರಾಷ್ಟ್ರಪತಿ ವಿದ್ಯಾ ದೇವಿ ಭಂಡಾರಿ ಮುದ್ರೆ ಒತ್ತಿದ್ದರು.
ಇದನ್ನು ಓದಿ-'ಅಸಲಿ ಅಯೋಧ್ಯೆ' ಹೇಳಿಕೆ ನೀಡಿ ಸಿಲುಕಿಕೊಂಡ PM ಓಲಿ, ನೇಪಾಳದ ವಿದೇಶಾಂಗ ಸಚಿವಾಲಯ ಹೇಳಿದ್ದೇನು ಗೊತ್ತಾ..?
ಪುಷ್ಪ ಕಮಲ್ ದಾಹಲ್ 'ಪ್ರಚಂಡ' ಶುಕ್ರವಾರ ಸರ್ಕಾರವನ್ನು ವಿರೋಧಿಸಿ ಬೃಹತ್ ಜಾಥಾ ನಡೆಸಿದ ಬಳಿಕ ಮಾತನಾಡಿ. ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು ಸಂಸತ್ತನ್ನು ಅಕ್ರಮವಾಗಿ ವಿಸರ್ಜಿಸಿರುವುದು ದೇಶ ಸಾಧಿಸಿದ ಫೆಡರಲ್ ಡೆಮಾಕ್ರಟಿಕ್ ರಿಪಬ್ಲಿಕ್ ವ್ಯವಸ್ಥೆಗೆ ಗಂಭೀರ ಅಪಾಯವನ್ನುಂಟುಮಾಡಿದೆ ಎಂದಿದ್ದರು. ನೇಪಾಳ ಕಮ್ಯುನಿಸ್ಟ್ ಪಕ್ಷ (NCP) ತನ್ನ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ್ದ ಪ್ರಚಂಡ್, ಓಲಿ ಅವರು ಪಕ್ಷದ ಸಂವಿಧಾನ ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಿರುವುದಲ್ಲದೆ, ನೇಪಾಳದ ಸಂವಿಧಾನದ ಘನತೆಗೆ ಧಕ್ಕೆ ತಂದಿದ್ದಾರೆ ಮತ್ತು ಪ್ರಜಾಪ್ರಭುತ್ವ ಗಣರಾಜ್ಯ ವ್ಯವಸ್ಥೆಯ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನು ಓದಿ-Nepal PM Oli ಹೇಳುವ 'ಅಯೋಧ್ಯೆ'ಯ ವಾಸ್ತವಿಕತೆ ಏನು? ಇಲ್ಲಿದೆ ಸಂಶೋಧಕರ ಅಭಿಪ್ರಾಯ
ಒಲಿ ಅವರ ಸಿಪಿಏನ್-ಯುಎಂಎಲ್ ಹಾಗೂ ದಾಹಲ್ ಅವರ ಪಕ್ಷ ಸಿಪಿಎಲ್ (ಮಾವೋವಾದಿ) ಒಂದಾಗಿ ನೇಪಾಳದಲ್ಲಿ ಕಮ್ಯೂನಿಷ್ಟ ಪಕ್ಷ ಅಸ್ತಿತ್ವಕ್ಕೆ ಬಂದಿದೆ ಎಂಬುದು ಇಲ್ಲಿ ಗಮನಾರ್ಹ. ಈ ಎರಡೂ ಪಕ್ಷಗಳು ಸೈದ್ಧಾಂತಿಕವಾಗಿ ಭಿನ್ನವಾದ ಕಾರಣ ಈ ವಿಲೀನ ಹೆಚ್ಚು ಕಾಲ ಉಳಿಯುವದಿಲ್ಲ ಎಂಬ ಮಾತುಗಳು ಆರಂಭದಿಂದಲೇ ಕೇಳಿಬಂದಿದ್ದವು. ಇದಾದ ಎರಡು ವರ್ಷಗಳ ಬಳಿಕವೇ ಇದೀಗ ಮತ್ತೆ ಪಕ್ಷ ಇಬ್ಭಾಗವಾಗುವ ಎಲ್ಲ ಲಕ್ಷಣಗಳು ಗೋಚರಿಸತೊಡಗಿವೆ.
ಇದನ್ನು ಓದಿ-ಶ್ರೀ ರಾಮಚಂದ್ರ ಭಾರತೀಯನಲ್ಲ... ನೇಪಾಳಿಯಾಗಿದ್ದ, Nepal PM ಓಲಿಯಿಂದ ವಿವಾದಾತ್ಮಕ ಹೇಳಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.